ಎಲ್ಲರ ಚಿತ್ತ ಜಾಝ್‌ನತ್ತ; ಮತ್ಯಾಕೆ ತಡ ನೋಡೇ ಬಿಡಿ!

By Nagaraja

2014 ಇಂಡಿಯಾ ಆಟೋ ಎಕ್ಸ್‌ ಪೋದಲ್ಲಿ ಅತಿ ಹೆಚ್ಚು ಬೇಡಿಕೆಯನ್ನು ಗಿಟ್ಟಿಸಿಕೊಂಡ ಕಾರುಗಳ ಪೈಕಿ 2014 ಹೋಂಡಾ ಜಾಝ್ ಕೂಡಾ ಒಂದಾಗಿದೆ. ಈಗಾಗಲೇ ತವರೂರಾದ ಜಪಾನ್‌ನಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಮೂರನೇ ಜನಾಂಗದ ಹೋಂಡಾ ಜಾಝ್ ರಾಷ್ಟ್ರ ರಾಜಧಾನಿಯಲ್ಲಿ ಸಾಗುತ್ತಿರುವ 2014 ಆಟೋ ಎಕ್ಸ್ ಪೋದಲ್ಲೂ ಭರ್ಜರಿ ಪ್ರದರ್ಶನ ಕಂಡಿದೆ.

2014 ಆಟೋ ಎಕ್ಸ್ ಪೋ

ಇದೇ ಸಂದರ್ಭದಲ್ಲಿ ಹೋಂಡಾ ಮೊಬಿಲಿಯೊ ಎಂಪಿವಿ ಕಾರನ್ನು ಸಹ ಅನಾವರಣಗೊಳಿಸಲಾಗಿತ್ತು. ಈ ಎರಡು ಕಾರುಗಳು 2014-15ರ ಸಾಲಿನಲ್ಲೇ ದೇಶದ ಮಾರುಕಟ್ಟೆ ಪ್ರವೇಶಿಸಲಿದೆ.

ಎಲ್ಲರ ಚಿತ್ತ ಜಾಝ್‌ನತ್ತ; ಮತ್ಯಾಕೆ ತಡ ನೋಡೇ ಬಿಡಿ!

ಹೋಂಡಾದ ನೂತನ ಫ್ಲೆಕ್ಸಿಬಲ್ ಕಾರ್ಗೊ ಕೆಪಬಿಲಿಟಿ ಮತ್ತು ಫನ್ ಟು ಡ್ರೈವ್ ಸಿದ್ಧಾಂತದ ಅಡಿಯಲ್ಲಿ ನೂತನ ಜಾಝ್ ಅಭಿವೃದ್ಧಿಪಡಿಸಲಾಗಿದೆ. ಹೆಚ್ಚು ಕಾರಿನೊಳಗೆ ಹೆಚ್ಚು ಸ್ಥಳಾವಕಾಶವನ್ನು ಒದಗಿಸಲಿದೆ.

ಎಲ್ಲರ ಚಿತ್ತ ಜಾಝ್‌ನತ್ತ; ಮತ್ಯಾಕೆ ತಡ ನೋಡೇ ಬಿಡಿ!

ಭಾರತದಲ್ಲಿ 2014 ಹೋಂಡಾ ಜಾಝ್ ಪೆಟ್ರೋಲ್ ಜತೆಗೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಇದರ ಪೆಟ್ರೋಲ್ ಎಂಜಿನ್, 88 ಅಶ್ವಶಕ್ತಿ ಉತ್ಪಾದಿಸಬಲ್ಲ (109 ಎನ್‌ಎಂ ಟಾರ್ಕ್) 1.2 ಲೀಟರ್ ಐ-ವಿಟೆಕ್ ಫೋರ್ ಸಿಲಿಂಡರ್ ಹೊಂದಿರಲಿದೆ. ಇದು ಬ್ರಿಯೊದಲ್ಲಿರುವುದಕ್ಕೆ ಸಮಾನವಾಗಿದೆ.

ಎಲ್ಲರ ಚಿತ್ತ ಜಾಝ್‌ನತ್ತ; ಮತ್ಯಾಕೆ ತಡ ನೋಡೇ ಬಿಡಿ!

ಅದೇ ರೀತಿ 100 ಪಿಎಸ್ ಪವರ್ ಉತ್ಪಾದಿಸಬಲ್ಲ (200 ಎನ್‌ಎಂ ಟಾರ್ಕ್) 1.5 ಲೀಟರ್ ಐ-ಡಿಟೆಕ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.

ಎಲ್ಲರ ಚಿತ್ತ ಜಾಝ್‌ನತ್ತ; ಮತ್ಯಾಕೆ ತಡ ನೋಡೇ ಬಿಡಿ!

ಇನ್ನು ಈಗಾಗಲೇ ಅಮೇಜ್ (25.8 km/l) ಹಾಗೂ ಸಿಟಿ (26 km/l) ಮುಖಾಂತರ ಸಾಮರ್ಥ್ಯ ಪ್ರದರ್ಶಿಸಿರುವ ಹೋಂಡಾ, ಜಾಝ್ ಮುಖಾಂತರವೂ ಗರಿಷ್ಠ ಇಂಧನ ಕ್ಷಮತೆ ನೀಡುವಲ್ಲಿ ಯಶಸ್ವಿಯಾಗಲಿದೆ.

ಎಲ್ಲರ ಚಿತ್ತ ಜಾಝ್‌ನತ್ತ; ಮತ್ಯಾಕೆ ತಡ ನೋಡೇ ಬಿಡಿ!

ವರದಿಗಳ ಪ್ರಕಾರ ನೂತನ ಜಾಝ್ ಭಾರತ ಮಾರುಕಟ್ಟೆಯನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಪ್ರವೇಶಿಸಲಿದೆ.

Article Published On: Friday, February 7, 2014, 17:27 [IST]
English summary
Honda unveils third generation Jazz at 2014 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+