ಇದೇ ಲಾಸ್ಟ್ ಚಾನ್ಸ್; ಮಾರುತಿ ಕಾರಿಗೆ ಭಾರಿ ಡಿಸ್ಕೌಂಟ್

ದೇಶದ ಕಾರು ಮಾರಾಟ ಭಾರಿ ಕುಸಿದಿರುವ ಹಿನ್ನಲೆಯಲ್ಲಿ ಬಹುತೇಕ ಕಾರು ಕಂಪನಿಗಳು ಅನೇಕ ಆಫರ್‌ಗಳನ್ನು ಮುಂದಿರಿಸಿವೆ. ಇದರಂತೆ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ, ತನ್ನ ಜನಪ್ರಿಯ ಮಾಡೆಲ್‌ಗಳಿಗೆ ರಿಯಾಯಿತಿ ದರಗಳನ್ನು ಘೋಷಿಸಿದೆ. ಈ ಮೂಲಕ ಮಾರಾಟಕ್ಕೆ ಉತ್ತೇಜನ ನೀಡುವ ಪ್ರಯತ್ನ ಮಾಡುತ್ತಿವೆ.

ನಾವು ಕೆಲವು ದಿನಗಳ ಹಿಂದೆ ವರದಿ ಮಾಡಿರುವುದಂತೆಯೇ ಮಾರುತಿ ಸುಜುಕಿ ವಿಶೇಷ ಆಫರ್‌ಗಳ ಪಟ್ಟಿ ನಿಗದಿಯಾಗಿದೆ. ಅಷ್ಟೇ ಯಾಕೆ ಡಿಜೈರ್‌ಗಳಂತಹ ಅತಿ ಬೇಡಿಕೆ ಕಾರುಗಳು ಸಹ ಯಾವುದೇ ಕಾಯುವಿಕೆ ಅವಧಿಯಿಲ್ಲದೆ ನಿಮ್ಮ ಕೈಸೇರಲಿದೆ ಎಂಬುದು ಉಲ್ಲೇಖನೀಯವಾಗಿದೆ.

ಒಟ್ಟು ಲಾಭ

    • ಆಲ್ಟೊ 800 (ಪೆಟ್ರೋಲ್ ಮತ್ತು ಸಿಎನ್‌ಜಿ): 38,000 ರು.
    • ಆಲ್ಟೊ ಕೆ10: 53,000 ರು.
    • ವ್ಯಾಗನಾರ್ ಎಲ್‌ಎಕ್ಸ್‌ಐ (ಪೆಟ್ರೋಲ್ ಮತ್ತು ಸಿಎನ್‌ಜಿ): 51,000 ರು.
    • ಎಸ್ಟಿಲೊ (ಸಿಎನ್‌ಜಿ): 68,000 ರು.
    • ಎ ಸ್ಟಾರ್ (ಎಲ್ಲ ವೆರಿಯಂಟ್): 63,000 ರು.
    • ರಿಟ್ಜ್ (ಡೀಸೆಲ್): 43,000 ರು.
    • ಎಸ್‌ಎಕ್ಸ್4 (ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ): 73,000 ರು.
    • ಎರ್ಟಿಗಾ (ಡೀಸೆಲ್): ರು. 25,000
  • ಇದೇ ಮೊದಲ ಬಾರಿಗೆ ಮಾರುತಿಯಿಂದ ಇಷ್ಟೊಂದು ಪ್ರಮಾಣದ ರಿಯಾಯಿತಿ ದರ ಘೋಷಿಸಲಾಗುತ್ತಿದೆ. ಆಟೋ ಮೊಬೈಲ್ ರಂಗ ಕಳೆದೊಂದು ದಶಕದಲ್ಲೇ ಭಾರಿ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಇಂತಹದೊಂದು ನಡೆ ಕಂಡುಬಂದಿದೆ.

    ತ್ವರೆ ಮಾಡಿರಿ...
    ಹಾಗಂತ ಈ ಆಫರ್ ಸೀಮಿತ ನಾಲ್ಕು ದಿನಗಳಿಗೆ ಮಾತ್ರವಾಗಿದ್ದು, ಅಂದರೆ ಎಪ್ರಿಲ್ 1ರಿಂದ ದರ ಏರಿಕೆ ಕಂಡುಬರಲಿದೆ. ಹಾಗಾಗಿ ಗ್ರಾಹಕರು ತ್ವರೆ ಮಾಡಲು ಸೂಚಿಸಲಾಗಿದೆ.

    ಬಹುತೇಕ ಎಲ್ಲ ಮಾರುತಿ ಕಾರುಗಳಿಗೆ ಭಾರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಆದರೆ ಇದರಲ್ಲಿ ಜನಪ್ರಿಯ ಸ್ವಿಫ್ಟ್ ಮಾದರಿ ಮಾತ್ರ ಕಂಡುಬಂದಿಲ್ಲ. ವರದಿಗಳ ಪ್ರಕಾರ ಅನಧಿಕೃತವಾಗಿ ಸ್ವಿಫ್ಟ್ ಮಾದರಿಗೆ ಡಿಸ್ಕೌಂಟ್ ನೀಡಲಾಗುತ್ತಿದೆ.

    ಹಾಗೊಂದು ವೇಳೆ ನೀವು ಸಿಎನ್‌ಜಿ ಕಾರು ಹುಡುಕುವುದಾದರೆ ಎಸ್ಟಿಲೊ ಸಿಎನ್‌ಜಿಗೆ 68,000 ರು.ಗಳ ವರೆಗೆ ರಿಯಾಯಿತಿ ದರ ನೀಡಲಾಗುತ್ತಿದೆ. ಹಾಗೆಯೇ ಎ ಸ್ಟಾರ್ ಕೂಡಾ 63,000 ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ.

    ಇನ್ನು ಇತ್ತೀಚೆಗಷ್ಟೇ ಫೇಸ್‌ಲಿಫ್ಟ್ ವರ್ಷನ್ ಪರಿಚಯಿಸಿದ್ದ ರಿಟ್ಸ್‌ ಡೀಸೆಲ್ ವೆರಿಯಂಟ್ ಕೂಡಾ 43,000 ರು.ಗಳ ವರೆಗೆ ಲಭ್ಯವಿದೆ. ಅದೇ ರೀತಿ ಪುಣೆಯ ಡೀಲರ್‌ವೊಬ್ಬರು ಯಶಸ್ವಿಯಾಗಿ ಬುಕ್ಕಿಂಗ್ ಮಾಡಿದ ಗ್ರಾಹಕರಿಗಾಗಿ ಚಿನ್ನ ಸಹಿತ ಬೆಳ್ಳಿಯ ನಾಣ್ಯಗಳನ್ನು ಆಫರ್ ಮಾಡುತ್ತಿದ್ದಾರೆ.

    ಏತನ್ಮಧ್ಯೆ ನಗದು ರಿಯಾಯಿತಿ, ಎಕ್ಸ್‌ಚೇಂಜ್ ಬೋನಸ್ ಆಫರ್‌ಗಳನ್ನು ನಿಮ್ಮ ಮಾದರಿ ಆಯ್ಕೆಯನ್ನು ಅವಲಂಬಿಸಿರಲಿದೆ. ಎರ್ಟಿಗಾ ಡೀಸೆಲ್ ವೆರಿಯಂಟ್ ಕೂಡಾ ರಿಯಾಯಿತಿ ದರದಲ್ಲಿ ದೊರಕುತ್ತಿರುವುದು ವಿಶೇಷವೆನಿಸಿದೆ.

Article Published On: Saturday, March 30, 2013, 13:06 [IST]
English summary
The offers available on different Maruti Cars. It is claimed that these offers will go dry and a price increase will be applicable starting next month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+