ನಂ. 1 ಮಾರುತಿಯಿಂದಲೂ ಭಾರಿ ಡಿಸ್ಕೌಂಟ್ ಮೇಳ

By Nagaraja

ಮುಂಗಾರು ಮಳೆ ಅವಧಿಯಲ್ಲಿ ಸಹಜವಾಗಿಯೇ ವಾಹನಗಳ ಬೇಡಿಕೆ ಕುಂಠಿತಗೊಳ್ಳುವುದನ್ನು ಮುಂಗಡವಾಗಿಯೇ ಮನಗಂಡಿರುವ ದೇಶದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಗಳು ವಾಡಿಕೆಯಂತೆಯೇ ಭಾರಿ ರಿಯಾಯಿತಿ ದರಗಳನ್ನು ಘೋಷಿಸಿವೆ.

ಈಗಷ್ಟೇ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಗಳು ತನ್ನ ಜನಪ್ರಿಯ ಆವೃತ್ತಿಗಳಿಗೆ ರಿಯಾಯಿತಿ ದರಗಳನ್ನು ಘೋಷಿಸಿತ್ತು. ಇದರ ಬೆನ್ನಲ್ಲೇ ದೇಶದ ಅತಿದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಹ ತನ್ನ ಆಯ್ದ ಆವೃತ್ತಿಗಳಿಗೆ ಭಾರಿ ಕೊಡುಗೆಗಳನ್ನು ಘೋಷಿಸಿದೆ.

ನಂ. 1 ಮಾರುತಿಯಿಂದಲೂ ಭಾರಿ ಡಿಸ್ಕೌಂಟ್ ಮೇಳ

ವಿವಿಧ ಮಾದರಿಗಳಿಗೆ ಅನುಸಾರವಾಗಿ ಮಾರುತಿ ಸುಜುಕಿ, ರು. 10,000ದಿಂದ ಗರಿಷ್ಠ 90,000 ರು. ವರೆಗೆ ಡಿಸ್ಕೌಂಟ್ ಘೋಷಿಸಿದೆ. ಮಾರುತಿಯಿಂದ ಹೆಚ್ಚು ಪ್ರಶಂಸೆಗೆ ಪಾತ್ರವಾಗಿರುವ ಆಲ್ಟೊ, ರಿಟ್ಜ್, ವ್ಯಾಗನಾರ್, ಸ್ಟ್ರೀಂಗ್ರೇ, ಡಿಜೈರ್, ಎಸ್‌ಎಕ್ಸ್4 ಮತ್ತು ಎರ್ಟಿಗಾ ಆವೃತ್ತಿ ಖರೀದಿ ವೇಳೆಯಲ್ಲಿ ಗರಿಷ್ಠ ಪ್ರಯೋಜನಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

ಮಾರುತಿ ಎರ್ಟಿಗಾ

ಮಾರುತಿ ಎರ್ಟಿಗಾ

ಮಾರುತಿ ಡಿಸ್ಕೌಂಟ್ ಮೇಳದಲ್ಲಿ ಎಕ್ಸ್‌ಚೇಂಜ್ ಆಫರ್ ಹಾಗೂ ಕಾರ್ಪೋರೇಟ್ ಆಫರುಗಳು ಒಳಗೊಂಡಿರಲಿದೆ. ಜನಪ್ರಿಯ ಬಹು ಬಳಕೆಯ ವಾಹನ (ಎಂಪಿವಿ) ಎರ್ಟಿಗಾ ಖರೀದಿ ವೇಳೆ ರು. 60,000 ವರೆಗೆ ಉಳಿತಾಯ ಮಾಡಬಹುದಾಗಿದೆ.

ಎಸ್‌ಎಕ್ಸ್4

ಎಸ್‌ಎಕ್ಸ್4

ಇದೇ ರೀತಿ ಎಸ್‌ಎಕ್ಸ್4 ಸೆಡಾನ್ ಖರೀದಿ ವೇಳೆಯಲ್ಲಿ ರು. 90,000 ವರೆಗೆ ರಿಯಾಯಿತಿ ಪಡೆಯಬಹುದಾಗಿದೆ.

ಸ್ಟ್ರೀಂಗ್ರೇ

ಸ್ಟ್ರೀಂಗ್ರೇ

ಅದೇ ರೀತಿ ಜನಪ್ರಿಯ ಹ್ಯಾಚ್‌ಬ್ಯಾಕ್ ಸ್ಟ್ರೀಂಗ್ರೇ ಖರೀದಿ ವೇಳೆಯಲ್ಲಿ ರು. 60,000 ವರೆಗೆ ರಿಯಾಯಿತಿ ದರ ದೊರಕಲಿದೆ.

ವ್ಯಾಗನಾರ್

ವ್ಯಾಗನಾರ್

ಇನ್ನುಳಿದಂತೆ ವ್ಯಾಗನಾರ್ ಖರೀದಿ ವೇಳೆಯಲ್ಲಿ ರು. 65,000 ವರೆಗೂ ಡಿಸ್ಕೌಂಟ್ ನೀಡಲಾಗುತ್ತದೆ.

ರಿಟ್ಜ್

ರಿಟ್ಜ್

ಡಿಸ್ಕೌಂಟ್: ರು. 55,000

ಆಲ್ಟೊ

ಆಲ್ಟೊ

ಆಲ್ಟೊ 800 ಡಿಸ್ಕೌಂಟ್: ರು. 50,000

ಆಲ್ಟೊ ಕೆ10 ಡಿಸ್ಕೌಂಟ್: ರು. 40,000

ಡಿಜೈರ್

ಡಿಜೈರ್

ಡಿಜೈರ್ ಡಿಸ್ಕೌಂಟ್: ರು. 25,000

ಡಿಜೈರ್ ಟೂರ್ ಡಿಸ್ಕೌಂಟ್: ರು. 30,000

ಸ್ವಿಫ್ಟ್

ಸ್ವಿಫ್ಟ್

ಸ್ವಿಫ್ಟ್ ಡೀಸೆಲ್ ಡಿಸ್ಕೌಂಟ್: ರು. 30000

ಸ್ವಿಫ್ಟ್ ಪೆಟ್ರೋಲ್ ಡಿಸ್ಕೌಂಟ್: ರು. 25,000

ನಂ. 1 ಮಾರುತಿಯಿಂದಲೂ ಭಾರಿ ಡಿಸ್ಕೌಂಟ್ ಮೇಳ

ಹಾಗಿದ್ದರೂ ಮಾರುಕಟ್ಟೆಯಲ್ಲಿ ಹಾಟ್‌ ಕೇಕ್ ತರಹನೇ ಮಾರಾಟವಾಗುತ್ತಿರುವ ಮಾರುತಿ ಸೆಲೆರಿಯೊ ಎಎಂಟಿ ವರ್ಷನ್‌ಗೆ ಯಾವುದೇ ರಿಯಾಯಿತಿ ದರ ಅನ್ವಯವಾಗಿರುವುದರ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ. ಈ ಮೂಲಕ ಚತುರ ಮಾರಾಟ ನೀತಿಯನ್ನು ಮಾರುತಿ ಅನುಸರಿಸಿದೆ.


More from DriveSpark

Article Published On: Tuesday, June 24, 2014, 6:03 [IST]
English summary
India's largest selling four wheeler manufacturer Maruti Suzuki has also been affected by the economic slowdown in the domestic market. To boost sales figures the Japanese manufacturer will now be offering huge discounts on select models.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+