ಇದೇನಿದು, ಅತ್ಯಂತ ಜನಪ್ರಿಯ ಆಲ್ಟೊದಲ್ಲಿ ಕನಿಷ್ಠ ಸುರಕ್ಷತೆ?
ಮಾರುತಿ ಆಲ್ಟೊ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರೆಂಬ ಖ್ಯಾತಿಗೆ ಪಾತ್ರವಾಗಿರಬಹುದು. ಆದರೆ ಸುರಕ್ಷತಾ ವಿಚಾರದಲ್ಲಿ ಅತಿ ಕನಿಷ್ಠ ಮಾನದಂಡಗಳನ್ನು ಹೊಂದಿದೆ ಎಂಬುದು ವಾಹನೋದ್ಯಮದಿಂದ ಆಗಮನವಾಗಿರುವ ಹೊಸ ಸುದ್ದಿ. ಹೌದು, ಸೇಫ್ಟಿ ಸಂಸ್ಥೆಯೊಂದು ನಡೆಸಿರುವ ಸುರಕ್ಷತಾ ಟೆಸ್ಟಿಂಗ್‌ನಲ್ಲಿ ಒಂದೇ ಒಂದು ಪಾಯಿಂಟ್ ಗಿಟ್ಟಿಸಿಕೊಳ್ಳಲಾಗದೇ ಮಾರುತಿಯ ಮಾತೃಸಂಸ್ಥೆಯಾದ 2013 ಸುಜುಕಿ ಆಲ್ಟೊ ಕೆ10 ಭಾರಿ ಹಿನ್ನಡೆಗೊಳಗಾಗಿದೆ.
ಲ್ಯಾಟಿನ್ ಎನ್‌ಸಿಎಪಿ ನಡೆಸಿರುವ ಕ್ರಾಶ್ ಟೆಸ್ಟ್‌ನಲ್ಲಿ (Crash test) ಒಟ್ಟು ಐದು ಸ್ಟಾರ್‌ಗಳ ಪೈಕಿ ಒಂದೇ ಒಂದು ಸ್ಟಾರ್ ಮಾನ್ಯತೆ ಗಿಟ್ಟಿಸಿಕೊಳ್ಳಲಾಗದೇ ಜಗತ್ತಿನಲ್ಲಿ ಅತ್ಯಂತ ಕೆಟ್ಟ ಸೇಫ್ಟಿ ಫೀಚರ್ಸ್ ಹೊಂದಿರುವ ಕಾರೆಂಬ ಅಪಖ್ಯಾತಿಗೆ ಒಳಗಾಗಿದೆ.
ಇದು ಕಾರು ಪ್ರಿಯರನ್ನು ಬೆರುಗುಗೊಳಿಸುವಂತಾಗಿದೆ. ಭಾರತದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಆಲ್ಟೊ ಸುರಕ್ಷತಾ ದೃಷ್ಟಿಯಲ್ಲಿ ಭಾರಿ ಹಿನ್ನಡೆಯಲ್ಲಿದೆ ಎಂಬುದು ಕಂಡುಬಂದಿದೆ. ಅಂದರೆ ಕನಿಷ್ಠ ಸುರಕ್ಷತೆ ಹೊಂದಿರುವ ಕಾರನ್ನು ಭಾರತೀಯ ಗ್ರಾಹಕರು ಅತಿ ಹೆಚ್ಚು ನೆಚ್ಚಿಕೊಂಡಿದ್ದಾರೆಯೇ ಎಂಬುದು ಆಟೋ ವಲಯಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ.

2013 ಸುಜುಕಿ ಆಲ್ಟೊ ಕೆ10
ಲ್ಯಾಟಿನ್ ಎನ್‌ಸಿಎಜಿ ಎಂಬುದು ಸ್ವತಂತ್ರ ಸಂಸ್ಥೆಯಾಗಿದ್ದು, ಲ್ಯಾಟಿನ್ ಅಮೆರಿಕ ಹಾಗೂ ಕೆರಿಬಿಯನ್ ಪ್ರದೇಶದಲ್ಲಿ ಗ್ರಾಹಕರಿಗೆ ಕಾರಿನ ಸುರಕ್ಷತೆ ಕುರಿತು ನಿಷ್ಫಕ್ಷಪಾತ ಮೌಲ್ಯಮಾಪನ ಒದಗಿಸುತ್ತಿದೆ.

2013 ಸುಜುಕಿ ಆಲ್ಟೊ ಕೆ10
ಇದರಂತೆ ಇತ್ತೀಚೆಗಷ್ಟೇ ಜರ್ಮನಿಯ ಲ್ಯಾಬ್‌ವೊಂದರಲ್ಲಿ ಜನಪ್ರಿಯ ಆಲ್ಟೊ ಕೆ10 ಕಾರಿನ ಸುರಕ್ಷಾ ಮಾನದಂಡಗಳ ಕುರಿತು ಟೆಸ್ಟಿಂಗ್ ಹಮ್ಮಿಕೊಳ್ಳಲಾಗಿತ್ತು.

2013 ಸುಜುಕಿ ಆಲ್ಟೊ ಕೆ10
ಆದರೆ ಸೇಫ್ಟಿ ಟೆಸ್ಟಿಂಗ್‌ನಲ್ಲಿ ಸುರಕ್ಷಾ ಮಾನದಂಡ ಕಾಪಾಡುವಲ್ಲಿ ವೈಫಲ್ಯವಾಗಿರುವ ಮಾರುತಿ ಆಲ್ಟೊ, ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

2013 ಸುಜುಕಿ ಆಲ್ಟೊ ಕೆ10
ಅಂದರೆ ಅಪಘಾತದ ವೇಳೆ ಮಾರುತಿಯಲ್ಲಿ ಸಂಚರಿಸುವ ಪ್ರಯಾಣಿಕರ ಜೀವಕ್ಕೆ ಅಪಾಯ ಸಾಧ್ಯತೆ ಹೆಚ್ಚಾಗಿದೆ ಎಂಬುದನ್ನು ಎನ್‌ಸಿಎಪಿ ಉಲ್ಲೇಖಿಸಿದೆ.

2013 ಸುಜುಕಿ ಆಲ್ಟೊ ಕೆ10
ಆಲ್ಟೊದಲ್ಲಿ ಚಾಲಕನ ತಲೆ ಹಾಗೂ ಎದೆಯ ಭಾಗದ ರಕ್ಷಣೆ ತುಂಬಾನೇ ದುರ್ಬಲವಾಗಿದೆ. ಹಾಗೆಯೇ ಡ್ಯಾಶ್‌ಬೋರ್ಡ್‌ನ ಅಪಾಯಕಾರಿ ರಚನೆಗಳು ಪ್ರಯಾಣಿಕರ ಮಂಡಿಗೆ ಅಪಾಯವಾಗುವ ಸಾಧ್ಯತೆಯಿದೆ. ಅಂತೆಯೇ ಚೈಲ್ಡ್ ಸೇಫ್ಟಿ ಮಾನದಂಡ ಕೂಡಾ ದುರ್ಬಲವಾಗಿದೆ ಎಂಬುದನ್ನು ಸಂಸ್ಥೆ ಉಲ್ಲೇಖಿಸಿದೆ.

2013 ಸುಜುಕಿ ಆಲ್ಟೊ ಕೆ10
ಒಟ್ಟಿನಲ್ಲಿ ಭಾರತದಲ್ಲಿ ತಿಂಗಳಲ್ಲಿ 20,000ದಷ್ಟು ಯುನಿಟ್ ಮಾರಾಟವಾಗುವ ಮಾರುತಿ ಆಲ್ಟೊ ಕಾರಿನ ಏರ್‌ಬ್ಯಾಗ್ ಹಾಗೂ ಎಬಿಎಸ್, ಲ್ಯಾಟಿನ್ ಅಮೆರಿಕದ ಕನಿಷ್ಠ ಸುರಕ್ಷಾ ಮಾನದಂಡಗಳನ್ನು ಕಾಪಾಡುವಲ್ಲಿ ವಿಫಲವಾಗಿದೆ.

2013 ಸುಜುಕಿ ಆಲ್ಟೊ ಕೆ10
ಮಾರುತಿ ಆಲ್ಟೊ ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯ ಮಧ್ಯಮ ವರ್ಗದ ಜನತೆಯ ನೆಚ್ಚಿನ ಕಾರಾಗಿದೆ. ಆದರೆ ಪ್ರಸ್ತುತ ವರದಿಯು ನಿರಾಸೆಗೆ ಕಾರಣವಾಗಿದೆ.
2013 ಸುಜುಕಿ ಆಲ್ಟೊ ಕೆ10
ವೀಡಿಯೋ ವೀಕ್ಷಿಸಿ


Click it and Unblock the Notifications








