ಮಹೀಂದ್ರ ಮಾನ್ಸೂನ್ ಆಫರ್ ಮಿಸ್ ಮಾಡದಿರಿ
ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಈ ಮುಂಗಾರು ಮಳೆ ಕಾಲದಲ್ಲಿ ಮಾರಾಟವನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ವಿಶೇಷ ರೀತಿಯ ಮಾನ್ಸೂನ್ ಆಫರನ್ನು ಘೋಷಿಸಿದೆ.
ಮಹೀಂದ್ರದ ಎಲ್ಲ ಜನಪ್ರಿಯ ಆವೃತ್ತಿಗಳಿಗೆ ಈ ಆಫರ್ ಅನ್ವಯವಾಗಲಿದೆ. ಪ್ರಸ್ತುತ ಆಫರ್ 2014 ಜೂನ್ 30ರ ವರೆಗೆ ಮಾತ್ರ ಮುಂದುವರಿಯಲಿದೆ. ಹಾಗಾಗಿ ಆಸಕ್ತ ಗ್ರಾಹಕರು ಈಗಾಗಲೇ ವಿತರಕರನ್ನು ಸಂಪರ್ಕಿಸಲು ವಿನಂತಿಸಿಕೊಳ್ಳಲಿದೆ. ಸಹಜವಾಗಿಯೇ ಮಳೆಗಾಲದಲ್ಲಿ ಮಾರಾಟ ಕ್ಷೀಣವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷವೂ ವಾಡಿಕೆಯಂತೆಯೇ ಕಾರುಗಳಿಗೆ ಆಫರ್ ಕಂಡುಬರುತ್ತಿರುವುದು ಸಾಮಾನ್ಯವಾಗಿದೆ.

ನಿಮ್ಮ ನೆಚ್ಚಿನ ಮಹೀಂದ್ರ ಕಾರುಗಳನ್ನು ಖರೀದಿಸುವ ಮೂಲಕ ಕನಿಷ್ಠ 16,000 ರು.ಗಳಿಂದ ಗರಿಷ್ಠ 75,000 ರು. ವರೆಗಿನ ಪ್ರಯೋಜನ ಪಡೆಯಬಹುದಾಗಿದೆ. ಈ ಆಫರ್ ವೆರಿಟೊ ವೈಬ್‌ನಿಂದ ಆರಂಭಿಸಿ ಸ್ಯಾಗ್ಯೊಂಗ್ ರೆಕ್ಸ್ಟಾನ್ ಎಸ್‌ಯುವಿ ಆವೃತ್ತಿಗೂ ಲಭ್ಯವಿರಲಿದೆ.

ಮಹೀಂದ್ರ ಕ್ವಾಂಟೊ
ಒಟ್ಟು ಪ್ರಯೋಜನ: ರು. 16,000 ವರೆಗೆ

ಬೊಲೆರೊ
ಒಟ್ಟು ಪ್ರಯೋಜನ: ರು. 19,000 ವರೆಗೆ

ಎಕ್ಸ್‌ಯುವಿ 500
ಒಟ್ಟು ಪ್ರಯೋಜನ: ರು. 25,000 ವರೆಗೆ

ಕ್ಸೈಲೋ
ಒಟ್ಟು ಪ್ರಯೋಜನ: ರು. 75,000 ವರೆಗೆ

ಸ್ಕಾರ್ಪಿಯೊ
ಒಟ್ಟು ಪ್ರಯೋಜನ: ರು. 60,000 ವರೆಗೆ

ವೆರಿಟೊ ವೈಬ್
ಒಟ್ಟು ಪ್ರಯೋಜನ: ರು. 26,000 ವರೆಗೆ

ಸ್ಯಾಂಗ್ಯೊಂಗ್
ಒಟ್ಟು ಪ್ರಯೋಜನ: ರು. 35,000 ವರೆಗೆ


Click it and Unblock the Notifications








