2014 ಆಟೋ ಎಕ್ಸ್ ಪೋ; ಮಾರುತಿ ಸಿಯಾಝ್ ಕಾನ್ಸೆಪ್ಟ್ ಅನಾವರಣ
ಎಸ್‌ಎಕ್ಸ್4 ಎಸ್-ಕ್ರಾಸ್ ಬೆನ್ನಲ್ಲೇ ಭಾರತೀಯ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಮಗಗೊಂದು ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿದೆ.
ಆಟೋ ಎಕ್ಸ್ ಪೋ ಎಕ್ಸ್‌ಕ್ಲೂಸಿವ್ ವರದಿಗಾಗಿ ಇಲ್ಲಿಗೆ ಭೇಟಿ ಕೊಡಿರಿ
ಸಿಯಾಝ್ (CIAZ) ಎಂದು ಗುರುತಿಸಿಕೊಂಡಿರುವ ಮಾರುತಿ ನೂತನ ಸೆಡಾನ್ ಕಾನ್ಸೆಪ್ಟ್ ಕಾರು ಪ್ರಮುಖವಾಗಿ ಎಸ್‌ಎಕ್ಸ್4 ಆವೃತ್ತಿಗೆ ಬದಲಿ ಕಾರಾಗರಲಿದೆ ಎಂಬುದು ತಿಳಿದು ಬಂದಿದೆ.

ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಮಾರುತಿ ಸುಜುಕಿ, ಸಿಯಾಝ್ ಭವಿಷ್ಯ ಸೆಡಾನ್ ಕಾರಾಗಿರಲಿದೆ ಎಂದು ತಿಳಿಸಿದೆ.

ಪ್ರಸಕ್ತ ಸಾಲಿನಲ್ಲೇ ಮಾರುತಿ ಸಿಯಾಝ್ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದ್ದು, ತದಾಕ್ಷಣ ಮಾರಾಟ ಪ್ರಕ್ರಿಯೆ ಸಹ ಆರಂಭವಾಗಲಿದೆ.

ಎಸ್‌ಎಕ್ಸ್4 ಬದಲಿ ಕಾರಾಗಿ ಸಿಯಾಝ್ ಗುರುತಿಸಿಕೊಳ್ಳಲಿದೆ. ಭಾರತದಲ್ಲಿ ಎಸ್‌ಎಕ್ಸ್4 ನಿರೀಕ್ಷಿಸಿದಷ್ಟು ಯಶ ಸಾಧಿಸದಿರುವುದರಿಂದ ನೂತನ ಮಾದರಿ ಎಷ್ಟರ ಮಟ್ಟಿಗೆ ಗಮನ ಸೆಳೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ನೂತನ ಸಿಯಾಝ್ ಎರಡು ಎಂಜಿನ್ ಮಾದರಿಗಳಲ್ಲಿ ಆಗಮನವಾಗಲಿದೆ. ಈ 1.4 ಲೀಟರ್ ಕೆ ಸಿರೀಸ್ ಮತ್ತು 1.6 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಹೊಂದಿರಲಿದೆ.

ಇನ್ನು ಸೆಲೆರಿಯೊದಲ್ಲಿರುವಂತೆಯೇ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಲ್ಲಿ ಲಭ್ಯವಿರಲಿದೆ.

ಸೊಗಸಾದ ಬಾಗುವಂತಹ ವಿನ್ಯಾಸ ಪಡೆದುಕೊಂಡಿರುವ ಸಿಯಾಝ್, ಪ್ರೀಮಿಯಂ ಲುಕ್ ಹೊಂದಿದೆ.

ಇದೀಗ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








