ಪ್ರಸಕ್ತ ಸಾಲಿನಲ್ಲೇ ಮಹೀಂದ್ರ ವಿಶೇಷ ಆವೃತ್ತಿ ಲಾಂಚ್
ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಮಹೀಂದ್ರ, ಪ್ರಸಕ್ತ ಸಾಲಿನಲ್ಲೇ ಎಕ್ಸ್‌ಯುವಿ500 ಕ್ರೀಡಾ ಬಳಕೆ ವಾಹನದ (ಎಸ್‌ಯುವಿ) ವಿಶೇಷ ಆವೃತ್ತಿಯೊಂದನ್ನು ಲಾಂಚ್ ಮಾಡಲಿದೆ.
ವಿಶೇಷವೆಂದರೆ ಈ ನೂತನ ಕಾರಿನ ಒಳಗೂ ಹಾಗೂ ಹೊರಗೂ ಕೆಂಪು ಬಣ್ಣಗಳ ಮಿಶ್ರಣವನ್ನು ಪಡೆದುಕೊಳ್ಳಲಿದೆ. ಇದು ಕಾರಿನ ಅಂದತೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ಟಾಪ್ ಡಬ್ಲ್ಯು8 ವೆರಿಯಂಟ್‌ನಲ್ಲಿ ಮಾತ್ರ ಮಹೀಂದ್ರ ಎಕ್ಸ್‌ಯುವಿ500 ವಿಶೇಷ ಆವೃತ್ತಿಯು ಲಭ್ಯವಿರಲಿದೆ. ಹಾಗೆಯೇ ಫ್ರಂಟ್ ಹಾಗೂ ರಿಯರ್ ಬಂಪರ್ ಸೇರಿದಂತೆ ಕೆಂಪು ಗ್ರಾಫಿಕ್ಸ್ ಅಲಾಯ್ ವೀಲ್‌ಗಳನ್ನು ಪಡೆದುಕೊಳ್ಳಲಿದೆ.

ಕೆಂಪು ಬಣ್ಣದ ಮಿಶ್ರಣವು ಕಾರಿನ ಹೊರಂಗಿನ ವಿನ್ಯಾಸವನ್ನು ಇನ್ನಷ್ಟು ಅಂದವಾಗಿಸಲಿದೆ. ಕಾರಿನ ಒಳಗಡೆಯೂ ಕಾಸ್ಮೆಟಿಕ್ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ.

ಇನ್ನುಳಿದಂತೆ ಇದೀಗ ಇರುವ 2.2 ಲೀಟರ್ ಎಂಹಾಕ್ (mHawk) ಫೋರ್ ಸಿಲಿಂಡರ್ ಎಂಜಿನ್ ಗರಿಷ್ಠ 140 ಬಿಎಚ್‌ಪಿ (330 ಎನ್‌ಎಂ ಪೀಕ್ ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ನಿಮ್ಮ ಮಾಹಿತಿಗಾಗಿ, 2011ನೇ ಲಾಂಚ್ ಆಗಿದ್ದ ಎಸ್‌ಯುವಿ ದೈತ್ಯ ಮಹೀಂದ್ರ ಎಕ್ಸ್‌ಯುವಿ500 ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಿತ್ತು.

ಇತ್ತೀಚೆಗಷ್ಟೇ ಡಬ್ಲ್ಯು4 ಬೇಸ್ ವೆರಿಯಂಟ್ ಬಿಡುಗಡೆ ಮಾಡಲಾಗಿತ್ತು. ಇದು ಪ್ರಮುಖವಾಗಿಯೂ ರೆನೊ ಡಸ್ಟರ್, ನಿಸ್ಸಾನ್ ಟೆರನೊ, ಟಾಟಾ ಸಫಾರಿ ಸ್ಟ್ರೋಮ್ ಮತ್ತು ಫೋರ್ಡ್ ಇಕೊಸ್ಪೋರ್ಟ್ ಆವೃತ್ತಿಗಳಿಗೆ ಸ್ಪರ್ಧಿಯಾಗಿತ್ತು.

ಈ ನಡುವೆ ಹೊಸ ವರ್ಷದಲ್ಲಿ ಮಹೀಂದ್ರ ಎಕ್ಸ್‌ಯುವಿ500 ಕಾರಿಗೆ ಶುಭ ಸುದ್ದಿಯೊಂದು ಹರಸಿಕೊಂಡು ಬಂದಿದ್ದು, ಚಿರತೆ ಎಂದೇ ಜನಪ್ರಿಯಗೊಂಡಿರುವ ಈ ಎಸ್‌ಯುವಿ ಒಟ್ಟು 75000 ಯುನಿಟ್ ಮಾರಾಟ ಕಂಡಿವೆ.

ದೇಶದ ಎಸ್‌ಯುವಿಗಳ ಪೈಕಿ ಅತಿ ಹೆಚ್ಚು ಪ್ರಶಸ್ತಿ ಗಿಟ್ಟಿಸಿಕೊಂಡಿರುವ ಕಾರೆಂಬ ಗೌರವಕ್ಕೂ ಪಾತ್ರವಾಗಿರುವ ಮಹೀಂದ್ರ ಎಕ್ಸ್‌ಯುವಿ500 ಇದುವರೆಗೆ 25 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.


Click it and Unblock the Notifications