ವೈಬ್ vs ಅಮೇಜ್? ಯಾವ ಕಾರಲ್ಲಿ ಹೆಚ್ಚು ಲಗ್ಗೇಜ್ ಸ್ಪೇಸ್?
ನೂತನ ಕಾರು ಕೊಂಡುಕೊಳ್ಳುವ ಗ್ರಾಹಕರು ತಿಳಿಯಬಯಸುವ ಪ್ರಮುಖ ಮೂರು ವಿಚಾರಗಳೆಂದರೆ ದರ, ಮೈಲೇಜ್ ಹಾಗೂ ಲಗ್ಗೇಜ್ ಸ್ಪೇಸ್. ಈ ನಡುವೆ ಕಳೆದ ದಿನವಷ್ಟೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಮಹೀಂದ್ರ ವೆರಿಟೊ ವೈಬ್ ಭಾರಿ ಸೆನ್ಸೆಷನಲ್ ಕ್ರಿಯೆಟ್ ಮಾಡುತ್ತಿದೆ.
ಈ ಹಿಂದಿನ ಮಹೀಂದ್ರ ವೆರಿಟೊಗೆ ಹೋಲಿಸಿದರೆ ಮಹೀಂದ್ರ ವೈಬ್ ಸಾಕಷ್ಟು ಚೊಕ್ಕದಾಗಿದೆ. ಸಬ್ ಫೋರ್ ಮೀಟರ್‌ನಲ್ಲಿ ಆಗಮನವಾಗಿರುವುದರಿಂದ ಮಾರುಕಟ್ಟೆಯಲ್ಲಿ ಇತರ ಸ್ಪರ್ಧಾಳುಗಳಿಗೆ ಕಠಿಣ ಪೈಪೋಟಿ ನೀಡಲು ಸಾಧ್ಯವಾಗಲಿದೆ.
3991 ಎಂಎಂ ಉದ್ದಕ್ಕೆ ಕತ್ತರಿ ಬಿದ್ದಿರುವುದರಿಂದ ಮಹೀಂದ್ರ ವೈಬ್ ದರದಲ್ಲೂ ಭಾರಿ ಇಳಿಕೆ ಕಂಡುಬಂದಿದೆ. ಇದರಿಂದ ಲಗ್ಗೇಜ್ ಸ್ಪೇಸ್ ಕಡಿಮೆಯಾಗಿದೆಯೇ ಎಂಬುದು ಗ್ರಾಹಕರನ್ನು ಕಾಡುತ್ತಿರುವ ಪ್ರಶ್ನೆಯಾಗಿತ್ತು. ಆದರೆ ಇದಕ್ಕೀಗ ಉತ್ತರ ದೊರಕ್ಕಿದ್ದು, ಉತ್ತಮ ಲಗ್ಗೇಜ್ ಸ್ಪೇಸ್ ಕಾದುಕೊಳ್ಳುವಲ್ಲಿ ವೈಬ್ ಯಶಸ್ವಿಯಾಗಿದೆ.
ಇನ್ನು ಬೇಸ್ ವೆರಿಯಂಟ್ ದರ 5.6 ಲಕ್ಷ ರು.ಗಳಿಗೆ ಮಾರುಕಟ್ಟೆ ಆಗಮಿಸಿರುವುದು ವೈಬ್ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಹಾಗಿದ್ದರೂ ಹಿಂದುಗಡೆಯಿಂದ ನೋಡುವಾಗ ವಿನೂತನ ಶೈಲಿಯನ್ನು ಪಡೆದುಕೊಂಡಿದೆ. ಮತ್ತೊಂದೆಡೆ ಹೋಂಡಾ ಅಮೇಜ್ 400 ಲೀಟರ್ ಲಗ್ಗೇಜ್ ಸ್ಪೇಸ್ ಹೊಂದಿದೆ. ಹಾಗಿದ್ದರೂ ವೈಬ್‌ಗೆ ಹೋಲಿಸಿದಾಗ ದರ ಸ್ವಲ್ಪ ದುಬಾರಿಯೆನಿಸುತ್ತಿದೆ.
ಸಾಮಾನ್ಯವಾಗಿ ಬೂಟ್ ಸ್ಪೇಸ್ ಅಥವಾ ಲಗ್ಗೇಜ್ ಸ್ಪೇಸನ್ನು ಲೀಟರ್‌ನಲ್ಲಿ ಅಳೆಯಲಾಗುತ್ತದೆ. ಹಾಗಿದ್ದರೆ ಬನ್ನಿ ಮಹೀಂದ್ರ ವೆರಿಟೊ ವೈಬ್ vs ಹೋಂಡಾ ಅಮೇಜ್ vs ಮಾರುತಿ ಸ್ವಿಫ್ಟ್ ಡಿಜೈರ್ vs ಮಾರುತಿ ಸ್ವಿಫ್ಟ್ vs ಹ್ಯುಂಡೈ ಐ20 vs ಫೋಕ್ಸ್‌ವ್ಯಾಗನ್ ಪೊಲೊ ನಡುವಣ ಬೂಟ್ ಸ್ಪೇಸ್ ಹಾಗೂ ದರ ಮಾಹಿತಿಯನ್ನು ಪಡೆದುಕೊಳ್ಳೋಣವೇ...

ಬೂಟ್ ಸ್ಪೇಸ್: 330 ಲೀಟರ್
ಡೀಸೆಲ್ ವೆರಿಯಂಟ್ ದರ ಮಾಹಿತಿ: 5.6 ಲಕ್ಷ ರು. (ಎಕ್ಸ್ ಶೋ ರೂಂ)

ಬೂಟ್ ಸ್ಪೇಸ್: 400 ಲೀಟರ್
ಡೀಸೆಲ್ ವೆರಿಯಂಟ್ ದರ ಮಾಹಿತಿ: 6 ಲಕ್ಷ ರು. (ಎಕ್ಸ್ ಶೋ ರೂಂ)

ಬೂಟ್ ಸ್ಪೇಸ್: 315 ಲೀಟರ್
ಡೀಸೆಲ್ ವೆರಿಯಂಟ್ ದರ ಮಾಹಿತಿ: 6.4 ಲಕ್ಷ ರು. (ಎಕ್ಸ್ ಶೋ ರೂಂ)

ಬೂಟ್ ಸ್ಪೇಸ್: 204 ಲೀಟರ್
ಡೀಸೆಲ್ ವೆರಿಯಂಟ್ ದರ ಮಾಹಿತಿ: 5.7 ಲಕ್ಷ ರು. (ಎಕ್ಸ್ ಶೋ ರೂಂ)

ಬೂಟ್ ಸ್ಪೇಸ್: 295 ಲೀಟರ್
ಡೀಸೆಲ್ ವೆರಿಯಂಟ್ ದರ ಮಾಹಿತಿ: 6 ಲಕ್ಷ ರು. (ಎಕ್ಸ್ ಶೋ ರೂಂ)

ಬೂಟ್ ಸ್ಪೇಸ್: 280 ಲೀಟರ್
ಡೀಸೆಲ್ ವೆರಿಯಂಟ್ ದರ ಮಾಹಿತಿ: 6.11 ಲಕ್ಷ ರು. (ಎಕ್ಸ್ ಶೋ ರೂಂ)


Click it and Unblock the Notifications








