ಮಹೀಂದ್ರ ಎಕ್ಸ್‌ಯುವಿ500 ಸನ್‌ರೂಫ್ ಎಕ್ಸ್‌ಕ್ಲೂಸಿವ್ ಎಡಿಷನ್
ದೇಶದ ಕ್ರೀಡಾ ಬಳಕೆಯ ವಾಹನಗಳ ನಿರ್ಮಾಣದ ಮುಂಚೂಣಿಯ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಎಲ್ಲ ಹೊಸತನದಿಂದ ಕೂಡಿರುವ ಮಹೀಂದ್ರ ಎಕ್ಸ್‌ಯುವಿ500 ಎಕ್ಸ್‌ಕ್ಲೂಸಿವ್ ಎಡಿಷನ್ ಬಿಡುಗಡೆ ಮಾಡಿದೆ.
ಕಾರಿನ ಮೇಲ್ಗಡೆ ಸನ್‌ರೂಫ್ ಅಥವಾ ತೆರೆಯಲ್ಪಡುವ ಮೇಲ್ಚಾವಣಿ ಮಹೀಂದ್ರ ಎಕ್ಸ್‌ಯುವಿ500 ಕಾರಿನ ಪ್ರಮುಖ ವೈಶಿಷ್ಟ್ಯವಾಗಿದೆ. ಅಲ್ಲದೆ ಇನ್ನಿತರ ಅನೇಕ ವೈಶಿಷ್ಟ್ಯಗಳನ್ನು ಹೊಸ ಮಾದರಿ ಪಡೆದುಕೊಳ್ಳಲಿದೆ.

ಟಾಪ್ ಎಂಡ್ ಡಬ್ಲ್ಯು8 ವೆರಿಯಂಟ್‌ನಲ್ಲಿ ಲಭ್ಯವಿರುವ ಹೊಸ ಮಾದರಿಯ ಮುಂಬೈ ಎಕ್ಸ್ ಶೋ ರೂಂ ಬೆಲೆ 14.48 ಲಕ್ಷ ರು.ಗಳಾಗಿರಲಿದೆ.

ಸೀಮಿತ ಆವೃತ್ತಿ
ವಿಶೇಷವೆಂದರೆ ಮಹೀಂದ್ರ ಎಕ್ಸ್‌ಯುವಿ500 ಸನ್ ರೂಫ್ ಎಕ್ಸ್ ಕ್ಲೂಸಿವ್ ಎಡಿಷನ್ ಸೀಮಿತ 700 ಯುನಿಟ್‌ಗಳಷ್ಟೇ ಮಾತ್ರ ನಿರ್ಮಾಣವಾಗಲಿದೆ.

ಹೈ ಎಂಡ್ ವೈಶಿಷ್ಟ್ಯಗಳು
- ಎಲೆಕ್ಟ್ರಿಕ್ ಸನ್ ರೂಫ್,
- ಅನುಕೂಲಕರ ರಿವರ್ಸ್ ಕ್ಯಾಮೆರಾ,
- ವಾಯ್ಸ್ ಮೇಸೆಜಿಂಗ್ ಸಿಸ್ಟಂ,
- ಸ್ಪೋರ್ಟಿ ಅಲ್ಯೂಮಿನಿಯಂ ಪೆಡಲ್,
- ಸ್ಟೈಲಿಷ್ ಗ್ರೇ ಅಲಾಯ್ ವೀಲ್ಸ್,
- ಆರು ವಿಧಗಳಲ್ಲಿ ಪವರ್ ಹೊಂದಾಣಿಸಬಹುದಾದ ಚಾಲಕ ಸೀಟು (ಐಚ್ಛಿಕ),
- ಸ್ಕಫ್ ಪ್ಲೇಟ್,
- ಪವರ್ ವಿಂಡೋ
- ಆರು ಏರ್ ಬ್ಯಾಗ್ (ಮುಂಭಾಗ, ಹಿಂಭಾಗ, ಕರ್ಟೈನ್),
- ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರೋ,
- ಎಬಿಎಸ್, ಇಬಿಡಿ,
- ಹಿಲ್ ಹೋಲ್ಡ್ ಕಂಟ್ರೋಲ್,

ನಿರ್ವಹಣೆ
140 ಅಶ್ವಶಕ್ತಿ, ಎಂಹಾಕ್ ಎಂಜಿನ್, 330 ತಿರುಗುಬಲ, 6 ಸ್ಪೀಡ್ ಗೇರ್ ಬಾಕ್ಸ್, 5ನೇ ಜನಾಂಗದ ವೆರಿಯಬಲ್ ಜಿಯೋಮೆಟ್ರಿ ಟರ್ಬೊ ಚಾರ್ಜರ್

ತಂತ್ರಗಾರಿಕೆ
ಆರು ಇಂಚಿನ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಜಿಪಿಎಸ್, ಡಿವಿಡಿ, ಸಿಡಿ, ಎಂಪಿ3, ಎಫ್‌ಎಂ, ಯುಎಸ್‌ಬಿ, ಐಪೊಡ್ ಕನೆಕ್ಟಿವಿಟಿ, ಚಾಲಕ ಮಾಹಿತಿ ಸಿಸ್ಟಂ, ಹೈಬ್ರಿಡ್ ಟೆಕ್ನಾಲಜಿ, ಸಂಪೂರ್ಣವಾಗಿ ಆಟೋಮ್ಯಾಟಿಕ್ ತಾಪಮಾನ ನಿಯಂತ್ರಣ, ಡ್ಯುಯಲ್ ಎಚ್‌ವಿಎಸಿ. ಸ್ಟಾಟಿಕ್ ಬೆಂಡಿಂಗ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಲ್‌ಇಡಿ ಪಾರ್ಕಿಂಗ್ ಲೈಟ್, ವಾಯ್ಸ್ ಕಮಾಂಡ್, ಸ್ಟೀರಿಂಗ್ ವೀಲ್ ಮೇಲೆ ಕ್ರೂಸ್ ಆಂಡ್ ಆಡಿಯೋ ಕಂಟ್ರೋಲ್, ಸ್ಮಾರ್ಟ್ ರೈನ್, ಲೈಟ್ ಸೆನ್ಸಾರ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಸಿಸ್ಟಂ, ಹೊಂದಾಣಿಸಬಹುದಾದ ಔಟ್ ಸೈಡ್ ರಿಯರ್ ವ್ಯೂ ಮಿರರ್.

ಸುರಕ್ಷತೆ

ಆರಾಮ ಹಾಗೂ ಅನುಕೂಲತೆ
ಮಡಚಬಹುದಾದ ಎರಡನೇ ಹಾಗೂ ಮೂರನೇ ಸಾಲಿನ ಆಸನ,
ಮೂಡ್ ಲೈಟಿಂಗ್,
ಟಿಲ್ಟ್ ಮತ್ತು ಟೆಲಿಸ್ಕಾಪಿಕ್ ಸ್ಟೀರಿಂಗ್

ಈಗ ಮಹೀಂದ್ರ ಎಕ್ಸ್‌ಯುವಿ500 ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.


Click it and Unblock the Notifications








