ಹ್ಯುಂಡೈ ಐಎಕ್ಸ್20 ಕಾಂಪಾಕ್ಟ್ ಎಂಪಿವಿ ಅನಾವರಣ

By Nagaraja

ಸ್ವಿಜರ್ಲೆಂಡ್‌ನಲ್ಲಿ ಸಾಗುತ್ತಿರುವ 2015 ಜಿನೆವಾ ಮೋಟಾರು ಶೋದಲ್ಲಿ ದಕ್ಷಿಣ ಕೊರಿಯಾ ಮೂಲದ ಅಗ್ರಗಣ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ, ನೂತನ ಐಎಕ್ಸ್20 ಕಾಂಪಾಕ್ಟ್ ಎಂಪಿವಿ ಕಾರನ್ನು ಅನಾವರಣಗೊಳಿಸಿದೆ. ಈ ಪರಿಷ್ಕೃತ ಮಾದರಿಯು ಹಿಂದಿನ ಆವೃತ್ತಿಗಿಂತಲೂ ಹೆಚ್ಚು ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಮುಖ್ಯಾಂಶಗಳು

  • ಹೊಸತಾದ ಫ್ರಂಟ್, ರಿಯರ್ ಲ್ಯಾಂಪ್, ಫ್ರಂಟ್ ಗ್ರಿಲ್, ವೀಲ್ ಡಿಸೈನ್
  • ಹೀಟಡ್ ಸ್ಟೀರಿಂಗ್ ವೀಲ್, ತಾಜಾ ಆಡಿಯೋ ಸಿಸ್ಟಂ,
  • ಹೆಚ್ಚು ಸ್ಥಳಾವಕಾಶಯುಕ್ತ ಕಾಂಪಾಕ್ಟ್ ಎಂಪಿವಿ,
  • ಇಂಟಿರಿಯರ್ ಹೊಂದಾಣಿಕೆ,
  • ಪರಿಪೂರ್ಣ ಎಂಪಿವಿ,
  • ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್,
  • ಸಮಗ್ರ ಸುರಕ್ಷತೆ

2010ನೇ ಇಸವಿಯಲ್ಲಿ ಮೊದಲ ಬಾರಿಗೆ ಪರಿಚಯಗೊಂಡಿದ್ದ ಹ್ಯುಂಡೈ ಐಎಕ್ಸ್20 ಮಾದರಿಗೆ ಯುರೋಪ್‌ನಲ್ಲಿ ವ್ಯಾಪಕ ಬೇಡಿಕೆ ಕಂಡುಬಂದಿತ್ತು. ಈಗಿನ ಮಾದರಿಯನ್ನು ಸಂಪೂರ್ಣವಾಗಿಯೂ ಯುರೋಪ್‌ ಗ್ರಾಹಕರಿಗಾಗಿ ವಿನ್ಯಾಸ, ಅಭಿವೃದ್ಧಿ ಹಾಗೂ ನಿರ್ಮಾಣಗೊಳಿಸಲಾಗಿದೆ.|

ಹ್ಯುಂಡೈ ಐಎಕ್ಸ್20 ಕಾಂಪಾಕ್ಟ್ ಎಂಪಿವಿ ಅನಾವರಣ

ಹೊಸತಾಗಿ ವಿನ್ಯಾಸಗೊಳಿಸಲಾದ ಬೈ ಫಂಕ್ಷನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಲ್‌ಇಡಿ ರಿಯರ್ ಕಾಂಬಿನೇಷನ್ ಲ್ಯಾಂಪ್ ಹಾಗೂ ಹ್ಯುಂಡೈನ ಬ್ರಾಂಡ್ ಸಿಗ್ನೇಚರ್ ಹೆಕ್ಸಾಗನಲ್ ಫ್ರಂಟ್ ಗ್ರಿಲ್ ಇರಲಿದೆ. ಹಾಗೆಯೇ ಮೆಶ್ ಹಾಗೂ ಕ್ರೋಮ್ ಫಿನಿಶಿಂಗ್ ಜೊತೆ ಬಾರ್ ಟೈಪ್‌ಗಳೆಂಬ ಎರಡು ವರ್ಷನ್‌ಗಳಲ್ಲಿ ಲಭ್ಯವಾಗಲಿದೆ.

ಹ್ಯುಂಡೈ ಐಎಕ್ಸ್20 ಕಾಂಪಾಕ್ಟ್ ಎಂಪಿವಿ ಅನಾವರಣ

ಇನ್ನು ಡೈನಾಮಿಕ್ ಎಕ್ಸ್‌ಟೀರಿಯರ್‌ಗೆ ಸೂಚಕವಾಗಿ 15 ಇಂಚಿನ್ ವೀಲ್ ಇರಲಿದೆ. ಇಲ್ಲಿ ಐಚ್ಛಿಕ 16 ಹಾಗೂ 17 ಇಂಚಿನ ಆಯ್ಕೆಯೂ ಕಂಡುಬರಲಿದೆ. ಅಂತೆಯೇ ಮಹೋನ್ನತ ಫ್ರಂಟ್ ಸೀಟು (ಹೆಡ್, ಶೋಲ್ಡರ್ ಹಾಗೂ ಲೆಗ್ ರೂಂ), ಡ್ಯುಯಲ್ ಪ್ಯಾನಲ್ ಪ್ಯಾನರೋಮಿಕ್ ಗ್ಲಾಸ್ ಸನ್ ರೂಫ್ ಇದರಲ್ಲಿರಲಿದೆ.

ಹ್ಯುಂಡೈ ಐಎಕ್ಸ್20 ಕಾಂಪಾಕ್ಟ್ ಎಂಪಿವಿ ಅನಾವರಣ

ಇವೆಲ್ಲದರ ಹೊರತಾಗಿ ಕ್ಲಾಸ್ ಲೀಡಿಂಗ್ 440 ಲೀಟರ್ ಬೂಟ್ ಜಾಗ ಸಹ ಕಾಣಬಹುದಾಗಿದೆ. ಇನ್ನು ಹಿಂಬದಿಯ ಸೀಟನ್ನು ಮಡಚಿದಾಗ ಬೂಟ್ ಸ್ಪೇಸ್ 1486 ಲೀಟರ್‌ಗೆ ವರ್ಧನೆಯಾಗಲಿದೆ. ಹೀಟಡ್ ಸ್ಟೀರಿಂಗ್, ನ್ಯೂ ಜನರೇಷನ್ ಆಡಿಯೋ ಸಿಸ್ಟಂ, ಐಪೊಡ್ ಕೆನೆಕ್ಟಿವಿಟಿ, ಇಂಟೇಗ್ರೇಟಡ್ ಮೈ ಮ್ಯೂಸಿಕ್, ಬ್ಲೂಟೂತ್ ಕನೆಕ್ಟಿವಿಟಿ, ಯುಎಸ್‌ಬಿ, ಆಕ್ಸ್ ಕನೆಕ್ಷನ್ ಇತರ ವೈಶಿಷ್ಟ್ಯವಾಗಿದೆ.

ಹ್ಯುಂಡೈ ಐಎಕ್ಸ್20 ಕಾಂಪಾಕ್ಟ್ ಎಂಪಿವಿ ಅನಾವರಣ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆರು ಏರ್ ಬ್ಯಾಗ್, ಇಎಸ್‌ಪಿ, ಎಬಿಎಸ್, ಇಬಿಎಸ್ ಮುಂತಾದ ವೈಶಿಷ್ಟ್ಯಗಳು ಸ್ಟ್ಯಾಂಡರ್ಡ್ ಆಗಿ ಲಭ್ಯವಾಗಲಿದೆ. ಕೊನೆಯದಾಗಿ ಎರಡು ಎಂಟಿರಿಯರ್ (ಬ್ಲ್ಯಾಕ್ ಹಾಗೂ ಟು ಟೋನ್ ಬೀಜ್) ಮತ್ತು ಒಂಬತ್ತು ಎಕ್ಸ್‌ಟೀರಿಯರ್ ಬಣ್ಣಗಳಲ್ಲಿ ಲಭ್ಯವಾಗಲಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ಡೀಸೆಲ್

1.4 ಲೀಟರ್ (77 ಅಶ್ವಶಕ್ತಿ)

1.4 ಲೀಟರ್ (90 ಅಶ್ವಶಕ್ತಿ)1.6 ಲೀಟರ್ (115 ಅಶ್ವಶಕ್ತಿ)

1.6 ಲೀಟರ್ (128 ಅಶ್ವಶಕ್ತಿ)

ಪೆಟ್ರೋಲ್

1.4 ಲೀಟರ್ (90 ಅಶ್ವಶಕ್ತಿ)

1.6 ಲೀಟರ್ (125 ಅಶ್ವಶಕ್ತಿ)

More from DriveSpark

Article Published On: Wednesday, March 4, 2015, 18:10 [IST]
English summary
Hyundai is present at the 2015 Geneva Motor Show. The South-Korean based manufacturer has unveiled its all-new ix20 model. It will be offered in European countries and is not likely to come to India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+