ಸಿಟಿ ಬಂದರೇನು? ಸವಾಲಿಗೆ ಹ್ಯುಂಡೈ ವರ್ನಾ ಸಿದ್ಧ!
ಇತ್ತೀಚೆಗಷ್ಟೇ ಲಾಂಚ್ ಆಗಿರುವ ಹೋಂಡಾ ಸಿಟಿ ಸೆಡಾನ್ ಕಾರು ಭಾರಿ ನಿರೀಕ್ಷೆಗಳನ್ನು ಮೂಡಿಸಿದೆ. ಈ ನಡುವೆ ಎಚ್ಚೆತ್ತುಕೊಂಡಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಇಂಡಿಯಾ ಸಂಸ್ಥೆ, ತನ್ನ ಜನಪ್ರಿಯ ವರ್ನಾ ಆವೃತ್ತಿಯ ಎರಡು ನೂತನ ವೆರಿಯಂಟ್‌ಗಳನ್ನು ಘೋಷಣೆ ಮಾಡಿದೆ.
ಇದು ಸಿಟಿ ಸವಾಲನ್ನು ಎದುರಿಸುವಲ್ಲಿ ಹ್ಯುಂಡೈ ವರ್ನಾಗೆ ನೆರವಾಗಲಿದೆ. ಅದೇ ಹೊತ್ತಿಗೆ ವರ್ನಾದ ಮೂರು ವೆರಿಯಂಟ್‌ಗಳನ್ನು ಹಿಂಪಡೆಯಲು ಹ್ಯುಂಡೈ ನಿರ್ಧರಿಸಿದೆ. ಹಾಗಿದ್ದರೆ ಹ್ಯುಂಡೈ ನೂತನ ವೆರಿಯಂಟ್‌ಗಳು ಯಾವುವು? ಹೆಚ್ಚಿನ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ.

ವರ್ನಾ ನೂತನ ವೆರಿಯಂಟ್‌ಗಳು ಯಾವುವು?
- ವರ್ನಾ 1.6 ಎಸ್‌ಎಕ್ಸ್ ಆಟೋಮ್ಯಾಟಿಕ್,
- ಆಲ್ ನ್ಯೂ ವರ್ನಾ 11.4 ಸಿಎಕ್ಸ್
- ವರ್ನಾ 1.4 ಇಎಕ್ಸ್ (ಪೆಟ್ರೋಲ್ ಮತ್ತು ಡೀಸೆಲ್),
- ವರ್ನಾ 1.6 ಇಎಕ್ಸ್ ಆಟೋಮ್ಯಾಟಿಕ್ (ಪೆಟ್ರೋಲ್ ಮತ್ತು ಡೀಸೆಲ್),
- ವರ್ನಾ 1.6 ಎಸ್‌ಎಕ್ಸ್ (ಒಪ್ಷನಲ್) ಆಟೋಮ್ಯಾಟಿಕ್ (ವಿಟಿವಿಟಿ)
- ರಿಯರ್ ವ್ಯೂ ಕ್ಯಾಮೆರಾ ಜತೆಗೆ ಕಾರಿನೊಳಗಡೆ ರಿಯರ್ ವ್ಯೂ ವೀಡಿಯೋ ಪರದೆ,
- ಸ್ಟ್ರೀರಿಂಗ್ ಮೌಂಟೆಡ್ ಮ್ಯೂಸಿಕ್ ಕಂಟ್ರೋಲ್,
- ಆಟೋ ಕ್ಲೈಮೇಟ್ ಕಂಟ್ರೋಲ್,
- ರಿಯರ್ ಡಿಸ್ಕ್ ಬ್ರೇಕ್, ಎಬಿಎಸ್ ಮತ್ತು ಡ್ರೈವರ್ ಏರ್‌ಬ್ಯಾಗ್,
- ವಿದ್ಯುನ್ಮಾನವಾಗಿ ಮಡಚಬಹುದಾದ ಔಟ್‌ಸೈಡ್ ರಿಯರ್ ವ್ಯೂ ಮಿರರ್,
- 16 ಇಂಚು ಡೈಮಂಡ್ ಕಟ್ ಅಲಾಯ್ ವೀಲ್ಸ್,
- ಡ್ರೈವರ್ ಸೈಡ್ ಏರ್ ಬ್ಯಾಗ್,

ನಿಲುಗಡೆಗೊಂಡ ವರ್ನಾ ಮಾದರಿಗಳು

ಇದರ ಜತೆಗೆ 1.6 ಎಸ್‌ಎಕ್ಸ್ (ಆಪ್ಷನಲ್) ಮಾದರಿಯು ಸೈಡ್ ಮತ್ತು ಕರ್ಟೈನ್ ಏರ್‌ಬ್ಯಾಗ್ ಮತ್ತು ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ ಪಡೆದುಕೊಳ್ಳಲಿದೆ.

ನೂತನ ವರ್ನಾ ಸಿಎಕ್ಸ್ ವೆರಿಯಂಟ್ 1.4 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯವಿರಲಿದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇರುತ್ತದೆ.

ವೈಶಿಷ್ಟ್ಯಗಳು

ಅಂದ ಹಾಗೆ ನೂತನ ವರ್ನಾ ಸಿಎಕ್ಸ್‌ನ 1.4 ಪೆಟ್ರೋಲ್ ವೆರಿಯಂಟ್ 8.07 ಲಕ್ಷ ಹಾಗೂ 1.4 ಡೀಸೆಲ್ ವೆರಿಯಂಟ್ 9.28 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ವರ್ನಾ 1.6 ಇಎಕ್ಸ್
16 ಇಂಚು ಡೈಮಂಡ್ ಕಟ್ ಅಲಾಯ್ ವೀಲ್ಸ್ ಮತ್ತು ಪವರ್ ಫೋಲ್ಡಿಂಗ್ ಓಆರ್‌ವಿಎಂನ ಹೊರತಾಗಿ 1.4 ಸಿಎಕ್ಸ್ ವೆರಿಯಂಟ್‌ನಲ್ಲಿ ಲಭ್ಯವಿರುವ ಇತರೆಲ್ಲ ಸ್ಟಾಂಡರ್ಡ್ ಫೀಚರ್ಸ್‌ಗಳು ವರ್ನಾ 1.6 ಇಎಕ್ಸ್ ವೆರಿಯಂಟ್‌ನಲ್ಲಿ ದೊರಕಲಿದೆ.

ವರ್ನಾ 1.6 ಎಸ್‌ಎಕ್ಸ್ -
ಇಲ್ಲಿ ಡ್ಯುಯಲ್ ಏರ್‌ಬ್ಯಾಗ್ ಮತ್ತು ಚಿಲ್ಡ್ ಗ್ಲೋವ್ ಬಾಕ್ಸ್ ಜತೆಗೆ ವರ್ನಾದ 1.6 ಎಸ್‌ಎಕ್ಸ್ ವೆರಿಯಂಟ್‌ನ ಎಲ್ಲ ಸ್ಟಾಂರ್ಡ್ ಫೀಚರುಗಳು ಲಭ್ಯವಾಗಿರಲಿದೆ.

ಅಂತಿಮವಾಗಿ ವರ್ನಾ ಟಾಪ್ ಎಂಡ್ ಎಸ್‌ಎಕ್ಸ್ (ಒಪ್ಷನಲ್) ವೆರಿಯಂಟ್ ಸೈಡ್ ಮತ್ತು ಕರ್ಟೈನ್ ಏರ್‌ಬ್ಯಾಗ್, ಫುಶ್ ಬಟನ್ ಸ್ಟಾರ್ಟ್, ಆಟೋಮ್ಯಾಟಿಕ್ ಹೆಡ್ ಲೈಟ್ ಮತ್ತು ಪ್ರೊಜೆಕ್ಟರ್ ಹೆಡ್ ಲೈಟ್ ಜತೆಗೆ 1.6 ಎಸ್‌ಎಕ್ಸ್ ವೆರಿಯಂಟ್‌ನ ಎಲ್ಲ ಸ್ಟಾಂಡರ್ಡ್ ಫೀಚರುಗಳು ದೊರಕಲಿದೆ.


Click it and Unblock the Notifications








