2016ರ ವೇಳೆಗೆ ಮಾರುತಿಯಿಂದ 3 ಎಸ್‌ಯುವಿ ನಿರೀಕ್ಷಿಸಿ!
ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, 2016ರ ವೇಳೆಗೆ ಮೂರು ನೂತನ ಕ್ರೀಡಾ ಬಳಕೆಯ ವಾಹನಗಳನ್ನು (ಎಸ್‌ಯುವಿ) ಬಿಡುಗಡೆಗೊಳಿಸುವ ಮಹತ್ತರ ಯೋಜನೆ ಹೊಂದಿದೆ.
ವಾಹನ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಇದುವರೆಗೆ ಹ್ಯಾಚ್‌ಬ್ಯಾಕ್‌ಗಳಂತಹ ಸಣ್ಣ ಕಾರು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆದಿದ್ದ ಮಾರುತಿ ಇದೀಗ ತನ್ನ ಗಮನವನ್ನು ಎಸ್‌ಯುವಿ ಸೇರಿದಂತೆ ಇತರ ಸೆಗ್ಮೆಂಟ್‌ಗಳ ಕಡೆಗೂ ವಹಿಸುತ್ತಿದೆ.
ದಿನದಿಂದ ದಿನಕ್ಕೆ ದೇಶೀಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಲೇ ಇವೆ. ಇದು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಫೋರ್ಡ್ ಇಕೊಸ್ಪೋರ್ಟ್, ರೆನೊ ಡಸ್ಟರ್‌ಗೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅಂದ ಹಾಗೆ ಮಾರುತಿ ಬಿಡುಗಡೆಯಾಗಲಿರುವ ಎಸ್‌ಯುವಿ ಕಾರುಗಳು ಯಾವುವು? ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಎಸ್ ಕ್ರಾಸ್ ಎಸ್‌ಎಕ್ಸ್4 ಕ್ರಾಸೋವರ್
ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್‌ಗಳಂತಹ ನಿಕಟ ಪ್ರತಿಸ್ಪರ್ಧಿಗಳನ್ನು ಎದುರಿಸಲು ಮಾರುತಿ ಸುಜುಕಿ, ಎಸ್ ಕ್ರಾಸ್ ಎಸ್‌ಎಕ್ಸ್4 ಕ್ರಾಸೋವರ್ ಎಸ್‌ಯುವಿ ಕಾರುಗಳನ್ನು ಸಿದ್ಧಪಡಿಸುತ್ತಿದೆ.

ಪೆಟ್ರೋಲ್-ಡೀಸೆಲ್ ಎಂಜಿನ್
ಜಾಗತಿಕವಾಗಿ ವೈಎಡಿ ಕೋಡ್ ಪಡೆದುಕೊಂಡಿರುವ ಎಸ್-ಕ್ರಾಸ್ ಎಸ್‌ಎಕ್ಸ್4, 1.6 ಲೀಟರ್ ಪೆಟ್ರೋಲ್ ಹಾಗೂ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಎಸ್‌ಎಕ್ಸ್4 ಕ್ರಾಸೋವರ್ ಬದಲಿಯಾಗಿರಲಿದೆ.

ಎಂಜಿನ್
ಇದರ ಪೆಟ್ರೋಲ್ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹಾಗೂ ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಹಾಗೆಯೇ ಫಿಯೆಟ್ ಫ್ಯೂಯಲ್ ಜೆಟ್ ಡೀಸೆಲ್ ಮೋಟಾರ್, 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ.

ಎಕ್ಸ್‌ಎ ಆಲ್ಫಾ
ಫೋರ್ಡ್ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್‌ಗೆ ಹೋಲಿಸಿದರೆ, ಎಸ್-ಕ್ರಾಸ್ ಆಕಾರದಲ್ಲಿ ದೊಡ್ಡದಾಗಿರಲಿದೆ. ಇದು 4.6 ಮೀಟರ್ ಉದ್ದ ಹಾಗೂ 2.6 ಮೀಟರ್ ವೀಲ್ ಬೇಸ್ ಹೊಂದಿರಲಿದೆ.

ಎಕ್ಸ್‌ಎ ಆಲ್ಫಾ
ಈ ಐದು ಸೀಟಿನ ಎಸ್ ಕ್ರಾಸ್ ಆಲ್ ವೀಲ್ ಡ್ರೈವ್ ಆಯ್ಕೆಗಳಲ್ಲೂ ಲಭ್ಯವಾಗಲಿದೆ. ಇದು 2014ನೇ ಸಾಲಿನ ಅಂತ್ಯದ ವೇಳೆ ಭಾರತ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ಎಕ್ಸ್‌ಎ ಆಲ್ಫಾ
ಮಾರುತಿ ಪರಿಚಯಿಸಲಿರುವ ಮತ್ತೊಂದು ಎಸ್‌ಯುವಿ, ಫೋರ್ ಸಬ್ ಮೀಟರ್ ಪರಿಧಿಯಲ್ಲಿ ಬರಲಿದೆ. ಅಂದರೆ 2012ನೇ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿರುವ ಎಕ್ಸ್‌ಎ-ಅಲ್ಫಾ ಕಾನ್ಸೆಪ್ಟ್ ಕಾರು ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನೆರವಾಗಲಿದೆ.

ಗ್ರಾಂಡ್ ವಿಟರಾ
ಮಾರುತಿಯ ಎಕ್ಸ್‌ಎ-ಅಲ್ಫಾ ಕಾನ್ಸೆಪ್ಟ್ ಜಾಗತಿಕವಾಗಿ ಸುಜುಕಿಯ ಜಿಮ್ನಿ ಆವೃತ್ತಿಯನ್ನು ಬದಲಾಯಿಸಲಿದೆ.

ಗ್ರಾಂಡ್ ವಿಟರಾ
2015ರ ಆರಂಭದಲ್ಲಿ ದೇಶದ ರಸ್ತೆ ಪ್ರವೇಶಿಸುವ ಸಾಧ್ಯತೆಯಿರುವ ಈ ನೂತನ ಎಸ್‌ಯುವಿ, ಪೆಟ್ರೋಲ್ ಸೇರಿದಂತೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಗ್ರಾಂಡ್ ವಿಟರಾ
ಭಾರತಕ್ಕೆ ಆಗಮಿಸಲಿರುವ ಮಾರುತಿಯ ಮೂರನೇ ಎಸ್‌ಯುವಿ, ಸುಜುಕಿ ಗ್ರಾಂಡ್ ವಿಟರಾ ಮಾದರಿಗೆ ಬದಲಿ ವ್ಯವಸ್ಥೆಯಾಗಿರಲಿದೆ. ಇದು ಸದ್ಯ ಮಾರುಕಟ್ಟೆಯಲ್ಲಿರುವ ಗ್ರಾಂಡ್ ವಿಟರಾಕ್ಕಿಂತ ಕಡಿಮೆ ದರದಲ್ಲಿ ಆಗಮನವಾಗಲಿದೆ.


Click it and Unblock the Notifications








