ಇದು ಸಾಕೇ ಇನ್ನು ಬೇಕೇ? ಮಹೀಂದ್ರದಿಂದ 4 ಹೊಸ ಮಾಡೆಲ್‌ಗಳು
ದೇಶದ ಎಸ್‌ಯುವಿ ದೈತ್ಯ ಕಂಪನಿಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ನಿಕಟ ಭವಿಷ್ಯದಲ್ಲಿ ಭಾರತದಲ್ಲಿ ನಾಲ್ಕು ಹೊಸ ಮಾದರಿಗಳನ್ನು ಪರಿಚಯಿಸಲಿದೆ. ನೂತನ ಫ್ಲ್ಯಾಟ್‌ಫಾರ್ಮ್‌ನಲ್ಲಿ ಈ ಎಲ್ಲ ಮಹೀಂದ್ರ ಕಾರುಗಳು ನಿರ್ಮಾಣವಾಗಲಿದೆ. ಈ ಬಗ್ಗೆ ಹೇಳಿಕೆ ಕೊಟ್ಟಿರುವ ಮಹೀಂದ್ರ ಹೊಸತಾದ ಫ್ಲ್ಯಾಟ್‌ಫಾರ್ಮ್ ರಚಿಸುವುದರತ್ತ ಮಹೀಂದ್ರ ಡಿಸೈನ್ ಹಾಗೂ ಎಂಜಿನಿಯರ್‌ಗಳು ಕಾರ್ಯ ಮಗ್ನವಾಗಿದ್ದಾರೆ ಎಂದಿದೆ.
ಮಹೀಂದ್ರ ಕಾರುಗಳ ಫುಲ್ ಬಾಡಿ ಸ್ಕ್ಯಾನಿಂಗ್
ಮಹೀಂದ್ರ ನೂತನ ಫ್ಲ್ಯಾಟ್‌ಫಾರ್ಮ್, ಯುನಿಲಿಟಿ ವೆಹಿಕಲ್, ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಮತ್ತು ಸಣ್ಣ ಹಾಗೂ ಹಗುರ ವಾಣಿಜ್ಯ ವಾಹನಗಳನ್ನು ಹೊಂದಿರಲಿದೆ. ನೂತನ ಸೆಗ್ಮೆಂಟ್‌ನಲ್ಲಿ ವಾಹನಗಳು ಬಿಡುಗಡೆ ಮಾಡಿದರೆ ಬಳಿಕ ಸಬ್ ಸೆಗ್ಮೆಂಟ್‌ನತ್ತ ಗಮನಿವಹಿಸಬೇಕಾದ ಅಗತ್ಯವಿಲ್ಲ ಎಂಬುದು ಮಹೀಂದ್ರ ನಿಲುವಾಗಿದೆ. ಯಾಕೆಂದರೆ ಯಾವ ಸೆಗ್ಮೆಂಟ್‌ಗೂ ಕಾಲಿಟ್ಟರೂ ಯಶಸ್ಸು ಸಾಧಿಸುವ ನಂಬಿಕೆಯನ್ನು ಕಂಪನಿ ಹೊಂದಿದೆ.

2015ರ ವೇಳೆಗೆ ಮಹೀಂದ್ರ ಹೊಸ ಮಾದರಿಗಳು ಸಿದ್ಧವಾಗಲಿದೆ. ಬಳಿಕ 2016ರಲ್ಲಿ ಮಹೀಂದ್ರ ಎಕ್ಸ್‌ಕ್ಲೂಸಿವ್ ವಾಹನ ಮಳಿಗೆಯನ್ನು ತಲುಪಲಿದೆ.

ಅದೇ ಹೊತ್ತಿಗೆ ಎಕ್ಸ್‌ಯುವಿ500 ತಲಹದಿಯಲ್ಲಿ ನೂತನ ಕಾಂಪಾಕ್ಟ್ ಎಸ್‌ಯುವಿ ಲಾಂಚ್ ಮಾಡುವ ಇರಾದೆಯನ್ನು ಮಹೀಂದ್ರ ಹೊಂದಿದೆ.

ಎಸ್101 ಕೋಡ್ ಪಡೆದುಕೊಂಡಿರುವ ನೂತನ ಕಾರು, ಪ್ರಮುಖವಾಗಿಯೂ ಫೋರ್ಡ್ ಇಕೊಸ್ಪೋರ್ಟ್, ರೆನೊ ಡಸ್ಟರ್ ಮತ್ತು ನಿಸ್ಸಾನ್ ಟೆರೆನೊಗೆ ಪ್ರತಿಸ್ಪರ್ಧಿಯೆನಿಸಲಿದೆ.

ಅಷ್ಟೇ ಯಾಕೆ ಸ್ಕಾರ್ಪಿಯೊ ಫೇಸ್‌ಲಿಫ್ಟ್ ಆವೃತ್ತಿಯನ್ನು ಸಹ ಮಹೀಂದ್ರ ಮುಂದಿನ ವರ್ಷ ಪರಿಚಯಿಸಲಿದೆ.

ಇನ್ನು ನಾಶಿಕ್ ಮೂಲದ ಸಂಸ್ಥೆಯೊಂದು ಹಗುರ ವಾಣಿಜ್ಯ ವಾಹನದ ಅಭಿವೃದ್ಧಿಯಲ್ಲಿ ತೊಡಗಿದ್ದು, 2016ರ ವೇಳೆಗೆ ಮಾರುಕಟ್ಟೆಗೆ ಪರಿಚಯಿಸಲಿದೆ. ಇದು ಟಾಟಾ ಮೋಟಾರ್ಸ್ ಎಲ್‌ಸಿವಿ ವಾಹನಗಳ ಸವಾಲನ್ನು ಸ್ವೀಕರಿಸಲಿದೆ.

ಒಟ್ಟಾರೆಯಾಗಿ ಮಹೀಂದ್ರದ ಹೊಸ ಫ್ಲ್ಯಾಟ್‌ಫಾರ್ಮ್‌ಗಳು 2016 ನ್ಯೂ ಜನರೇಷನ್ ಬೊಲೆರೊ, ಸ್ಕಾರ್ಪಿಯೊ ಹಾಗೂ ಕ್ಲೈಲೋಗಳಿಗೆ ಭದ್ರ ತಲಹದಿಯನ್ನು ರೂಪಿಸಲಿದೆ.


Click it and Unblock the Notifications








