ಭಾರತೀಯರು ವಂಚಿತ; ಹೋಂಡಾ ವೆಜೆಲ್‌ಗೆ ಭಾರಿ ಡಿಮ್ಯಾಂಡ್

Written By:

ಇತ್ತೀಚೆಗಷ್ಟೇ ಹೋಂಡಾ ವೆಜೆಲ್ ಭಾರತ ಪ್ರವೇಶವಿಲ್ಲ ಎಂಬುದರ ಕುರಿತಾಗಿನ ಲೇಖನವೊಂದನ್ನು ಪ್ರಕಟಿಸಿದ್ದೆವು. ಇದರ ಬೆನ್ನಲ್ಲೇ ದೇಶದ ವಾಹನ ಪ್ರೇಮಿಗಳಿಗೆ ಮಗದೊಂದು ಕಹಿ ಸುದ್ದಿ ಸಮೀಪಿಸಿದ್ದು, ತವರೂರಾದ ಜಪಾನ್‌ನಲ್ಲಿ ಈ ಕ್ರಾಸೋವರ್ ಕಾರಿ ಭಾರಿ ಬೇಡಿಕೆ ಕಂಡುಬರುತ್ತಿದೆ.

ಭಾರತದಲ್ಲೇ ಹೋಂಡಾ ಬ್ರಿಯೊ ಕ್ರಾಸೋವರ್ ನಿರ್ಮಾಣ?

ಇದು ನಿಜಕ್ಕೂ ಭಾರತ ಕಾರು ಆಕಾಂಕ್ಷಿಗಳನ್ನು ನಿರಾಸೆಗೊಳಪಡಿಸಿದೆ. ಜಪಾನ್‌ನಲ್ಲಿ ಬಿಡುಗಡೆಗೊಂಡ 24 ದಿನಗಳಲ್ಲೇ ಮ್ಯಾಜಿಕ್ ಮಾಡಿರುವ ವೆಜೆಲ್ 24,900ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿದೆ. ಇದರ ಹೈಬ್ರಿಡ್ ವರ್ಷನ್ ಹೊಸ ನಿರೀಕ್ಷೆಗಳಿಗೆ ಕಾರಣವಾಗಿದೆ.

To Follow DriveSpark On Facebook, Click The Like Button
ಭಾರತೀಯರು ವಂಚಿತ; ಹೋಂಡಾ ವೆಜೆಲ್‌ಗೆ ಭಾರಿ ಡಿಮ್ಯಾಂಡ್

ಇದು ಹೋಂಡಾ ವೆಜೆಲ್ ಯಶಸ್ಸನ್ನು ಸಾರುತ್ತದೆ. ಪ್ರಸ್ತುತ ಕಾರು ಭಾರತ ಮಾರುಕಟ್ಟೆ ಪ್ರವೇಶಿಸದಿರುವುದು ಹಿನ್ನೆಡೆಯಾಗಿರಲಿದೆ. ಈ ಹಿಂದೆ ಹೋಂಡಾ ವೆಜೆಲ್ ಭಾರತ ಮಾರುಕಟ್ಟೆ ಪ್ರವೇಶಿಸುವ ಕುರಿತಾಗಿ ಊಹಾಪೋಹಾಗಳಿದ್ದವು. ಆದರೆ ಪ್ರಾಯೋಗಿಕವಾಗಿ ಇದರ ಆಗಮನ ಸುಲಭವಾಗಿಲ್ಲದಿದ್ದರಿಂದ ಜಪಾನ್ ಮೂಲದ ಈ ವಾಹನ ತಯಾರಕ ಸಂಸ್ಥೆಯು ತನ್ನ ಯೋಜನೆಯಿಂದ ಹಿಂದೆ ಸರಿದಿತ್ತು.

ಭಾರತೀಯರು ವಂಚಿತ; ಹೋಂಡಾ ವೆಜೆಲ್‌ಗೆ ಭಾರಿ ಡಿಮ್ಯಾಂಡ್

ಹಾಗಿದ್ದರೂ ಭಾರತೀಯ ಗ್ರಾಹಕರನ್ನು ಖುಷಿಪಡಿಸುವ ನಿಟ್ಟಿನಲ್ಲಿ ಬ್ರಿಯೊ ತಲಹದಿಯ ಕ್ರಾಸೋವರ್ ಲಾಂಚ್ ಮಾಡುವುದಾಗಿ ಹೋಂಡಾ ಘೋಷಿಸಿತ್ತು. ನಿಮ್ಮ ಮಾಹಿತಿಗಾಗಿ, ಜಾಜ್ ತಲಹದಿಯಲ್ಲಿ ನಿರ್ಮಾಣವಾಗಿರುವ ವೆಜೆಲ್ ಕ್ರಾಸೋವರ್ 2013 ಡಿಸೆಂಬರ್ ತಿಂಗಳಲ್ಲಿ ಲಾಂಚ್ ಆಗಿತ್ತು. ಈ ಪೈಕಿ 20ರ ಹರೆಯದ ಅಸುಪಾಸಿನಲ್ಲಿರುವವರು ಹೈಬ್ರಿಡ್ ಕಾರನ್ನು ಬಯಸಿದ್ದರೆ 50 ಹಾಗೂ 60ರ ಅಸುಪಾಸಿನ ಪ್ರಾಯದವರು ಪೆಟ್ರೋಲ್ ವೆರಿಯಂಟ್‌ನತ್ತ ಮೊರೆ ಹೋಗಿದ್ದರು.

ಭಾರತೀಯರು ವಂಚಿತ; ಹೋಂಡಾ ವೆಜೆಲ್‌ಗೆ ಭಾರಿ ಡಿಮ್ಯಾಂಡ್

ಒಟ್ಟು ಎರಡು ಎಂಜಿನ್ ಹಾಗೂ ಮೂರು ವೆರಿಯಂಟ್‌ಗಳಲ್ಲಿ ವೆಜೆಲ್ ಎಂಟ್ರಿ ಕೊಟ್ಟಿದೆ. ಅವುಗಳೆಂದರೆ ಎಕ್ಸ್ ಪೆಟ್ರೋಲ್, ಎಕ್ಸ್ ಹೈಬ್ರಿಡ್ ಮತ್ತು ಎಕ್ಸ್ ಎಲ್ ಹೈಬ್ರಿಡ್ (ಆಲ್ ವೀಲ್ ಡ್ರೈವ್). ಇದು 1.5 ಲೀಟರ್ ಪೆಟ್ರೋಲ್ ಜತೆಗೆ ಎಲೆಕ್ಟ್ರಿಕ್ ಮೋಟಾರು ಪಡೆದಿತ್ತು.

ಭಾರತೀಯರು ವಂಚಿತ; ಹೋಂಡಾ ವೆಜೆಲ್‌ಗೆ ಭಾರಿ ಡಿಮ್ಯಾಂಡ್

ಪ್ರಸ್ತುತ ಜಪಾನ್ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟಗೊಳ್ಳುತ್ತಿರುವ ಹೋಂಡಾ ವೆಜೆಲ್ 2014ರ ಮಧ್ಯಂತರ ಅವಧಿಯಲ್ಲಿ ಯುರೋಪ್ ಮಾರುಕಟ್ಟೆ ಪ್ರವೇಶಿಸಲಿದೆ. ಹಾಗಿದ್ದರೂ ಅಮೆರಿಕನ್ನರು ಸಹ ಸ್ವಲ್ಪ ಸಮಯ ಕಾದು ಕುಳಿತುಕೊಳ್ಳಬೇಕಾಗಿದೆ.

ಭಾರತೀಯರು ವಂಚಿತ; ಹೋಂಡಾ ವೆಜೆಲ್‌ಗೆ ಭಾರಿ ಡಿಮ್ಯಾಂಡ್

ದುರದೃಷ್ಟವಶಾತ್ ಭಾರತದ ರುಪಾಯಿ ದರ ಮೌಲ್ಯ ಕುಸಿಯುತ್ತಿರುವುದು, ಹೈಬ್ರಿಡ್ ಮೂಲ ಸೌಕರ್ಯ ಮತ್ತು ಸ್ಥಳೀಯಗೊಳಿಸುವುದರಲ್ಲಿ ಎದುರಾಗಿರುವ ಸಮಸ್ಯೆ ಅರಿತುಕೊಂಡಿರುವ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ, 2015ರ ವೆಜೆಲ್ ಭಾರತ ಪ್ರವೇಶ ಯೋಜನೆಯನ್ನು ಕೈಬಿಟ್ಟಿತ್ತು.

English summary
Honda Vezel gets overwhelming response
Story first published: Friday, January 17, 2014, 15:58 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark