ಬೆಂಝ್ ಎಲೆಕ್ಟ್ರಿಕ್ ಗಾಡಿ ಬರಮಾಡಿಕೊಳ್ಳಲು ಸಿದ್ಧರಾಗಿರಿ

By Nagaraja

ಕೆಲವು ತಿಂಗಳುಗಳ ಹಿಂದೆಯಷ್ಟೇ ಬಿಡುಗಡೆಯಾದ ಬಿಎಂಡಬ್ಲ್ಯು ಐ3 ಎಲೆಕ್ಟ್ರಿಕ್ ಸಣ್ಣ ಕಾರು ವಾಹನೋದ್ಯಮದಲ್ಲಿ ಭಾರಿ ಸಂಚಲನವನ್ನೇ ಮೂಡಿಸಿತ್ತು. ಇದರಿಂದ ಸ್ಪೂರ್ತಿ ಪಡೆದಿರುವ ಜರ್ಮನ್ ಮೂಲದ ಮತ್ತೊಂದು ಐಷಾರಾಮಿ ವಾಹನ ತಯಾರಕ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್, ಬಿ ಕ್ಲಾಸ್ ಎಲೆಕ್ಟ್ರಿಕ್ ಡ್ರೈವ್ ತಯಾರಿಸಲು ಸನ್ನದ್ಧಗೊಂಡಿದೆ.

ಇದು ಬಿಎಂಡಬ್ಲ್ಯು ಐ3ಗಿಂತಲೂ ವ್ಯಾಪಕ ಯಶಸ್ವಿ ಕಾಣುವ ನಂಬಿಕೆಯನ್ನು ಬೆಂಝ್ ಹೊಂದಿದೆ. ಅಷ್ಟಕ್ಕೂ ಬೆಂಝ್ ಬಿ ಕ್ಲಾಸ್ ಎಲೆಕ್ಟ್ರಿಕ್ ಡ್ರೈವ್, ಬಿಎಂಡಬ್ಲ್ಯುಗಿಂತ ಹೇಗೆ ಬಿನ್ನವಾಗಿರಲಿದೆ ಎಂಬುದನ್ನು ಫೋಟೊ ಫೀಚರ್ ಮೂಲಕ ತಿಳಿದುಕೊಳ್ಳಿರಿ...

ಕಾಂಪಾಕ್ಟ್ ಎಸ್‌ಯುವಿ ಡಿಸೈನ್

ಕಾಂಪಾಕ್ಟ್ ಎಸ್‌ಯುವಿ ಡಿಸೈನ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಡೈಮ್ಲರ್ ಆರ್ ಆಂಡ್ ಡಿ ಬಾಸ್, ಥಾಮಸ್ ವೆಬೆರ್, ಬಿಎಂಡಬ್ಲ್ಯು ಬಿ ಕ್ಲಾಸ್ ಎಲೆಕ್ಟ್ರಿಕ್ ಡ್ರೈವ್, ಐದು ಡೋರುಗಳ ಹ್ಯಾಚ್‌ಬ್ಯಾಕ್‌ಗಿಂತ ಭಿನ್ನವಾಗಿ ಕಾಂಪಾಕ್ಟ್ ಎಸ್‌ಯುವಿ ತರಹನೇ ಗೋಚರಿಸಲಿದೆ.

ಐದು ಡೋರ್

ಐದು ಡೋರ್

ಇನ್ನು ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್ ಎಲೆಕ್ಟ್ರಿಕ್ ಡ್ರೈವ್ ಐದು ಸೀಟುಗಳ ಸಿಟ್ಟಿಂಗ್ ವ್ಯವಸ್ಥೆ ಹೊಂದಿರಲಿದೆ. ಹಾಗೆಯೇ ಇದು 200 ಕೀ.ಮೀ. ವರೆಗೂ ರೇಂಜ್ ನೀಡಲಿದೆ. ಇನ್ನೊಂದೆ ಬಿಎಂಡಬ್ಲ್ಯು ಐ3 ರೇಂಜ್ 190 ಕೀ.ಮೀ. ಆಗಿದೆ.

ಗರಿಷ್ಠ ವೇಗ

ಗರಿಷ್ಠ ವೇಗ

ಹಾಗೆಯೇ ಬೆಂಝ್ ಬಿ ಕ್ಲಾಸ್ ಎಲೆಕ್ಟ್ರಿಕ್ ಡ್ರೈವ್ ಗರಿಷ್ಠ ವೇಗತೆ ಪ್ರತಿ ಗಂಟೆಗೆ 160 ಕೀ.ಮೀ. ಆಗಿರಲಿದೆ. ಅಂದರೆ ಬಿಎಂಡಬ್ಲ್ಯು ಐ3 ವಿದ್ಯುತ್ ಚಾಲಿತ ಕಾರಿಗಿಂತಲೂ (150 ಕೀ.ಮೀ) ಹೆಚ್ಚಾಗಿರಲಿದೆ. ಅಂತೆಯೇ 7.9 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಇಲ್ಲೂ ಬಿಎಂಡಬ್ಲ್ಯು ಐ3 (7.2 ಸೆಕೆಂಡು) ಮೀರಿಸುವಲ್ಲಿ ಬೆಂಝ್ ಯಶಸ್ವಿಯಾಗಿದೆ.

ಮರ್ಸಿಡಿಸ್ ಬೆಂಝ್ ಬಿ-ಕ್ಲಾಸ್ ಎಲೆಕ್ಟ್ರಿಕ್ ಡ್ರೈವ್

ಇನ್ನು ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆಗೆ ಆಗಮನವಾಗಲಿರುವುದು ಸಹ ಬಿಎಂಡಬ್ಲ್ಯು ಐ3 ಕಾರನ್ನು ಓವರ್‌ಟೇಕ್ ಮಾಡಲು ಬೆಂಝ್‌ಗೆ ನೆರವಾಗುವ ನಿರೀಕ್ಷೆಯಿದೆ.

2014ರಲ್ಲಿ ಲಾಂಚ್

2014ರಲ್ಲಿ ಲಾಂಚ್

ಅಂದ ಹಾಗೆ 2014ರಲ್ಲಿ ಅಮೆರಿಕ ಹಾಗೂ ಯುರೋಪ್ ಮಾರುಕಟ್ಟೆ ಪ್ರವೇಶ ಪಡೆಯಲಿರುವ ಬೆಂಝ್ ಬಿ ಕ್ಲಾಸ್ ಎಲೆಕ್ಟ್ರಿಕ್ ಡ್ರೈವ್ ಸದ್ಯಕ್ಕಂತೂ ಭಾರತ ಪ್ರವೇಶಿಸುವ ಲಕ್ಷ್ಮಣಗಳು ಕಾಣುತ್ತಿಲ್ಲ. ಯಾಕೆಂದರೆ ಹೈ ಎಂಡ್ ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾದ ಮೂಲಸೌಕರ್ಯ ದೇಶದಲ್ಲಿ ಲಭ್ಯವಿಲ್ಲ.

Article Published On: Tuesday, October 15, 2013, 12:00 [IST]
English summary
It is yet to be determined how successful the BMW i3 electric small car, launched a few months back, will be in the real world. On paper though, the car seems very impressive. Also, come 2014 the i3 will receive heat from arch rival Mercedes-Benz's B-Class electric drive.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+