ಲಂಬೋರ್ಗಿನಿ ಸೂಪರ್ ಕಾರು ಏರ್‌ಪೋರ್ಟ್ ಟ್ಯಾಕ್ಸಿ?
ಸದ್ಯ ಆಟೋ ಜಗತ್ತಿನಲ್ಲಿ ಎಲ್ಲೂ ನೋಡಿದರೂ ಯಶಸ್ವಿ 50ನೇ ವರ್ಷ ಆಚರಿಸುತ್ತಿರುವ ಲಂಬೋರ್ಗನಿ ಸೂಪರ್ ಕಾರಿನ ಸುದ್ದಿಯೇ ಕಾಣಸಿಗುತ್ತದೆ. ಇದಕ್ಕೊಂದು ಸೇರ್ಪಡೆಯಂತೆ ಲಂಬೋರ್ಗಿನಿ ಏರ್‌ಪೋರ್ಟ್ (Bologna) ಟ್ಯಾಕ್ಸಿ ಪ್ರಸ್ತುತಗೊಂಡಿದೆ.
ಕೆಲವು ದಿನಗಳ ಹಿಂದೆಯಷ್ಟೇ ದುಬೈ ಪೊಲೀಸ್‌ಗೆ ಲಂಬೋರ್ಗಿನಿ ಸೇರ್ಪಡೆಯಾಗಿರುವ ಬಗ್ಗೆ ನಾವು ವರದಿ ಮಾಡಿದ್ದೆವು. ಇದರ ಬೆನ್ನಲ್ಲೇ ಬಿಳಿ ಹಾಗೂ ಕೆಂಪು ಮಿಶ್ರಿತ ಲಂರ್ಬೋರ್ಗಿನಿ ಅವೆಂಟಡೊರ್ ಸೂಪರ್ ಕಾರು ಬೊಲೊಗ್ನಾ ಏರ್‌ಪೋರ್ಟ್ ರನ್‌ವೇನಲ್ಲಿ ಓಡ ತೊಡಗಿದೆ.
ಇದಲ್ಲಿ ಏರ್‌ಪೋರ್ಟೊ ಡಿ ಬೊಲೊಗ್ನಾ 'ಫಾಲೋ ಮಿ' ಸ್ಟಿಕ್ಕರ್ ಲಗತ್ತಿಸಲಾಗಿದ್ದು ಹೆಚ್ಚು ಆಕರ್ಷಕವಾಗಿದೆ. ವಿಶೇಷ ಪರಿಣಿತಿ ಪಡೆದ ಚಾಲಕರು ಈ ಸೂಪರ್ ಕಾರನ್ನು ಚಾಲನೆ ಮಾಡಲಿದ್ದಾರೆ.
ಬೊಲೊಗ್ನಾ ಸ್ಥಳೀಯ ವಿಮಾನ ನಿಲ್ದಾಣಕ್ಕೆ 50ರ ಸಂಭ್ರಮದಲ್ಲಿರುವ ಲಂಬೋರ್ಗಿನಿ ನೀಡುತ್ತಿರುವ ಉಡುಗೊರೆಯಾಗಿದೆ. ಪ್ರಸ್ತುತ ಸೇವೆಯು ಮೇ 6ರಿಂದ 19ರ ವರೆಗೆ ಲಭ್ಯವಿರಲಿದೆ.






Click it and Unblock the Notifications