ಮಾರುತಿ ವ್ಯಾಗನಾರ್ ಡೀಸೆಲ್ ಕಾರು ಸದ್ಯದಲ್ಲೇ ಲಾಂಚ್?
ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ವ್ಯಾಗನಾರ್ ಆವೃತ್ತಿಯ ಡೀಸೆಲ್ ವರ್ಷನ್ ಸದ್ಯದಲ್ಲೇ ಲಾಂಚ್ ಮಾಡಲಿರುವುದಾಗಿ ವರದಿಗಳು ತಿಳಿಸಿವೆ.
ನಾವು ಈ ಹಿಂದೆಯೇ ಸಣ್ಣ ಕಾರುಗಳಲ್ಲಿ ಟ್ವಿನ್ ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಆಳವಡಿಸುವ ಮಾರುತಿ ಮಾತೃಸಂಸ್ಥೆಯಾದ ಸುಜುಕಿ ಯೋಜನೆ ಬಗ್ಗೆ ಮಾಹಿತಿ ಕೊಟ್ಟಿದ್ದೆವು. ಇದಕ್ಕೆ ಪೂರಕವೆಂಬಂತೆ ವ್ಯಾಗನಾರ್ ಡೀಸೆಲ್ ಎಂಜಿನ್ ಬರಲಿರುವುದಾಗಿ ವಾಹನ ಮೂಲಗಳು ತಿಳಿಸಿದೆ.
ಸದ್ಯ ಬಂದಿರುವ ಮಾಹಿತಿ ಪ್ರಕಾರ ಇದರತ್ತ ಕಾರ್ಯಮಗ್ನವಾಗಿರುವ ಮಾರುತಿ, ನಿಕಟ ಭವಿಷ್ಯದಲ್ಲೇ ಅಂದರೆ ಮುಂಬರುವ ಹಬ್ಬದ ಆವೃತ್ತಿಯಲ್ಲೇ ವ್ಯಾಗನಾರ್ ಡೀಸೆಲ್ ಕಾರು ಪರಿಚಯಿಸುವ ಸಾಧ್ಯತೆಗಳಿವೆ.

ವ್ಯಾಗನಾರ್ ಡೀಸೆಲ್ ಕಾರು
ಟರ್ಬೊ ಡೀಸೆಲ್ ಎಂಜಿನ್ ನಿಯಂತ್ರಿತ ವ್ಯಾಗನಾರ್ ಬಿಡುಗಡೆಯಾಗಲಿರುವ ಸುದ್ದಿ ಹೊಸ ವಿಚಾರವೇನಲ್ಲ. ಆದರೆ ಸದ್ಯದಲ್ಲೇ ರಸ್ತೆಗಿಳಿಯುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿದೆ.

ಮೈಲೇಜ್
ನೂತನ ವ್ಯಾಗನಾರ್‌ನಲ್ಲಿ ಆಳವಡಿಸಲಾಗುವ 800ಸಿಸಿ ಟ್ವಿನ್ ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್, ಪ್ರತಿ ಲೀಟರ್‌ಗೆ 25 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ವ್ಯಾಗನಾರ್ ಸ್ಟ್ರೀಂಗ್ರೇ
ಹಾಗಿದ್ದರೂ ಈ ನೂತನ 800ಸಿಸಿ ಟರ್ಬೊ ಡೀಸೆಲ್ ಎಂಜಿನ್, ಹೊಸದಾಗಿ ಆಗಮನವಾಗಲಿರುವ ಸ್ಟ್ರೀಂಗ್ರೇ ಆವೃತ್ತಿಯಲ್ಲಿ ಆಳವಡಿಸಲಾಗುವುದೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಹಬ್ಬದ ಆವೃತ್ತಿ
ಮುಂದಿನ ಒಂದು ತಿಂಗಳಲ್ಲಿ ಅಂದರೆ ದೀಪಾವಳಿ ಹಬ್ಬದ ಆವೃತ್ತಿ ವೇಳೆಯಲ್ಲಿ ನೂತನ ವ್ಯಾಗನಾರ್ ಡೀಸೆಲ್ ಕಾರು ಆಗಮನವಾಗುವ ನಿರೀಕ್ಷೆಯಿದೆ.

ಮಾರುತಿ ವ್ಯಾಗನಾರ್
ಸದ್ಯ ಲಭ್ಯವಿರುವ ವ್ಯಾಗನಾರ್ ವರ್ಷನ್, 1 ಲೀಟರ್ ಕೆ ಸಿರೀಸ್ ಟ್ರಿಪಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಪೆಟ್ರೋಲ್, ಸಿಎನ್‌ಜಿ-ಪೆಟ್ರೋಲ್ ಹಾಗೂ ಎಲ್‌ಪಿಜಿ-ಪೆಟ್ರೋಲ್ ಇಂಧನ ಮಾದರಿಗಳಲ್ಲಿ ಚಲಿಸುತ್ತಿದೆ.

ಹ್ಯುಂಡೈ ಗ್ರಾಂಡ್ ಐ10 ಪ್ರತಿಸ್ಪರ್ಧಿ
ಮಾರುತಿಯಿಂದ ಲಾಂಚ್ ಆಗಲಿರುವ ನೂತನ ವ್ಯಾಗನಾರ್ ಡೀಸೆಲ್ ಕಾರು ಹ್ಯುಂಡೈನಿಂದ ಸದ್ಯದಲ್ಲೇ ಬಿಡುಗಡೆಯಾಗಲಿರುವ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರಿಗೆ ಪ್ರತಿಸ್ಪರ್ಧಿ ಎನಿಸಿಕೊಳ್ಳಲಿದೆ.


Click it and Unblock the Notifications








