ಮರ್ಸಿಡಿಸ್ ಜಿಎಲ್‌ಇ45 ಎಎಂಜಿ ಅನಾವರಣ
ದೆಹಲಿ ಸಮೀಪದ ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ 2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ನೂತನ ಜಿಎಲ್‌ಎ45 ಎಎಂಜಿ ಅನಾವರಣಗೊಳಿಸಿದೆ.
2014 ಆಟೋ ಎಕ್ಸ್ ಪೋ
ನಿಮ್ಮ ಮಾಹಿತಿಗಾಗಿ ಎಎಂಜಿ, ಮರ್ಸಿಡಿಸ್ ಬೆಂಝ್‌ನ ನಿರ್ವಹಣಾ ವಿಭಾಗವಾಗಿದೆ. ಹಾಗಿದ್ದರೂ ವಿಶೇಷವಾಗಿಯೂ ಭಾರತಕ್ಕಾಗಿ ಸಣ್ಣದಾದ ಎಎಂಜಿ ಕಾರನ್ನು ಬೆಂಝ್ ಪರಿಚಯಸುತ್ತಿದೆ.

ಇದು ಬೆಂಝ್‌ನ ಸಿ63, ಇ63, ಜಿ63, ಎಸ್‌ಎಲ್‌ಕೆ55 ಮತ್ತು ಎಸ್‌ಎಲ್‌ಎಸ್ ಎಎಂಜಿ ಸಾಲಿಗೆ ಜಿಎಲ್‌ಎ45 ಆವೃತ್ತಿ ಸೇರಿಕೊಳ್ಳಲಿದೆ.

ಒಂದು ಕೋಟಿ ರು.ಗಿಂತಲೂ ದುಬಾರಿಯಾಗಲಿರುವ ಬೆಂಝ್ ಸಿಎಲ್‌ಎ45 ಎಎಂಜಿ ಕಾರಿನ ಬುಕ್ಕಿಂಗ್ ಪ್ರಕ್ರಿಯೆ ಎಪ್ರಿಲ್ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆಯಿದೆ.

ಸಿಎಲ್‌ಎ ಕ್ಲಾಸ್ ತಲಹದಿಯಲ್ಲಿ ನಿರ್ಮಾಣವಾಗಿರುವ ಜಿಎಲ್‌ಎ 45 ಎಎಂಜಿ, 2.0 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ.

ಇದು ಕೇವಲ 4.6 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಇನ್ನು ವರ್ಷಾಂತ್ಯದಲ್ಲಿ ಈ ನಿರ್ವಹಣಾ ಕಾರು ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.


Click it and Unblock the Notifications








