2015ರಲ್ಲಿ ಮಾರುತಿ ಆಲ್ಟೊ ಕೆ10 ಆಟೋಮ್ಯಾಟಿಕ್ ಲಾಂಚ್
ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿಯ ಜನಪ್ರಿಯ ಆಲ್ಟೊ, ದೇಶದ ಅತಿ ಹೆಚ್ಚು ಮಾರಾಟದ ಕಾರಾಗಿದೆ. ಆದರೆ ಕಳೆದ ಕೆಲವು ಸಮಯಗಳಿಗೆ ಹೋಲಿಸಿ ನೋಡಿದರೆ ಈ ಐಕಾನಿಕ್ ಕಾರಿನ ಮಾರಾಟದಲ್ಲಿ ಇಳಿಕೆ ಕಂಡುಬರುತ್ತಿದೆ.
ಟೊಯೊಟಾ ಎಟಿಯೋಸ್ ಕ್ರಾಸ್ ಭರ್ಜರಿ ಲಾಂಚ್
ಇದು ಮುಂದಿನ ದಿನಗಳಲ್ಲಿ ದಟ್ಸನ್ ಗೊಗಳಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲು ಮಾರುತಿಗೆ ಕಠಿಣವೆನಿಸಲಿದೆ. ಇದೇ ಕಾರಣಕ್ಕಾಗಿ ತನ್ನ ಅತ್ಯುತ್ತಮ ಮಾದರಿಗೆ ಉತ್ತೇಜನ ನೀಡಲು ಮುಂದಾಗಿರುವ ಮಾರುತಿ, ಆಲ್ಟೊ ಕೆ10 ಆಟೋಮ್ಯಾಟಿಕ್ ಮಾದರಿ ಪರಿಚಯಿಸುವ ಯೋಜನೆಯಲ್ಲಿದೆ.

ಬಲ್ಲ ಮೂಲಗಳ ಪ್ರಕಾರ ಮಾರುತಿ ಕೆ10 ಆಟೋಮ್ಯಾಟಿಕ್ ವೆರಿಯಂಟ್ 2015 ಜನವರಿ ತಿಂಗಳಲ್ಲಿ ಲಾಂಚ್ ಆಗುವ ಸಾಧ್ಯತೆಯಿದೆ.

ಸೆಲೆರಿಯೊ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಯಶಸ್ಸಿನಿಂದ ಉತ್ತೇಜಿತಗೊಂಡಿರುವ ಮಾರುತಿ, ಆಲ್ಟೊ ಕೆ10 ಆವೃತ್ತಿಗೂ ಇದೇ ತಂತ್ರಜ್ಞಾನ ಆಳವಡಿಸುವ ಗುರಿಯಿರಿಸಿಕೊಂಡಿದೆ.

ಹೆಚ್ಚು ಆಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿರುವ ಮಾರುತಿ ಆಲ್ಟೊ ಕೆ10 ಗರಿಷ್ಠ ಸ್ಥಳಾವಕಾಶಗಳನ್ನು ಪಡೆದುಕೊಳ್ಳಲಿದೆ.

ನಿಮ್ಮ ಮಾಹಿತಿಗಾಗಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರಿನ ಒಟ್ಟು ಮಾರಾಟದ ಶೇಕಡಾ 50ರಷ್ಟು ಮಾರಾಟವನ್ನು ಆಟೋಮ್ಯಾಟಿಕ್ ವೆರಿಯಂಟ್ ಪಡೆದುಕೊಂಡಿತ್ತು. ಮ್ಯಾನುವಲ್ ಕಾರಿನಷ್ಟು ಮೈಲೇಜ್ ನೀಡುವುದು ಇದರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಹಾಗೊಂದು ವೇಳೆ ಆಟೋಮ್ಯಾಟಿಕ್ ಆಲ್ಟೊ ಕೆ10 ಪರಿಚಯವಾದ್ದಲ್ಲಿ ಹೆಚ್ಚಿನ ಸಂಖ್ಯೆಯ ಮಾರಾಟ ಗಿಟ್ಟಿಸಿಕೊಳ್ಳಲು ನೆರವಾಗಲಿದೆ. ಆಲ್ಟೊ ಬಳಿಕ ಸ್ವಿಫ್ಟ್, ವ್ಯಾಗನಾರ್ ಆಟೋಮ್ಯಾಟಿಕ್ ವೆರಿಯಂಟ್‌ಗಳನ್ನು ಪರಿಚಯಿಸುವ ಯೋಜನೆಯನ್ನು ಮಾರುತಿ ಹೊಂದಿದೆ.

ಮಾರುತಿಗೆ ಎಎಂಟಿ ನಿರ್ಮಿಸುತ್ತಿರುವ ಇಟಲಿ ಮೂಲದ ಮ್ಯಾಗ್ನೆಟಿ ಮರೆಲ್ಲಿ ಸಂಸ್ಥೆಯು ಮುಂದಿನ ವರ್ಷದಿಂದ ತನ್ನ ಉತ್ಪಾದನೆಯನ್ನು ಭಾರತದಲ್ಲೇ ಸ್ಥಳೀಯವಾಗಿ ಆರಂಭಿಸಲಿದೆ. ಇದು ಕಾಯುವಿಕೆ ಅವಧಿ ತಗ್ಗಿಸಲು ನೆರವಾಗಲಿದೆ. ಪ್ರಸ್ತುತ ಸೆಲೆರಿಯೊ ಎಎಂಟಿ ವರ್ಷನ್ ವೇಟಿಂಗ್ ಪಿರೇಡ್ ಆರು ತಿಂಗಳಷ್ಟಿದೆ.

ಅಂದ ಹಾಗೆ ನೂತನ ಆಲ್ಟೊ ಕೆ10 ಆವೃತ್ತಿರುವ ಈಗಿರುವ 68 ಅಶ್ವಶಕ್ತಿ ಉತ್ಪಾದಿಸುವ (90 ಎನ್‌ಎಂ) ಎಂಜಿನ್ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಅದೇ ರೀತಿರುವ ಈಗಿರುವ ಮೈಲೇಜ್ ಸುಧಾರಿಸಿಕೊಳ್ಳುವ (ಪ್ರತಿ ಲೀಟರ್‌ಗೆ 20.92 ಕೀ.ಮೀ.) ಇರಾದೆಯಲ್ಲಿದೆ.

ಪ್ರಸ್ತುತ ಮಾರುತಿ ಆಲ್ಟೊ ಕೆ10 ದೆಹಲಿ ಎಕ್ಸ್ ಶೋ ರೂಂ ದರ 3.15 ಲಕ್ಷ ರು.ಗಳಾಗಿವೆ. ಹಾಗೆಯೇ ಸಾಮಾನ್ಯ ಆಲ್ಟೊ 2.37 ಲಕ್ಷ ರು.ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.


Click it and Unblock the Notifications








