ಅಕಾರ್ಡ್ ವೈಫಲ್ಯ ಸರಿದೂಗಿಸಿತೇ ಹೊಸ ಮಾದರಿ?
ಭಾರತ ಮಾರುಕಟ್ಟೆಗೆ ವರ್ಷಗಳ ಹಿಂದೆಯೇ ಪರಿಚಯವಾಗಿದ್ದ ಹೋಂಡಾ ಅಕಾರ್ಡ್ ನಿರೀಕ್ಷಿತ ಮಟ್ಟದಲ್ಲಿ ಯಶ ಸಾಧಿಸುವಲ್ಲಿ ವಿಫಲವಾಗಿತ್ತು. ಇದರಿಂದ ಎದೆಗುಂದದ ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ಎಲ್ಲ ಹೊಸತನದಿಂದ ಕೂಡಿರುವ ಅಕಾರ್ಡ್ ಪರಿಷ್ಕೃತ ಮಾದರಿಯನ್ನು ಪರಿಚಯಿಸಲು ಹೊರಟಿದೆ.
ಮಾರುಕಟ್ಟೆಯಲ್ಲಿ ಹೋಂಡಾ ಬ್ರಾಂಡ್ ಕಾರುಗಳಿಗೆ ವರ್ಧಿಸುತ್ತಿರುವ ಮೌಲ್ಯ ಈ ಎಲ್ಲ ವಿಚಾರಗಳನ್ನು ಮನಗಂಡಿರುವ ಸಂಸ್ಥೆಯು, ಅಕಾರ್ಡ್ ರಿ ಎಂಟ್ರಿಗೆ ಸಿದ್ಧತೆ ನಡೆಸುತ್ತಿದೆ. ಹಾಗಾಗಿ ಹೊಸ ಅಕಾರ್ಡ್ ದೇಶದ ಮಾರುಕಟ್ಟೆಯಲ್ಲಿ ಗೇಂಜ್ ಚೇಂಜರ್ ಎನಿಸಿಕೊಳ್ಳಲಿದೆಯೇ? ಎಂಬುದಕ್ಕೆ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ಲಭಿಸಲಿದೆ.

ಅಮೇಜ್, ಸಿಟಿ ಬಳಿಕ ಮೊಬಿಲಿಯೊ ಮುಖಾಂತರ ಹ್ಯಾಟ್ರಿಕ್ ಗೆಲುವನ್ನು ಸಾಧಿಸಲು ಹೊರಟಿರುವ ಹೋಂಡಾ, ಮುಂದಿನ ವರ್ಷ ಅಕಾರ್ಡ್ ಮಾದರಿಯನ್ನು ಪರಿಚಯಿಸಲಿದೆ. ಇದು ಪ್ರೀಮಿಯಂ ಸೆಡಾನ್ ಕಾರು ಆಗಿರುವುದರಿಂದ ಜರ್ಮನಿಯ ಇತರ ಪ್ರತಿಸ್ಪರ್ಧಿಗಳನ್ನು ಹೇಗೆ ಮೀರಿಸಲಿದೆ ಎಂಬುದು ಕುತೂಹಲವೆನಿಸಿದೆ.

ನೂತನ ಅಕಾರ್ಡ್ ಹಿಂದಿನ ಮಾದರಿಗಿಂತಲೂ ಚಿಕ್ಕದಾಗಿರಲಿದೆ. ಇದು ಸ್ವಲ್ಪ ಸಣ್ಣ ವೀಲ್ ಬೇಸ್ ಪಡೆದುಕೊಂಡಿದ್ದು, ಚಾಲನಾ ಅನುಭವವನ್ನು ಹೆಚ್ಚಿಸಲಿದೆ.

ಹೊರಗಿನಿಂದ ನೋಡುವಾಗ ಸ್ವಲ್ಪ ಚಿಕ್ಕದಾಗಿ ಗೋಚರಿಸಿದರೂ ಒಳಗಡೆ ಅತ್ಯುತ್ತಮ ಸ್ಥಳಾವಕಾಶವನ್ನು ಹೊಂದಿರಲಿದೆ.

ಇದು ಸ್ಟೈಲಿಂಗ್ ಹಾಗೂ ಆರಾಮದಾಯಕ ವಿಚಾರದಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ. ಇದರ ಹೊಸ ಇಂಟಿರಿಯರ್ ವಿಶಿಷ್ಟತೆಗಳು ಹೆಚ್ಚು ಗಮನ ಸೆಳೆಯಲಿದೆ.

ನೂತನ ಹೋಂಡಾ ಅಕಾರ್ಡ್ 2.4 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 177 ಅಶ್ವಶಕ್ತಿ ಉತ್ಪಾದಿಸಲಿದೆ.

ಇನ್ನುಳಿದಂತೆ ಹೋಂಡಾ ಸಿಆರ್-ವಿ ಆವೃತ್ತಿಯಲ್ಲಿರುವ 1.6 ಲೀಟರ್ ಡೀಸೆಲ್ ಎಂಜಿನ್ ಸಹ ಬಳಕೆಯಾಗುವ ಸಾಧ್ಯತೆಯಿದೆ.

ಒಟ್ಟಿನಲ್ಲಿ ಪ್ರಸ್ತುತ ಹೋಂಡಾ ಸಾಧಿಸುತ್ತಿರುವ ಕ್ಷಿಪ್ರ ಗತಿಯ ಬೆಳವಣಿಗೆ ಹಾಗೂ ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಲು ಸಹಕಾರಿಯಾದ್ದಲ್ಲಿ ಅಕಾರ್ಡ್ ಇತರ ಪ್ರತಿಸ್ಪರ್ಧಿಗಳನ್ನು ಮೀರಿಸಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.


Click it and Unblock the Notifications








