ಸದ್ಯದಲ್ಲೇ ಮಾರುತಿ ವ್ಯಾಗನಾರ್ ಸ್ಟಿಂಗ್ರೇ ಲಾಂಚ್?

By Nagaraja

ಹೆಚ್ಚಿನ ಆಧುನಿಕ ವಿನ್ಯಾಸ ಪಡೆದುಕೊಂಡಿರುವ ಮಾರುತಿ ಸುಜುಕಿ ವ್ಯಾಗನಾರ್ ಸ್ಟಿಂಗ್ರೇ ಸದ್ಯದಲ್ಲೇ ಭಾರತ ರಸ್ತೆಗೆ ಎಂಟ್ರಿ ಕೊಡಲಿದೆ ಎಂದು ವಾಹನೋದ್ಯಮ ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ ಪ್ರೀಮಿಯಂ ಲುಕ್ ಪಡೆದುಕೊಂಡಿರುವ ಸ್ಟಿಂಗ್ರೇ ಆಗಸ್ಟ್ 20ರಂದು ದೇಶದ ಮಾರುಕಟ್ಟೆಗೆ ಪ್ರವೇಶಿಸುವ ನಿರೀಕ್ಷೆಯಿದೆ. ಹಳೆ ವ್ಯಾಗನಾರ್ ಹೋಲಿಸಿದಾಗ ಹೆಚ್ಚಿನ ಆಧುನಿಕ ವಿನ್ಯಾಸವನ್ನು ಸ್ಟಿಂಗ್ರೇ ಪಡೆದುಕೊಂಡಿದೆ.

ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಸ್ಟಿಂಗ್ರೇ ಆಗಮನವಾಗಲಿದೆ. ಅವುಗಳೆಂದರೆ ಎಲ್‌ಎಕ್ಸ್‌ಐ, ವಿಎಕ್ಸ್‌ಐ ಹಾಗೂ ವಿಎಕ್ಸ್‌ಐ ಆಪ್ಷನಲ್. ಹಾಗೆಯೇ ಸಾಮಾನ್ಯ ವ್ಯಾಗನಾರ್ ಆವೃತ್ತಿಗಿಂತಲೂ 50,000 ರು.ಗಳಷ್ಟು ದುಬಾರಿಯೆನಿಸಲಿದೆ.

ಡೀಸೆಲ್ ವೆರಿಯಂಟ್

ಡೀಸೆಲ್ ವೆರಿಯಂಟ್

ವ್ಯಾಗನಾರ್ ಆರ್ ಹಾಗೂ ರಿಟ್ಜ್ ಬ್ರಾಂಡ್ ನಡುವೆ ಕಾಣಿಸಿಕೊಳ್ಳಲಿರುವ ವ್ಯಾಗನಾರ್ ಸ್ಟಿಂಗ್ರೇ, ಡೀಸೆಲ್ ವೆರಿಯಂಟ್‌ನಲ್ಲಿ ಆಗಮನವಾಗುವ ನಿರೀಕ್ಷೆಯಿದೆ. (ಇನ್ನು ಅಧಿಕೃತವಾಗಿಲ್ಲ.)

ಹ್ಯುಂಡೈ ಪ್ರತಿಸ್ಪರ್ಧಿ

ಹ್ಯುಂಡೈ ಪ್ರತಿಸ್ಪರ್ಧಿ

ಭಾರತದ ಬಿ1 ಸೆಗ್ಮೆಂಟ್ ಕಳೆದ ಕೆಲವು ಸಮಯಗಳಿಂದ ಸದ್ದಿಲ್ಲದೆ ಮುಂದುವರಿಯುತ್ತಿದೆ. ಆದರೆ ಇತ್ತೀಚೆಗಷ್ಟೇ ಗ್ರಾಂಡ್ ಐ10 ಆವೃತ್ತಿಯನ್ನು ಹ್ಯುಂಡೈ ಘೋಷಿಸಿತ್ತು. ಇದು ಕೂಡಾ ದೀಪಾವಳಿ ಹಬ್ಬದ ಆವೃತ್ತಿಯ ಅಸುಪಾಸಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ವೈಶಿಷ್ಟ್ಯ

ವೈಶಿಷ್ಟ್ಯ

ಅಂದ ಹಾಗೆ ವ್ಯಾಗನಾರ್ ಫೇಸ್‌ಲಿಫ್ಟ್ ಎಡಿಷನ್ ಈಗಾಗಲೇ ಮಾರುಕಟ್ಟೆ ಪ್ರವೇಶಿಸಿರುವುದರಿಂದ ಸ್ಟಿಂಗ್ರೇ ಮುಖಾಂತರ ಹೆಚ್ಚಿನ ವೈಶಿಷ್ಟ್ಯಗಳನ್ನು ಗ್ರಾಹಕರಿಗೆ ಪರಿಚಯಿಸುವ ಯೋಜನೆಯನ್ನು ದೇಶದ ನಂ.1 ಸಂಸ್ಥೆ ಮಾರುತಿ ಹೊಂದಿದೆ.

ಸುರಕ್ಷತೆ

ಸುರಕ್ಷತೆ

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಮಾರುತಿ ಸುಜುಕಿ ವ್ಯಾಗನಾರ್ ಸ್ಟಿಂಗ್ರೇ ಟಾಪ್ ಎಂಡ್ ವೆರಿಯಂಟ್‌ಗಳಲ್ಲಿ ಎಬಿಎಸ್, ಡ್ರೈವರ್ ಏರ್ ಬ್ಯಾಗ್, ಹೊಸ ಆಡಿಯೋ ಸಿಸ್ಟಂ, ಪ್ರೊಜೆಕ್ಟರ್ ಹೆಡ್‌ಲೈಟ್ ಹಾಗೂ ವಿದ್ಯುತ್ ಹೊಂದಾಣಿಕೆಯ ಓಆರ್‌ವಿಎಂಗಳಂತಹ ವೈಶಿಷ್ಟ್ಯಗಳು ಹೊಂದಿರಲಿದೆ.

ಎಂಜಿನ್

ಎಂಜಿನ್

ಅಂತೆಯೇ ನೂತನ ಸ್ಟಿಂಗ್ರೇ ಆವೃತ್ತಿಯು 1 ಲೀಟರ್ ಕೆ ಸಿರೀಸ್ ಎಂಜಿನ್ ಪಡೆಯುವ ನಿರೀಕ್ಷೆಯಿದೆ. ಇದರಲ್ಲಿ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇರಲಿದೆ.

Article Published On: Saturday, August 17, 2013, 8:03 [IST]
English summary
Reports says that much awaited Maruti Wagon R Stingray will launch soon. The report further adds that the variant will be introduced on the 20th of August in three variants – LXi, VXi and VXi Optional.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+