ಮಾರುತಿ ಸಾಧನೆಗೆ ಎರ್ಟಿಗಾ ಕೈಗನ್ನಡಿ

By Nagaraja

ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಾಧಿಸಿರುವ ಯಶಸ್ಸಿನಲ್ಲಿ ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಎರ್ಟಿಗಾ ಪಾತ್ರ ಬಹುದೊಡ್ಡದಾಗಿದೆ.

ಭಾರತ ಪ್ರಯಾಣಿಕ ಮಾರುಕಟ್ಟೆಯಲ್ಲಿ ತನ್ನದೇ ನೂತನ ಲೈಫ್ ಯುಟಿಲಿಟಿ ವೆಹಿಕಲ್ (ಎಲ್‌ಯುವಿ) ಎಂಬ ವಿಭಾಗ ಸೃಷ್ಟಿ ಮಾಡಿದ್ದ ಎರ್ಟಿಗಾ, ಬಿಡುಗಡೆಯಾದ ಕೇವಲ 17 ತಿಂಗಳೊಳಗೆ ಒಂದು ಲಕ್ಷ ಯುನಿಟ್ ಮಾರಾಟ ತಲುಪುವ ಮೂಲಕ ನೂತನ ಮೈಲುಗಲ್ಲು ಸ್ಥಾಪಿಸಿದೆ.

5.99 ಲಕ್ಷ ರು.ಗಳಿಂದ 8.71 ಲಕ್ಷ ರು.ಗಳ ಅಸುಪಾಸಿನಲ್ಲಿ ಲಭ್ಯವಿರುವ ಮಾರುತಿ ಎರ್ಟಿಗಾ ದೈನಂದಿನ ಸೇರಿದಂತೆ ವಿಕೆಂಡ್ ಪ್ರವಾಸಗಳಿಗೆ ಹೆಚ್ಚು ಸೂಕ್ತವೆನಿಸಿದೆ. ಇದರ ಜತೆ ಇತರ ಅನೇಕ ವೈಶಿಷ್ಟ್ಯಗಳನ್ನು ಹೊಂದಿರುವ ಎರ್ಟಿಗಾ, ಟೊಯೊಟಾ ಇನ್ನೋವಾಗೆ ನೇರ ಪ್ರತಿಸ್ಪರ್ಧಿಯೆನಿಸಿದೆ.

ಎಂಜಿನ್

ಎಂಜಿನ್

1248ಸಿಸಿ, ಡೀಸೆಲ್, 89 ಬಿಎಚ್‌ಪಿ @ 4000 ಆರ್‌ಪಿಎಂ ಪವರ್

1373ಸಿಸಿ, ಸಿಎನ್‌ಜಿ, 80 ಬಿಎಚ್‌ಪಿ @ 6000 ಆರ್‌ಪಿಎಂ ಪವರ್

1373ಸಿಸಿ, ಪೆಟ್ರೋಲ್, 93 ಬಿಎಚ್‌ಪಿ @ 6000 ಆರ್‌ಪಿಎಂ ಪವರ್

1373ಸಿಸಿ, ಸಿಎನ್‌ಜಿ, 94 ಬಿಎಚ್‌ಪಿ @ 6000 ಆರ್‌ಪಿಎಂ ಪವರ್

ಗೇರ್ ಬಾಕ್ಸ್: 5 ಸ್ಪೀಡ್, ಮ್ಯಾನುವಲ್, ಫ್ರಂಟ್ ವೀಲ್ ಡ್ರೈವ್

ಸ್ಟೀರಿಂಗ್: ಪವರ್ ಸ್ಟೀರಿಂಗ್

7 ಸೀಟು

7 ಸೀಟು

ಮಾರುತಿ ಎರ್ಟಿಗಾ ಪ್ರಮುಖ ವಿಶೇಷತೆಯೆಂದರೆ ಇದನ್ನು ದೈನಂದಿನ ಬಳಕೆ ಸೇರಿದಂತೆ ವಾರಂತ್ಯದಲ್ಲಿ ಪ್ರವಾಸಕ್ಕೆ ತರೆಳಲು ಅಥವಾ ಇತರ ದೀರ್ಘ ದೂರ ಪಯಣಕ್ಕಾಗಿ ಬಳಕೆ ಮಾಡಬಹುದಾಗಿದೆ. ಆದರೆ ಮೂರನೇ ಸಾಲಿನಲ್ಲಿ ಲೆಗ್ ರೂಂ ಕಡಿಮೆಯಾಗಿರುವುದು ಸ್ವಲ್ಪ ಹಿನ್ನಡೆಯಾಗಿದೆ.

ಸ್ಫೂರ್ತಿ ತುಂಬಿದ ವಿಶೇಷ ಆವೃತ್ತಿ

ಸ್ಫೂರ್ತಿ ತುಂಬಿದ ವಿಶೇಷ ಆವೃತ್ತಿ

ಕೆಲವು ತಿಂಗಳುಗಳ ಹಿಂದೆಯಷ್ಟೇ ಮಾರುತಿ ಎರ್ಟಿಗಾ ವಿಶೇಷ ಆವೃತ್ತಿಯನ್ನು ಲಾಂಚ್ ಮಾಡಿದ್ದ ಮಾರುತಿ, ಒಂದರ ಸಂಭ್ರಮವನ್ನು ಯಶಸ್ವಿಯಾಗಿ ಆಚರಿಸಿತ್ತು. ಇದೀಗ ಆಗಸ್ಟ್ 31ರ ವೇಳೆಗೆ ಒಂದು ಲಕ್ಷ ಯುನಿಟ್ ಮಾರಾಟ ಸಂಖ್ಯೆಯನ್ನು ದಾಟಿರುವುದಾಗಿ ಕಂಪನಿ ತಿಳಿಸಿದೆ. ನಿಮ್ಮ ಮಾಹಿತಿಗಾಗಿ ಎರ್ಟಿಗಾ 2012 ಎಪ್ರಿಲ್ 12ರಂದು ಭಾರತ ಮಾರುಕಟ್ಟೆ ಪ್ರವೇಶಿಸಿತ್ತು.

ಮೈಲೇಜ್

ಮೈಲೇಜ್

ಇನ್ನು ಮಾರುತಿ ಎರ್ಟಿಗಾ ಪೆಟ್ರೋಲ್ ವರ್ಷನ್ ಪ್ರತಿ ಲೀಟರ್‌ಗೆ 16.02 ಕೀ.ಮೀ. ಸರಾಸರಿ ಮೈಲೇಜ್ ನೀಡುತ್ತದೆ. ಹಾಗೆಯೇ ಡೀಸೆಲ್ ವರ್ಷನ್ ಪ್ರತಿ ಲೀಟರ್‌ಗೆ 20.77 ಕೀ.ಮೀ. ಸರಾಸರಿ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ದರ ಮಾಹಿತಿ (ಆನ್ ರೋಡ್ ಬೆಂಗಳೂರು)

ದರ ಮಾಹಿತಿ (ಆನ್ ರೋಡ್ ಬೆಂಗಳೂರು)

  • ಎಲ್‌ಎಕ್ಸ್‌ಐ: 7.5 ಲಕ್ಷ ರು.
  • ಎಲ್‌ಎಕ್ಸ್‌ಐ ಸಿಎನ್‌ಜಿ: 8.2 ಲಕ್ಷ ರು.
  • ವಿಎಕ್ಸ್‌ಐ: 8.3 ಲಕ್ಷ ರು.
  • ವಿಎಕ್ಸ್‌ಐ ಎಬಿಎಸ್: 8.4 ಲಕ್ಷ ರು.
  • ವಿಎಕ್ಸ್‌ಐ ಸಿಎನ್‌ಜಿ: 9.1 ಲಕ್ಷ ರು.
  • ಎಲ್‌ಡಿಐ: 9.2 ಲಕ್ಷ ರು.
  • ಝಡ್‌ಡಿಐ: 9.3 ಲಕ್ಷ ರು.
  • ವಿಡಿಐ: 10 ಲಕ್ಷ ರು.
  • ಝಡ್‌ಡಿಐ: 10.8 ಲಕ್ಷ ರು.
  • ಪ್ರತಿಸ್ಪರ್ಧಿ

    ಪ್ರತಿಸ್ಪರ್ಧಿ

    ಪ್ರಸ್ತುತ ಇನ್ನಷ್ಟೇ ಆಗಮನವಾಗಲಿರುವ ಹೋಂಡಾ ಬ್ರಿಯೊ ತಲಹದಿಯ ಎಂಪಿವಿ ಹಾಗೂ ದಟ್ಸನ್ ಗೊ ಪ್ಲಸ್ ಆವೃತ್ತಿಗಳು, ಎರ್ಟಿಗಾಗೆ ನಿಕಟ ಪೈಪೋಟಿ ಒಡ್ಡುವ ಸಾಧ್ಯತೆಗಳಿವೆ. ಇವೆರಡು ಮಾಡೆಲ್‌ಗಳು ಮುಂದಿನ ವರ್ಷದಲ್ಲಿ ಭಾರತ ರಸ್ತೆ ಪ್ರವೇಶಿಸಲಿದೆ.

    ಮಾರುತಿ ಸಾಧನೆಗೆ ಎರ್ಟಿಗಾ ಕೈಗನ್ನಡಿ

    ಹಾಗೆಯೇ ಮಾರುತಿ ಎರ್ಟಿಗಾ ಗ್ರೀನ್ ಹೆಸರಲ್ಲಿ ಸಿಎನ್‌ಜಿ ವೆರಿಯಂಟ್ ಮಾರುಕಟ್ಟೆಗೆ ಪರಿಚಿಸಲಾಗಿತ್ತು. ಇದು ಎಲ್‌ಎಕ್ಸ್‌ಐ ಮತ್ತು ವಿಎಕ್ಸ್‌ಐ ವೆರಿಯಂಟ್‌ಗಳಲ್ಲಿ ಸಿಎನ್‌ಜಿ ಕಿಟ್ ಲಭ್ಯವಿದೆ.

    ಕಲರ್ ವೆರಿಯಂಟ್

    ಕಲರ್ ವೆರಿಯಂಟ್

    Serene Blue

    Ecru Beige

    Fire Brick Red

    Granite Grey

    Silky Silver

    Dusky Brown

    Superio White

More from DriveSpark

Article Published On: Thursday, September 19, 2013, 11:52 [IST]
English summary
Sales of the Maruti-Suzuki Ertiga have crossed the 100,000 mark. This milestone comes in a short 17 months since the car was launched on April 12, 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+