ಮಾರುತಿ ಇಷ್ಟಪಡುವವರಿಗೊಂದು ಎಸ್‌ಎಕ್ಸ್4 ಸ್ಪೋರ್ಟ್ಸ್ ಗಾಡಿ
ಮಾರುತಿ ಸುಜುಕಿ ದೇಶದ ವಾಹನೋದ್ಯಮದಲ್ಲಿ ಅತಿ ಹೆಚ್ಚು ಹೆಸರು ಮಾಡಿದ ಸಂಸ್ಥೆ. ಬಹುಶ: ಮಾರುತಿಯ ಉತ್ಪನ್ನವೊಂದು ಮಾರುಕಟ್ಟೆಯಲ್ಲಿ ವೈಫಲ ಅನುಭವಿಸುತ್ತಿರುವುದು ಅತಿ ವಿರಳ ಎಂದೇ ಹೇಳಬಹುದು.
2014 ಆಟೋ ಎಕ್ಸ್ ಪೋ
ಹಾಗಿರುವಾಗ ಮಾರುಕಟ್ಟೆಗೆ ಅಪ್ಪಳಿಸಿದ ಮಾರುತಿಯ ಎಸ್‌ಎಕ್ಸ್4 ಸೆಡಾನ್ ಆವೃತ್ತಿಯು ನಿರೀಕ್ಷಿಸಿದಷ್ಟು ಯಶ ಸಾಧಿಸುವಲ್ಲಿ ವಿಫಲವಾಗಿತ್ತು. ಇದರಿಂದ ಸೋಲೊಪ್ಪಿಕೊಳ್ಳಲು ತಯಾರಿಲ್ಲದ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಮಾರುತಿ, ದೆಹಲಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಎಸ್‌ಎಕ್ಸ್4 ಕ್ರೀಡಾ ವರ್ಷನ್ ಕಾರೊಂದನ್ನು ಪ್ರದರ್ಶನಕ್ಕಿಟ್ಟಿದೆ. ಇದು ಮಾರುತಿ ಕಾರು ಪ್ರಿಯರಲ್ಲಿ ಹೆಚ್ಚು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ನಿಮ್ಮ ಮಾಹಿತಿಗಾಗಿ, 2006ನೇ ಇಸವಿಯಿಂದಲೇ ಎಸ್‌ಎಕ್ಸ್4 ಆವೃತ್ತಿಯನ್ನು ಮಾರುತಿ ಮಾರಾಟ ಮಾಡುತ್ತಿದೆ. ಪ್ರಸ್ತುತ ಕಾರು ಈಗಲೂ ಮಾರಾಟದಲ್ಲಿದೆ. ಇದು ಮಾರುತಿ ಅಂಗಸಂಸ್ಥೆ ಸುಜುಕಿ ಹಾಗೂ ಇಟಲಿಯ ಫಿಯೆಟ್ ಜಂಟಿ ಪ್ರಾಯೋಜಕತ್ವವಾಗಿದೆ.

ಮಾರುತಿ ಎಸ್‌ಎಕ್ಸ್4 ಯುರೋಪ್ ಮಾರುಕಟ್ಟೆಯಲ್ಲಿ ಫಿಯೆಟ್ ಸೆಡೆಸಿ ಎಂಬ ಹೆಸರಿನಿಂದ ಮಾರಾಟವಾಗುತ್ತಿದೆ. ಇನ್ನು ಏಷ್ಯಾ ಮಾರುಕಟ್ಟೆಯಲ್ಲಿ ಗರಿಷ್ಠ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದು ಯುರೋಪ್‌ನಲ್ಲಿ ಹ್ಯಾಚ್‌ಬ್ಯಾಕ್ ಹಾಗೂ ಏಷ್ಯಾದಲ್ಲಿ ಸೆಡಾನ್ ಕಾರಿನಿಂದ ಮಾರಾಟವಾಗುತ್ತಿದೆ.

ಈ ಹಿಂದೆ ಎರಡು ಬಾರಿ (2007 ಹಾಗೂ 2008) ವಿಶ್ವ ರಾಲಿ ಚಾಂಪಿಯನ್‌ಶಿಪ್‌ನಲ್ಲಿ ಎಸ್‌ಎಕ್ಸ್4 ಸ್ಪರ್ಧಿಸಿತ್ತು. ಪ್ರಸ್ತುತ ಮಾರುತಿ ಎಸ್‌ಎಕ್ಸ್4 ಕ್ರೀಡಾ ವರ್ಷನ್ ಅನ್ನು ಸಂಸ್ಥೆ ಪರಿಚಯಿಸಿದೆ.

ನೂತನ ಎಸ್‌ಎಕ್ಸ್4 ಕ್ರೀಡಾ ವರ್ಷನ್ ಮುಂಭಾಗದಲ್ಲಿ ಪರಿಷ್ಕೃತ ಬಂಪರ್ ಮತ್ತು ಗ್ರಿಲ್ ಪಡೆದುಕೊಂಡಿದೆ. ಹಾಗೆಯೇ ಹಿಂದುಗಡೆ ಸ್ಪೋರ್ಟಿ ಸ್ಪಾಯ್ಲರ್ ಲಗತ್ತಿಸಲಾಗಿದೆ.

ಇನ್ನು ಕಾರಿನೊಳಗೆ ಸ್ಪೋರ್ಟಿ ಸ್ಟೀರಿಂಗ್ ಜತೆ ಹೆಚ್ಚು ಸುರಕ್ಷತೆಯ ಬಕೆಟ್ ಸೀಟು ಆಳವಡಿಸಲಾಗಿದೆ. ಹಾಗೆಯೇ ಒಂದಕ್ಕಿಂತ ಹೆಚ್ಚು ಸೀಟು ಬೆಲ್ಟ್‌ಗಳನ್ನು ನೀಡಲಾಗಿದೆ.

ಹಾಗಿದ್ದರೂ ಡ್ಯಾಶ್‌ಬೋರ್ಡ್‌ನಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ. ಇದರಲ್ಲಿ ಐಪ್ಯಾಡ್ ಫೀಚರ್ ಇದೆ. ಒಟ್ಟಿನಲ್ಲಿ ಮಾರುತಿ ಎಸ್‌ಎಕ್ಸ್4 ಸ್ಪೋರ್ಟ್ಸ್ ವರ್ಷನ್ ಮೂಲಕ ಗ್ರಾಹಕರಲ್ಲಿ ಕುತೂಹಲತೆ ಸೃಷ್ಟಿ ಮಾಡುವಲ್ಲಿ ಮಾರುತಿ ಯಶಸ್ವಿಯಾಗಿದೆ.


Click it and Unblock the Notifications








