ಭೇಟಿಯಾಗಿ ಗೇರ್ ಇಲ್ಲದ ಸೂಪರ್ ಕಾರು - ಕೊಯಿನಿಕ್ಸೆಗ್ ರೆಗೆರಾ
ಈ ಬಾರಿಯ 2015 ಜಿನೆವಾ ಮೋಟಾರು ಶೋದಲ್ಲಿ ವಿಶೇಷ ಆತಿಥಿಯೊಂದರ ಆಗಮನವಾಗಿದೆ. ಅದುವೇ ಗೇರೇ ಇಲ್ಲದ ಹೈಬ್ರಿಡ್ ಸೂಪರ್ ಕಾರು ಕೊಯಿನಿಕ್ಸೆಗ್ ರೆಗೆರಾ.
ಅಷ್ಟಕ್ಕೂ ಜಗತ್ತಿನ ಅತ್ಯಂತ ವೇಗದ ಕೊಯಿನಿಕ್ಸೆಗ್ ರೆಗೆರಾ ಜಟಿ ಕಾರು ಎಷ್ಟು ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಗೊತ್ತೇ? ಬರೋಬ್ಬರಿ 1,500 ಹಾರ್ಸ್ ಪವರ್. ಅಷ್ಟಕ್ಕೂ ಇದನ್ನು ಟ್ರ್ಯಾಕ್‌ನಲ್ಲಿ ಓಡಾಡುವುದಕ್ಕಾಗಿ ರಚಿಸಲಾಗಿಲ್ಲ. ಬದಲಾಗಿ ಸ್ವಿಡನ್ ಸಂಸ್ಥೆ ಹೇಳುವ ಪ್ರಕಾರ ಇದು ಜಗತ್ತಿನ ಅತಿ ವೇಗದ ಲಗ್ಷುರಿ ಹೈಪರ್ ಕಾರಾಗಿರಲಿದೆ.

ಇದರಲ್ಲಿ ಗೇರ್ ಬಾಕ್ಸ್ ಸ್ಥಾನವನ್ನು ಹೈಡ್ರಾಲಿಕ್ ಕ್ಲಚ್ ತುಂಬಲಿದೆ. ಹಾಗೆಯೇ ಪೆಟ್ರೋಲ್ ಜೊತೆಗೆ ಮೂರು ಹಗುರ ಭಾರದ ಎಲೆಕ್ಟ್ರಿಕ್ ಎಂಜಿನ್ ಇದರಲ್ಲಿರಲಿದೆ.

ಇನ್ನು ಭಾರ ಕಡಿತಕ್ಕಾಗಿ ಕಾರ್ಬನ್ ಫೈಬರ್ ಅಲ್ಯೂಮಿನಿಯಂ ಹನಿಕೊಂಬ್ ಚಾಸೀ, ಕಾರ್ಬನ್ ಬಾಡಿ, ಆಕ್ಟಿವ್ ಏರೋ, ಟೈಟಾನಿಯಂ ಎಕ್ಸಾಸ್ಟ್ ಸಿಸ್ಟಂ ಮುಂತಾದ ಸೌಲಭ್ಯಗಳನ್ನು ಕಾಣಬಹುದಾಗಿದೆ.

ಅಷ್ಟಕ್ಕೂ ಕೊಯಿನಿಕ್ಸೆಗ್ ರೆಗೆರಾ ಹೈಬ್ರಿಡ್ ಸೂಪರ್ ಕಾರು 1.89 ಮಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ದುಬಾರಿಯೆನಿಸಲಿದೆ. ಇದನ್ನು ಭಾರತೀಯ ರುಪಾಯಿಗಳಿಗೆ ಪರಿವರ್ತಿಸಿದಾಗ ಅಂದಾಜು 12 ಕೋಟಿ ರು.ಗಳಷ್ಟು ಬೆಲೆ ಬಾಳಲಿದೆ.

ವಿಶಿಷ್ಟತೆ
- ಟ್ವಿನ್ ಟರ್ಬೊ ಡಿಒಎಚ್‌ಸಿ 5.0 ಲೀಟರ್ ವಿ8 ಎಂಜಿನ್,
- ಮೂರು ಎಲೆಕ್ಟ್ರಿಕ್ ಮೋಟಾರು,
- ಕೊಯಿನಿಕ್ಸೆಗ್ ಡೈರಕ್ಟ್ ಡ್ರೈವ್ (ಕೆಡಿಡಿ)
- ಎರಡು ಜೊತೆ ಸೇರಿ 1,500 ಅಶ್ವಶಕ್ತಿ,
- ಸಂಪೂರ್ಣ ಎಲೆಕ್ಟ್ರಿಕ್ ಮೋಡ್‌ನಲ್ಲಿ 21 ಮೈಲ್ ವ್ಯಾಪ್ತಿ,
- ಹೈಡ್ರಾಲಿಕ್ ಕ್ಲಚ್,
- ಎಲೆಕ್ಟ್ರಿಕ್ ಸೀಟು,
- ಮಡಚಬಹುದಾದ ರಿಯರ್ ವಿಂಗ್,
- ಕಾರ್ಬನ್ ಸೆರಾಮಿಕ್ ಬ್ರೇಕ್,
- 20 ಸೆಕೆಂಡುಗಳಲ್ಲೇ ಗಂಟೆಗೆ 0-400 ಕೀ.ಮೀ. ವೇಗ
- ಗರಿಷ್ಠ ವೇಗ ಗಂಟೆಗೆ 248 ಕೀ.ಮೀ.


Click it and Unblock the Notifications








