ಅಬ್ಬಬ್ಬಾ..ಮುಂಬೈ ಬೀದಿಗಿಳಿದ 10 ಕೋಟಿ ದುಬಾರಿಯ ಲಾಫೆರಾರಿ
ನೀವೆಲ್ಲರೂ ಫೆರಾರಿ ಸೂಪರ್ ಕಾರುಗಳ ಬಗ್ಗೆ ಕೇಳಿರುವೀರಾ. ಇಟಲಿ ಮೂಲದ ಐಕಾನಿಕ್ ಸೂಪರ್ ಕಾರು ಸಂಸ್ಥೆಯಾಗಿರುವ ಫೆರಾರಿ ದುಬಾರಿ ಸೂಪರ್ ಕಾರುಗಳನ್ನು ನಿರ್ಮಿಸುವುದರಲ್ಲಿ ಹೆಸರು ವಾಸಿಯಾಗಿದೆ.
ಪ್ರಸ್ತುತ ಸಂಸ್ಥೆಯಿಂದ ನಿರ್ಮಾಣವಾಗಿರುವ 10 ಕೋಟಿ ರು.ಗಿಂತಲೂ ಹೆಚ್ಚು ಬೆಲೆ ಬಾಳುವ ಲಾ ಫೆರಾರಿ ಲಿಮಿಟಡ್ ಎಡಿಷನ್ ಸೂಪರ್ ಕಾರು ಮುಂಬೈ ಬೀದಿಗಿಳಿದಿರುವುದು ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಇದರ ಹಿಂದಿರುವ ಕಾರಣವೇನು? ವಿವರಗಳಿಗಾಗಿ ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ...

ವಾಣಿಜ್ಯ ನಗರಿ ಮುಂಬೈನಲ್ಲಿ 2015 ಜನವರಿ 10 ಹಾಗೂ 11ರಂದು ಏಳನೇ ಆವೃತ್ತಿಯ ಪಾರ್ಕ್ಸ್ ಸೂಪರ್ ಕಾರು ರಾಲಿ ಆಯೋಜನೆಯಾಗುತ್ತಿದೆ. ಇದರಂಗವಾಗಿ ಲಾ ಫೆರಾರಿ ಮುಂಬೈ ನಗರವನ್ನು ತಲುಪಿದೆ.

ದೇಶದ ಖ್ಯಾತ ಉದ್ಯಮಿ ಮತ್ತು ರೇಮಾಂಡ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕರಾಗಿರುವ ಗೌತಮ್ ಸಿಂಘಾನಿಯಾ ಅವರು ಕೋಟಿ ಬೆಲೆ ಬಾಳುವ ಲಾ ಫೆರಾರಿ ಕಾರನ್ನು ಬರಮಾಡಿಕೊಂಡಿದ್ದಾರೆ. ಅಷ್ಟೇ ಯಾಕೆ ಸ್ವತ: ಸೂಪರ್ ಕಾರ್ ಕ್ಲಬ್ ಸಂಸ್ಥಾಪಕರಾಗಿರುವ ಗೌತಮ್, 2015 ಪಾರ್ಕ್ಸ್ ಸೂಪರ್ ಕಾರು ಶೋದ ರುವಾರಿಯಾಗಿದ್ದಾರೆ.

ಮುಂಬೈನ ಮಹಾಲಕ್ಷ್ಮಿ ನಗರದ ಟರ್ಬ್ ಕ್ಲಬ್‌ನ ಆರ್‌ಡಬ್ಲ್ಯುಐಟಿಸಿ ಕೋರ್ಸ್‌ನಲ್ಲಿ ಆಯೋಜನೆಯಾಗಲಿರುವ ಪಾರ್ಕ್ಸ್ ಸೂಪರ್ ಕಾರು ರಾಲಿಯಲ್ಲಿ ಬರೋಬ್ಬರಿ 80ರಷ್ಟು ಸೂಪರ್ ಕಾರುಗಳು ಕಾಣಿಸಿಕೊಳ್ಳಲಿದೆ.

ಅಷ್ಟೇ ಯಾಕೆ ಇದೇ ಮೊದಲ ಬಾರಿಗೆ ರಾಲಿಯಲ್ಲಿ ಸೂಪರ್ ಬೈಕ್ ಕೂಡಾ ಕಾಣಿಸಿಕೊಳ್ಳಲಿದೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.

ಫೆರಾರಿಯ ಜೊತೆಗೆ, ಲಂಬೋರ್ಗಿನಿ, ಆಸ್ಟನ್ ಮಾರ್ಟಿನ್, ಮಸೆರಟಿ, ಪೋರ್ಷೆ, ಬೆಂಟ್ಲಿ, ರೋಲ್ಸ್ ರಾಯ್ಸ್, ಬಿಎಂಡಬ್ಲ್ಯು, ಆಡಿ ಮತ್ತು ಮರ್ಸಿಡಿಸ್ ಬೆಂಝ್‌ನ ಸೂಪರ್ ಕಾರುಗಳು ಸಹ ರಾಲಿಯ ಪ್ರಮುಖ ಆಕರ್ಷಣೆಯಾಗಲಿದೆ.

ಫೆರಾರಿಯ ಲಾಫೆರಾರಿ ಹೈಪರ್ ಕಾರು ರಾಲಿಯ ಕೇಂದ್ರ ಬಿಂದುವಾಗಿರಲಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಪ್ರದರ್ಶನ ಕಾಣುತ್ತಿರುವ ಲಾ ಫೆರಾರಿ ತೆರಿಗೆ ಹೊರತಾಗಿ 10 ಕೋಟಿ ರು.ಗಳಷ್ಟು ದುಬಾರಿಯೆನಿಸಿದೆ.

ಇದು 6.3 ಲೀಟರ್ ವಿ12 ಮೋಟಾರು ಎಂಜಿನ್‌ನಿಂದ ನಿಯಂತ್ರಿಸ್ಪಡುತ್ತಿದ್ದು, 800 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಎಲೆಕ್ಟ್ರಿಕ್ ಮೋಟಾರು ಸಹ ಜೋಡಣೆ ಮಾಡಲಾಗಿದ್ದು, ಒಟ್ಟು 963 ಪಿಎಸ್ ಪವರ್ (900 ಎನ್‌ಎಂ ಟಾರ್ಕ್) ಉತ್ಪಾದಿಸಲು ಸಹಕಾರಿಯಾಗಲಿದೆ.

2015 ಪಾರ್ಕ್ಸ್ ಸೂಪರ್ ಕಾರು ರಾಲಿ ಪರೇಡ್ ಮಾರ್ಗ
ಒಟ್ಟಿನಲ್ಲಿ ಇಡೀ ದೇಶವೇ ಜನವರಿ 10 ಹಾಗೂ 11ರಂದು ಅತ್ಯುತ್ತಮ ಸೂಪರ್ ಕಾರುಗಳ ದರ್ಶನಕ್ಕೆ ಸಾಕ್ಷಿಯಾಗಲಿದೆ.
ಟರ್ಫ್ ಕ್ಲಬ್ - ಹಜಿ ಅಲಿ - ಪಡ್ಡಾರ್ ರಸ್ತೆ - ಬಾಬುಲ್ ನಾಥ್ - ಚೌಪತ್ತಿ - ಮರೈನ್ ಡ್ರೈವ್ - ನರಿಮನ್ ಪಾಯಿಂಟ್ - ಮರೈನ್ ಡ್ರೈವ್ - ಪಡ್ಡಾರ್ ರಸ್ತೆ - ಹಜಿ ಅಲಿ - ವರ್ಲಿ ಸೀ ಫೇಸ್ - ಸೀ ಲಿಂಕ್ - ಬಾಂಧ್ರಾ ಈಸ್ಟ್ ಫ್ಲೈಓವರ್‌ನಲ್ಲಿ ಯು ಟರ್ನ್ - ಸೀ ಲಿಂಕ್ - ವರ್ಲಿ ಸೀ ಫೇಸ್ - ಹಜಿ ಅಲಿ - ಟರ್ಫ್ ಕ್ಲಬ್.


Click it and Unblock the Notifications








