ರೇಂಜ್ ರೋವರ್ ಹೈಬ್ರಿಡ್ ಆಫ್ ರೋಡಿಂಗ್‌ಗೂ ಸೈ
ವಿಶ್ವದ ಮುಂಚೂಣಿಯ ಎಲ್ಲ ವಾಹನ ತಯಾರಕ ಸಂಸ್ಥೆಗಳು ಭವಿಷ್ಯದ ಸಂಚಾರ ವಾಹನ ಅಭಿವೃದ್ಧಿಪಡಿಸುವುದರಲ್ಲಿ ತಲ್ಲೀನವಾಗಿದೆ. ಈ ಪಟ್ಟಿಗೆ ಮತ್ತೊಂದು ಸೇರ್ಪಡೆಯೆಂಬಂತೆ ಪ್ರಖ್ಯಾತ ಸಂಸ್ಥೆಯಾದ ರೇಂಜ್ ರೋವರ್ ಪರಿಸರ ಸ್ನೇಹಿ ಹೈಬ್ರಿಡ್ ಕಾರುಗಳನ್ನು ಬಿಡುಗಡೆಗೊಳಿಸಿದೆ.
ರೇಂಜ್ ರೋವರ್ ಹೈಬ್ರಿಡ್ ಮತ್ತು ರೇಂಜ್ ರೋವರ್ ಸ್ಪೋರ್ಟ್ ಹೈಬ್ರಿಡ್ ಕಾರಗಳ ಮೊದಲ ಮಾದರಿಯನ್ನು ಅನಾವರಣಗೊಳಿಸಲಾಗಿದೆ. ನೂತನ ಕಾರು ಆಫ್ ರೋಡಿಂಗ್‌ಗೂ ಸೈ ಎನಿಸಿದೆ.
ಇದನ್ನು ಪುಷ್ಠೀಕರಿಸಲು ಹೊರಟಿರುವ ರೇಂಜ್ ರೋವರ್ 10,000 ಮೈಲು ದೂರದ ತನಕ ಪಯಣ ಹಮ್ಮಿಕೊಳ್ಳಲಿದೆ. ಫ್ರಾನ್ಸ್‌ನಿಂದ ಆರಂಭವಾಗಲಿರುವ ಯಾತ್ರೆಯು ಪೊಲೆಂಡ್, ರಷ್ಯಾ, ಚೀನಾ ಹಾದಿಯಾಗಿ ಅಂತಿಮದಲ್ಲಿ ಸೆಪ್ಟೆಂಬರ್ ಟಾಟಾ ಮೋಟಾರ್ಸ್ ಕೇಂದ್ರ ಕಾರ್ಯಾಲಯವಾದ ಮುಂಬೈ ತಲುಪಲಿದೆ.

ಎಂಜಿನ್ ಮಾಹಿತಿ
ಸಾಮಾನ್ಯ ರೇಂಜ್ ರೋವರ್‌ನ 3.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ವಿ6 ನಿಯಂತ್ರಿಸಲ್ಪಡುವ ಹೈಬ್ರಿಡ್ ಕಾರಿನಲ್ಲಿ, ಎಲೆಕ್ಟ್ರಿಕ್ ಮೋಟಾರು 35 kW (47 HP)/125 lb-ft ಕೂಡಾ ಹೊಂದಿದೆ.

ಇಂಧನ ದಕ್ಷತೆ
ಸಾಮಾನ್ಯ ರೇಂಜ್ ರೋವರ್ ಆವೃತ್ತಿಗಿಂತಲೂ ಕಡಿಮೆ ಭಾರ ಹೊಂದಿರುವ ರೇಂಜ್ ರೋವರ್ ಸ್ಪೋರ್ಟ್ ಹೈಬ್ರಿಡ್ ಕಾರುಗಳು ಗರಿಷ್ಠ ಇಂಧನ ದಕ್ಷತೆ ಹಾಗೂ ಕಡಿಮೆ ಕಾರ್ಬನ್ ಹೊರ ಸೂಸಲಿದೆ. ಇದು ಪ್ರತಿ ಲೀಟರ್‌ಗೆ 18.7 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ನಿರ್ವಹಣೆ
ಝಡ್‌ಎಫ್ ಎಂಟು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಟ್ಟಿರುವ ರೇಂಜ್ ರೋವರ್ ಎಲ್ಲ ನಾಲ್ಕು ಚಕ್ರಗಳಿಗೆ ಪವರ್ ಸಪ್ಲೈ ಮಾಡಲಿದೆ. ರೇಂಜ್ ರೋವರ್ ಹಾಗೂ ರೇಂಜ್ ರೋವರ್ ಸ್ಪೋರ್ಟ್ ಹೈಬ್ರಿಡ್ ಕಾರುಗಳು ಅನುಕ್ರಮವಾಗಿ 7.1 ಹಾಗೂ 6.9 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸಲಿದೆ. ಹಾಗೆಯೇ ಅನುಕ್ರಮವಾಗಿ ಗಂಟೆಗೆ 217 ಹಾಗೂ 225 ಕೀ.ಮೀ. ಗರಿಷ್ಠ ವೇಗತೆಯನ್ನು ಪಡೆಯಲಿದೆ.

ಎಲೆಕ್ಟ್ರಿಕ್ ಮೋಡ್
ಸಂಪೂರ್ಣ ಎಲೆಕ್ಟ್ರಿಕ್ ಮೋಡ್‌ನಲ್ಲಿ ಸಂಚರಿಸಬಹುದಾದರೂ ಇದರ ಬಳಕೆ ಕಡಿಮೆಯಾಗಿದೆ. ಯಾಕೆಂದರೆ ಎಲೆಕ್ಟ್ರಿಕ್ ಮೋಡ್‌ನಲ್ಲಿ ಗಂಟೆಗೆ 48ಕೀ.ಮೀ. ವೇಗತೆಯಲ್ಲಿ 1.6 ಕೀ.ಮೀ ತನಕ ಮಾತ್ರ ಸಂಚರಿಸಬಹುದಾಗಿದೆ.

ಬುಕ್ಕಿಂಗ್, ವಿತರಣೆ
ಅಷ್ಟಕ್ಕೂ ಸೆಪ್ಟೆಂಬರ್ 10ರಿಂದ ಬುಕ್ಕಿಂಗ್ ಆರಂಭಿಸಲಿರುವ ರೇಂಜ್ ರೋವರ್ ಹೈಬ್ರಿಡ್ ಕಾರುಗಳ ವಿತರಣೆ ಬ್ರಿಟನ್‌ನಲ್ಲಿ 2014ರಲ್ಲಿ ಆರಂಭವಾಗಲಿದೆ.


Click it and Unblock the Notifications








