ಗುಡ್ ಫ್ರೈಡೆ ಗುಡ್ ನ್ಯೂಸ್ - ಮಾರುತಿ ಎಸ್‌ಎಕ್ಸ್4 ಲಾಂಚ್
ಕಳೆಗುಂದಿರುವ ಮಾರುಕಟ್ಟೆಗೆ ಉತ್ತೇಜನ ನೀಡುವ ಸಲುವಾಗಿ ಯೋಜನೆ ಹಮ್ಮಿಕೊಂಡಿರುವ ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಅತಿ ನೂತನ ಎಸ್‌ಎಕ್ಸ್4 ಫೇಸ್‌ಲಿಫ್ಟ್ ವರ್ಷನ್ ಲಾಂಚ್ ಮಾಡಿದೆ.
ದರ ಮಾಹಿತಿ: 7.38 ಲಕ್ಷ ರು.
ಮೈಲೇಜ್: 16.51 ಕೀ.ಮೀ
ಮಿಡ್ ಸೈಜ್ ಸೆಡಾನ್ ಎಸ್‌ಎಕ್ಸ್4 ದೆಹಲಿ ಎಕ್ಸ್ ಶೋ ರೂಂ ದರ 7.38 ಲಕ್ಷಗಳಿಂದ ಆರಂಭವಾಗಿ 9.79 ಲಕ್ಷ ರು.ಗಳ ವರೆಗೆ ನಿಗದಿಯಾಗಿದೆ. ಇದರಲ್ಲಿ ಪೆಟ್ರೋಲ್ ವೆರಿಯಂಟ್ 7.38 ಲಕ್ಷ ರು.ಗಳಿಂದ 8.84 ಲಕ್ಷ ರು.ಗಳ ವರೆಗೆ ಹಾಗೂ ಡೀಸೆಲ್ ವೆರಿಯಂಟ್ ದರ 8.27 ಲಕ್ಷ ರು.ಗಳಿಂದ ಆರಂಭವಾಗಿ 9.79 ಲಕ್ಷ ರು.ಗಳ ವರೆಗಿದೆ.
ಮಾರುತಿ ಸುಜುಕಿ ಎಸ್‌ಎಕ್ಸ್4 ಹೊಸ ಲುಕ್ ಪಡೆದುಕೊಂಡಿದ್ದು, ಟಚ್ ಸ್ಕ್ರೀನ್ ಆಡಿಯೋ ನೇವಿಗೇಷನ್‌ಗಳಂತಹ ಹೊಸ ಫೀಚರ್‌ಗಳನ್ನು ಆಳವಡಿಸಲಾಗಿದೆ.
ಒಟ್ಟು ಎರಡು ಎಂಜಿನ್ ಆಯ್ಕೆಗಳಲ್ಲಿ ಕಾರು ಲಭ್ಯವಿದೆ. ಸೂಪರ್ ಟರ್ಬೊ 1.3 ಲೀಟರ್ ಡೀಸೆಲ್ ಹಾಗೂ 1.6 ವಿವಿಟಿ ಪೆಟ್ರೋಲ್ ಎಂಜಿನ್‌ಗಳಲ್ಲಿ ಆಗಮನವಾಗಿದೆ. ಹಾಗೆಯೇ ತಾಜಾ ಎಕ್ಸ್‌ಟೀರಿಯರ್ ಹಾಗೂ ಇಂಟಿರಿಯರ್ ವಿನ್ಯಾಸ ಹೆಚ್ಚು ಅಂದತೆಗೆ ಕಾರಣವಾಗಿದೆ.

2007ನೇ ಇಸವಿಯಲ್ಲಿ ಎಸ್‌ಎಕ್ಸ್4 ಭಾರತದಲ್ಲಿ ಮೊದಲ ಬಾರಿಗೆ ಲಾಂಚ್ ಆಗಿತ್ತು. ಇನ್ನು ಎಸ್‌ಎಕ್ಸ್4 ಡೀಸೆಲ್ ವೆರಿಯಂಟ್ 2011ರಲ್ಲಿ ಆಗಮನವಾಗಿತ್ತು. ದೇಶದ ಮಾರುಕಟ್ಟೆಯಲ್ಲಿ ಕಂಪನಿ ಇದುವರೆಗೆ ಒಟ್ಟು 1.08 ಲಕ್ಷ ಎಸ್‌ಎಕ್ಸ್4 ಯುನಿಟ್‌ಗಳನ್ನು ಮಾರಾಟ ಮಾಡಿವೆ.

ಟಚ್ ಸ್ಕ್ರೀನ್ ಆಡಿಯೋ, ಎಲೆಕ್ಟ್ರಾನಿಕಲಿ ಫೋಲ್ಡಬಲ್ ORVM, ಟರ್ನ್ ಇಂಡಿಕೇಟರ್, ಇಂಟೇಗ್ರೇಟಡ್ ನೇವಿಗೇಷನ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿಗಳಂತಹ ಆಧುನಿಕ ವೈಶಿಷ್ಟ್ಯಗಳನ್ನು ಎಸ್‌ಎಕ್ಸ್4 ಹೊಂದಿರಲಿದೆ.

ಎಸ್‌ಎಕ್ಸ್4 ಉತ್ತಮ ಇಂಧನ ಕ್ಷಮತೆಯನ್ನು ಹೊಂದಿರಲಿದ್ದು, ಕಂಪನಿ ಪ್ರಕಾರ ಪ್ರತಿ ಲೀಟರ್‌ಗೆ 16.51 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಈ ಹಿಂದಿನ ವರ್ಷನ್‌ಗಿಂತಲೂ ನೂತನ ಎಸ್‌ಎಕ್ಸ್4 10ಎಂಎಂ ಹೆಚ್ಚು ಉದ್ದ ಹೊಂದಿರಲಿದೆ. ನೂತನ ಕ್ರೋಮ್ ಗ್ರಿಲ್, ಮಸಲರ್ ಬಂಪರ್ ಜತೆಗೆ ಡ್ಯುಯಲ್ ಟೋನ್ ಫಿನಿಶ್ ಹೊಂದಿದೆ.

ಮಾರುತಿ ಸುಜುಕಿ ಇಂಡಿಯಾ ಪ್ರಕಾರ ಎಸ್‌ಎಕ್ಸ್4 ನೂತನ ವರ್ಷನ್‌ಗೆ ಹೊಸ ಫೀಚರ್ಸ್ ಆಳವಡಿಸಲಾಗಿದ್ದು, ಆದರೆ ದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ ಎಂದಿದೆ.


Click it and Unblock the Notifications








