ಗರಿಷ್ಠ ಇಂಧನ ಕ್ಷಮತೆಯ ಬೆಂಝ್ ಎ ಕ್ಲಾಸ್ ಲಾಂಚ್

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್, ಮುಂಬೈನಲ್ಲಿ ನೂತನ ಎ ಕ್ಲಾಸ್ ಕಾರನ್ನು ಲಾಂಚ್ ಮಾಡಿದೆ. ಮನಸೊರೆಗೊಳ್ಳುವಂತಹ ವಿನ್ಯಾಸ ಪಡೆದಿರುವ ನೂತನ ಬೆಂಝ್ ಎಲ್ಲ ಹಂತದಲ್ಲೂ ಲಗ್ಷುರಿ ಫೀಚರ್ಸ್ ಪಡೆದುಕೊಂಡಿದೆ.

ಆರಾಮದಾಯಕ ಪಯಣ, ಕ್ರೀಡಾ ವಿನ್ಯಾಸ, ಸುರಕ್ಷತೆಗೆ ಹೆಚ್ಚಿನ ಆದ್ಯತೆ ಹಾಗೂ ಗರಿಷ್ಠ ನಿರ್ವಹಣೆಯನ್ನು ನೂತನ ಎ ಕ್ಲಾಸ್ ಖಾತ್ರಿಪಡಿಸುತ್ತದೆ. ಮರ್ಸಿಡಿಸ್ ಬೆಂಝ್ ವ್ಯವಸ್ಥಾಪಕ ನಿರ್ದೇಶಕ ಹಾಗ ಸಿಇಒ ಆಗಿರುವ ಎಬೆರ್‌ಹಾರ್ಡ್ ಕೆರ್ನ್ ನೂತನ ಬೆಂಝ್ ಗ್ರಾಹಕರಿಗೆ ನೂತನ ಕಾರನ್ನು ಪರಿಚಿಯಿಸದರು.

11 ಡ್ರೈವ್ ಅಸಿಸ್ಟಂಟ್ ವ್ಯವಸ್ಥೆ ಹೊಂದಿರುವ ನೂತನ ಬೆಂಝ್ ಎ ಕ್ಲಾಸ್ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಹೊಂದಿರುವ ಕಾರೆನಿಸಿಕೊಂಡಿದೆ. ಇದು ದೇಶಕ್ಕೆ ಪರಿಚಯವಾಗಿರುವ ಪೈಕಿ ಗರಿಷ್ಠ ಇಂಧನ ಕ್ಷಮತೆಯುಳ್ಳ ಲಗ್ಷುರಿ ಕಾರಾಗಿದ್ದು, ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿದರೆ 1000 ಕೀ.ಮೀ. ತನಕ ಸರಾಗವಾಗಿ ಚಲಿಸಬಹುದಾಗಿದೆ.

Mercedes Benz A Class

Mercedes Benz A Class

ಕಾರಿನ ಒಳಗೂ ಸೇರಿದಂತೆ ಹೊರಗಡೆ ವಿಶ್ವದರ್ಜೆಯ ವಿನ್ಯಾಸಗೊಳಿಸಲಾಗಿದೆ. ಖಂಡಿತವಾಗಿಯೂ ದೇಶದ ಯುವ ಜನತೆಯ ನೆಚ್ಚಿನ ಕಾರು ಬೆಂಝ್ ಎ ಕ್ಲಾಸ್ ಆಗಿರಲಿದೆ ಎಂದು ಕಂಪನಿ ನಂಬಿಕೆ ವ್ಯಕ್ತಪಡಿಸಿದೆ.

Mercedes Benz A Class

Mercedes Benz A Class

ದೇಶದ ಯುವ ಜನತೆಯೀಗ ಕಾಂಪಾಕ್ಟ್ ಲಗ್ಷುರಿ ಕಾರುಗಳನ್ನು ಬಯಸುತ್ತಿದ್ದಾರೆ. ಇದರ ಏರೋಡೈನಾಮಿಕ್ ವಿನ್ಯಾಸ ಇನ್ನಷ್ಟು ಮೆರಗು ತುಂಬಿದೆ. ಇದರಲ್ಲಿ 1.6 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹಾಗೂ 2.2 ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ.

Mercedes Benz A Class

Mercedes Benz A Class

ಬೆಂಝ್ ಎ ಕ್ಲಾಸ್ ಮುಂಬೈ ಎಕ್ಸ್ ಶೋ ರೂಂ ಆರಂಭಿಕ ದರ 21.93 ಲಕ್ಷ ರು.ಗಳಾಗಿವೆ. ಹಾಗೆಯೇ 180 ಸಿಡಿಐ ಡೀಸೆಲ್ ಮಾಡೆಲ್ ಪ್ರಾರಂಭಿಕ ದರ 22.73 ಲಕ್ಷ ರು.ಗಳಾಗಿವೆ. ಇದು ಪ್ರತಿ ಲೀಟರ್‌ಗೆ 20.6 ಕೀ. ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

Mercedes Benz A Class

Mercedes Benz A Class

ಸುರಕ್ಷತೆಗೂ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗಿದ್ದು, 7 ಏರ್ ಬ್ಯಾಗ್ ಆಳವಡಿಸಲಾಗಿದೆ. ಹಾಗೆಯೇ ಇಎಸ್‌ಪಿ, ಎಎಸ್‌ಆರ್, ಎಬಿಎಸ್, ಬ್ರೇಕ್ ಅಸಿಸ್ಟ್ ಸಿಸ್ಟಂ, ಅಟೆಕ್ಷನ್ ಅಸಿಸ್ಟ್ ಹಾಗೂ ಹಿಲ್ ಸ್ಟಾರ್ಟ್ ಅಸಿಸ್ಟ್ ವ್ಯವಸ್ಥೆ ಭಾರತೀಯ ರಸ್ತೆಗಳಲ್ಲಿ ಹೆಚ್ಚು ನೆರವಾಗಲಿದೆ.

Mercedes Benz A Class

Mercedes Benz A Class

ಅಂದ ಹಾಗೆ ಈಗಾಗಲೇ ಯುರೋಪ್‌ನಲ್ಲಿ ಲಾಂಚ್ ಕಂಡಿರುವ ಬೆಂಝ್ ಎ ಕ್ಲಾಸ್ 90 ಸಾವಿರ ಬುಕ್ಕಿಂಗ್‌ಗಳನ್ನು ಗಿಟ್ಟಿಸಿಕೊಂಡಿದ್ದು, ಭಾರಿ ಯಶಸ್ಸನ್ನು ಸಾಧಿಸಿದೆ. ಬೆಂಝ್ ಎ ಕ್ಲಾಸ್ ಭಾರತೀಯ ರಸ್ತೆಗಳಲ್ಲಿ ಹೆಚ್ಚು ಉಪಯುಕ್ತವೆನಿಸಲಿದೆ. ಇದರ ಇಕೊ ಸ್ಟಾರ್ಟ್ ಸ್ಟಾರ್ಟ್ ಸಾಧನ ಕೂಡಾ ಉಪಯುಕ್ತವೆನಿಸಲಿದೆ.

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Mercedes Benz A Class

Article Published On: Thursday, May 30, 2013, 15:24 [IST]
English summary
Mercedes Benz today launched the A Class luxury hatchback in India at an event in Mumbai. The A Class, Mercedes Benz's least expensive model in India will be offered in two variants here, a diesel and a petrol variant, with a starting price of just INR 21.93 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+