ಉತ್ಪಾದನೆ ಸ್ಥಗಿತ; ಮಾರುತಿ ಸ್ವಿಫ್ಟ್, ಡಿಜೈರ್ ಯುಗಾಂತ್ಯ?
ಕಳೆದೊಂದು ದಶಕದಲ್ಲಿ ದೇಶದ ಕಾರು ಜಗತ್ತಿನಲ್ಲಿ ಪಾರುಪತ್ಯ ಮೆರೆದಿದ್ದ ಅತ್ಯಂತ ಜನಪ್ರಿಯ ಮಾರುತಿ ಸ್ವಿಫ್ಟ್ ಹಾಗೂ ಮಾರುತಿ ಸ್ವಿಫ್ಟ್ ಡಿಜೈರ್ ಗುರ್ಗಾಂಗ್ ಘಟಕದಲ್ಲಿನ ಉತ್ಪಾದನೆ ಸ್ಥಗಿತಗೊಳಿಸಲು ಮಾರುತಿ ಸುಜುಕಿ ನಿರ್ಧರಿಸಿದೆ.
ಅಂದರೆ ಮಾರುತಿ ಸ್ವಿಫ್ಟ್ ಹಾಗೂ ಡಿಜೈರ್ ಉತ್ಪಾದನೆ ಸಂಪೂರ್ಣವಾಗಿ ನಿಲುಗಡೆಯಾಗುವುದಿಲ್ಲ. ಸದ್ಯಕ್ಕೆ ತನ್ನ ಗುರ್ಗಾಂವ್ ಘಟಕದಲ್ಲಿನ ಸ್ವಿಫ್ಟ್ ಹಾಗೂ ಡಿಜೈರ್ ಉತ್ಪಾದನೆ ಮಾತ್ರ ಸ್ಥಗಿತಗೊಳಿಸಲು ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ನಿರ್ಧರಿಸಿದೆ.
ಅಷ್ಟಕ್ಕೂ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿದ್ದ ಸ್ವಿಫ್ಟ್ ಹಾಗೂ ಡಿಜೈರ್ ಆವೃತ್ತಿಗಳ ಉತ್ಪಾದನೆ ಸ್ಥಗಿತಗೊಳ್ಳಲಿರುವ ಕಾರಣಗಳೇನು? ಬನ್ನಿ ತಿಳಿಯೋಣ...

ಇತ್ತೀಚೆಗಷ್ಟೇ ಹೋಂಡಾ ಅಮೇಜ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಮಾರುಕಟ್ಟೆ ಪ್ರವೇಶ ಪಡೆದಿತ್ತು. ಇದು ಮಾರುತಿಗೆ ಭಾರಿ ಹೊಡೆತ ನೀಡುವಂತಾಗಿದೆ.

ಅಮೇಜ್ ಹಾಗೂ ಇಕೊಸ್ಪೋರ್ಟ್ ಆವೃತ್ತಿಗಳಿಗೆ ಬೇಡಿಕೆ ಹೆಚ್ಚಾದಂತೆ ಮಾರುತಿ ನಿಧಾನವಾಗಿ ಕಳೆಗುಂದುತ್ತಿದೆ. ಕಳೆದ ಕೆಲವು ತಿಂಗಳುಗಳ ಮಾರಾಟ ಅಂಕಿಅಂಶಗಳೇ ಇದನ್ನು ಸಾರುತ್ತಿವೆ.

ಆದರೆ ಮಾರುತಿ ಸುಜುಕಿ ಪ್ರಕಾರ, ಮಾರುತಿ ಸ್ವಿಫ್ಟ್ ಹಾಗೂ ಡಿಜೈರ್ ಉತ್ಪಾದನೆಯನ್ನು ಗುರ್ಗಾಂವ್‌ನಿಂದ ಮಾನೇಸರ್ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಇದರಲ್ಲಿ ಪ್ರತಿಸ್ಫರ್ಧಿಗಳ ಬೇಡಿಕೆ ಹೆಚ್ಚಳ ಹಾಗೂ ಮಾರಾಟ ಕುಸಿತದಲ್ಲಿ ಯಾವುದೇ ಹುರುಳಿಲ್ಲ ಎಂದಿದೆ.

ಬಲ್ಲ ಮೂಲಗಳ ಪ್ರಕಾರ ಮಾರುತಿ ಸ್ವಿಫ್ಟ್ ಹಾಗೂ ಡಿಜೈರ್ ಆವೃತ್ತಿಗಳು ಸದ್ಯದಲ್ಲೇ ಪರಿಷ್ಕೃತಗೊಳ್ಳಲಿದ್ದು, ಹಿಂದಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿ ಮಾರುಕಟ್ಟೆಗೆ ಎಂಟ್ರಿ ಕೊಡುವ ಸಾಧ್ಯತೆಗಳಿವೆ.

- ಸ್ವಿಫ್ಟ್ 2012 ಮೇ 20,000 ಯುನಿಟ್‌ಗಳಿಂದ 2013 ಮೇ ತಿಂಗಳಲ್ಲಿ 14,353 ಯುನಿಟ್‌ಗಳಿಗೆ ಕುಸಿತ
- ಸ್ವಿಫ್ಟ್ ಡಿಜೈರ್ 2012 ಮೇ ತಿಂಗಳಲ್ಲಿ 19.446 ಯುನಿಟ್ ಮಾರಾಟದಿಂದ 2013 ಮೇ ತಿಂಗಳಲ್ಲಿ 12,548 ಯುನಿಟ್‌ಗಳಿಗೆ ಕುಸಿತ


Click it and Unblock the Notifications








