ಹಗುರ ಭಾರದ ಬೆಂಝ್ ಲಗ್ಷುರಿ ಕಾರು ಅನಾವರಣ
ಗರಿಷ್ಠ ನಿರ್ವಹಣೆಯ ಮರ್ಸಿಡಿಸ್ ಬೆಂಝ್ ಐಷಾರಾಮಿ ಎಸ್63 ಎಎಂಜಿ ಕಾರು ಅನಾವರಣಗೊಂಡಿದೆ. ಲಗ್ಷುರಿ ಕಾರುಗಳ ಪೈಕಿ ಬೆಂಝ್ ಎಎಂಜಿ ಕಾರುಗಳು ಅತ್ಯಂತ ಆಧುನಿಕ ಫೀಚರ್‌ಗಳನ್ನು ಹೊಂದಿವೆ.
ಸಾಮಾನ್ಯ ಬೆಂಝ್ ಆವೃತ್ತಿಗಳಿಗೂ ಭಿನ್ನವಾಗಿ ಎಎಂಜಿ ಮಾದದರಿಗಳು ಹೆಚ್ಚು ಆಕ್ರಮಣಕಾರಿ ನೋಟ, ಗರಿಷ್ಠ ನಿರ್ವಹಣೆ, ಉತ್ತಮ ಸ್ಥಿರತೆ ಹಾಗೂ ಫೈಬರ್ ಫೈಬರ್ ಬಳಕೆಯನ್ನು ಹೆಚ್ಚಾಗಿ ಕಾಣಬಹುದು. ಇದುವೇ 2014 ಬೆಂಝ್ ಎಸ್ ಕ್ಲಾಸಿಗೂ ಹೆಚ್ಚು ಕ್ರೀಡಾ ವಿನ್ಯಾಸ ಕಲ್ಪಿಸುವಲ್ಲಿ ನೆರವಾಗಿದೆ.

ಪ್ರಮುಖ ಬದಲಾವಣೆ
ಬೆಂಝ್ ಎಸ್63 ಎಎಂಜಿ ಹಿಂದಿನ ಆವೃತ್ತಿಗಿಂತಲೂ ವಿಭಿನ್ನವಾಗಿದ್ದು, ಹೊಸ ಬಂಪರ್, ಎದುರುಗಡೆ ಏರ್ ವಿಭಜಕ, ಸೈಡ್ ಸ್ಕರ್ಟ್ ಹಾಗೂ ಹಗುರ ಅಲಾಯ್ ವೀಲ್‌ಗಳನ್ನು ಹೊಂದಿದೆ.

ಎಂಜಿನ್
ಬೆಂಝ್ ಎಸ್63 ಎಎಂಜಿ 5.5 ಲೀಟರ್ ವಿ8 ಟ್ವಿನ್ ಟರ್ಬೊ ಎಂಜಿನ್ ಹೊಂದಿರಲಿದೆ. ಹಾಗೆಯೇ ಸ್ಪೀಡ್ ಶಿಫ್ಟ್ 7 ಶಿಫ್ಟ್ ಸ್ಪೋರ್ಟ್ಸ್ ಟ್ರಾನ್ಸ್‌ಮಿಷನ್ ಹೊಂದಿದೆ.

ಅಶ್ವಶಕ್ತಿ
ಇದು 577 ಅಶ್ವಶಕ್ತಿ (900 ಎನ್‌ಎಂ ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹಗುರವಾದ ಕಾರು
ತನ್ನ ಹಿಂದಿನ ಆವೃತ್ತಿಗಿಂತಲೂ 2014 ಬೆಂಝ್ ಎಸ್ ಕ್ಲಾಸ್ ಕಡಿಮೆ ಭಾರವನ್ನು ಹೊಂದಿದ್ದು, 100 ಕೆ.ಜಿಗಳಷ್ಟು ತೂಕ ಕಡಿಮೆಯಾಗಿದೆ. ಅಂದರೆ ಇದರಲ್ಲಿ ಲೈಟ್ ವೇಟ್ ನಿರ್ವಹಣಾ ತಂತ್ರವನ್ನು ಆಳವಡಿಸಲಾಗಿದೆ.

ಮರ್ಸಿಡಿಸ್ ಬೆಂಝ್ ಎಸ್63 ಎಎಂಜಿ
ಹಗುರವಾದ ಅಲಾಯ್ ವೀಲ್ ಮೂಲಕವೂ ಕಾರಿನ ಭಾರ ಕಡಿಮೆ ಮಾಡಲು ಪ್ರಯತ್ನಿಸಲಾಗಿದೆ. ಕಡಿಮೆ ಭಾರದ ಬ್ರೇಕಿಂಗ್ ಸಿಸ್ಟಂ, ಕಡಿಮೆ ಭಾರದ ಲಿಥಿಯಂ ಇಯಾನ್ ಬ್ಯಾಟರಿ, 4 ಮ್ಯಾಟಿಕ್ ಆಲ್ ವೀಲ್ ಡ್ರೈವ್ ಸಿಸ್ಟಂನಲ್ಲಿ ಮಾಡಲಾಗಿರುವ ಬದಲಾವಣೆ, ಅಲ್ಯೂಮಿನಿಯಂ ಬಾಡಿ ಪ್ಯಾನೆಲ್ ಹಾಗೂ ಕಾರ್ಬನ್ ಫೈಬರ್ ಬಳಕೆ ಭಾರ ಕಡಿಮೆ ಮಾಡುವಲ್ಲಿ ನೆರವಾಗಿದೆ.

ಮರ್ಸಿಡಿಸ್ ಬೆಂಝ್ ಎಸ್63 ಎಎಂಜಿ
ನೂತನ ಬೆಂಜ್ ಎಸ್63 ಎಎಂಜಿ ಕೇವಲ ನಾಲ್ಕು ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪ್ರತಿ ಗಂಟೆಗೆ 300 ಕೀ.ಮೀ ಗರಿಷ್ಠ ವೇಗದಲ್ಲಿ ಚಲಿಸಲಿದೆ.

ಮರ್ಸಿಡಿಸ್ ಬೆಂಝ್ ಎಸ್63 ಎಎಂಜಿ
ಇಂಟಿರಿಯರ್ ಸೇರಿದಂತೆ ಎಕ್ಸ್‌ಟೀರಿಯರ್ ಕೂಡಾ ಐಷಾರಾಮಿ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಮರ್ಸಿಡಿಸ್ ಬೆಂಝ್ ಎಸ್63 ಎಎಂಜಿ
ಅಂದ ಹಾಗೆ ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಸಾಗಲಿರುವ ಫ್ರಾಂಕ್‌ಫರ್ಕ್ ಆಟೋ ಶೋದಲ್ಲಿ 2014 ಮರ್ಸಿಡಿಸ್ ಬೆಂಝ್ ಎಸ್63 ಎಎಂಜಿ ಪ್ರದರ್ಶನ ಕಾಣಲಿದೆ.

ಮರ್ಸಿಡಿಸ್ ಬೆಂಝ್ ಎಸ್63 ಎಎಂಜಿ
ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

ಮರ್ಸಿಡಿಸ್ ಬೆಂಝ್ ಎಸ್63 ಎಎಂಜಿ
ಫ್ರಂಟ್ ವ್ಯೂ

ಮರ್ಸಿಡಿಸ್ ಬೆಂಝ್ ಎಸ್63 ಎಎಂಜಿ
ಸೈಡ್ ವ್ಯೂ

ಮರ್ಸಿಡಿಸ್ ಬೆಂಝ್ ಎಸ್63 ಎಎಂಜಿ
ಇಂಟಿರಿಯರ್ ವ್ಯೂ

ಮರ್ಸಿಡಿಸ್ ಬೆಂಝ್ ಎಸ್63 ಎಎಂಜಿ
ರಿಯರ್ ವ್ಯೂ


Click it and Unblock the Notifications








