ಭವಿಷ್ಯದ ಕ್ರೀಡಾ ಬಳಕೆಯ ವಾಹನ ಜೀಪ್ ಹ್ಯೂರಿಕೇನ್
ನೀವು ಭವಿಷ್ಯದ ವಾಹನ ಹೇಗಿರಬೇಕು ಎಂಬುದರ ಕುರಿತು ಯೋಚನೆ ಮಾಡಿದ್ದೀರಾ? ಅದರಲ್ಲೂ ವಿಶೇಷವಾಗಿಯೂ ಕ್ರೀಡಾ ಬಳಕೆಯ ವಾಹನವು ಯಾವ ಸ್ವರೂಪವನ್ನು ಪಡೆದುಕೊಂಡಿರಬೇಕು?
ವಾಹನ ಜಗತ್ತಿನ ಎಂಜಿನಿಯರ್‌ಗಳು ಈ ಬಗ್ಗೆ ಚಿಂತನೆ ಮಾಡುತ್ತಾ ಸಾಗಿದ್ದಾಗ ನೂತನ ಜೀಪ್ ಬ್ರಾಂಡ್‌ವೊಂದನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದಾರೆ.
ಎಲ್ಲ ಭೂಪ್ರದೇಶಗಳಿಗೂ ಹೊಂದಿಕೆಯಾಗುವ ರೀತಿಯಲ್ಲಿ ಈ ಪವರ್‌ಫುಲ್ ಹ್ಯೂರಿಕನ್ (hurricane) ಎಸ್‌ಯುವಿ ಬ್ರಾಂಡ್ ತಯಾರಿಸಲಾಗಿದೆ. ಸದ್ಯ ಕಾನ್ಸೆಪ್ಟ್ ರೂಪದಲ್ಲಿರುವ ಈ ಜೀಪ್ ಬ್ರಾಂಡ್ ಯಾವಾಗ ಉತ್ಪಾದನಾ ವರ್ಷನ್ ಪಡೆದುಕೊಳ್ಳಲಿದೆ ಎಂಬುದು ತಿಳಿದು ಬಂದಿಲ್ಲ...

ಜೀಪ್ ಹ್ಯೂರಿಕನ್ ಕಾನ್ಸೆಪ್ಟ್ ಕಾರಿನ ಟರ್ನಿಂಗ್ ರೇಡಿಯಸ್ '0' ಆಗಿದ್ದರಿಂದ ನೀವು ಬಯಸಿದ ರೀತಿಯಲ್ಲಿ ಹೇಗೆ ಬೇಕಾದರೂ ಚಲಾಯಿಸಬಹುದಾಗಿದೆ.

ಪ್ರಸ್ತುತ ಎಸ್‌ಯುವಿಯಲ್ಲಿ ಎರಡು ಎಂಜಿನ್ ಹೊಂದಿರಲಿದ್ದು, ಎದುರುಗಡೆ ಹಾಗೂ ಹಿಂದುಗಡೆ ಲಗತ್ತಿಸಲಾಗಿದೆ. ಈ ಎರಡು 5.7 ಲೀಟರ್ ಎಂಜಿನ್‌ಗಳು ಅನುಕ್ರಮವಾಗಿ 335ರಂತೆ ಒಟ್ಟುಸೇರಿ 670 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇದು 4x4 ಡ್ರೈವಿಂಗ್ ಮೋಡ್ ಹೊಂದಿದೆ. ಅಂದರೆ ಕೇವಲ 5 ಸಕೆಂಡಿನೊಳಗೆ 100 ಕೀ.ಮೀ. ವೇಗತೆಯನ್ನು ಪಡೆದುಕೊಳ್ಳಲಿದೆ.

ಜೀಪ್ ಹ್ಯೂರಿಕನ್ ಎಸ್‌ಯುವಿ ಆಫ್ ರೋಡ್ ಚಾಲನೆಗೆ ಹೇಳಿ ಮಾಡಿಸಿದಂತಿದೆ.

ಜೀಪ್‌ನ ಭಾರ ಕಡಿಮೆ ಮಾಡಲು ಹಗುರ ಭಾರದ ಪರಿಕರಗಳನ್ನು ಬಳಸಲಾಗಿದೆ. ಇದು ಎರಡು ಸೀಟಿನ ಎಸ್‌ಯುವಿ ಆಗಿದ್ದು, ಯಾವುದೇ ಡೋರ್ ಇರುವುದಿಲ್ಲ.



Click it and Unblock the Notifications








