ಮರ್ಸಿಡಿಸ್ ಬೆಂಝ್ ಜಿಎಲ್‌ಎ ಕ್ಲಾಸ್ ಎಸ್‌ಯುವಿ ಬಿಡುಗಡೆ
ಪ್ರಸಕ್ತ ಸಾಲಿನಲ್ಲಿ ಅನೇಕ ಹೊಸ ಹೊಸ ಮಾದರಿಗಳನ್ನು ಪರಿಚಯಿಸಿರುವ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಮಗದೊಂದು ಆಕರ್ಷಕ ಕಾರನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿದೆ. ಹೌದು, ಪ್ರೀಮಿಯಂ ಹಾಗೂ ನಿರ್ವಹಣಾ ಕಾರುಗಳಲ್ಲಿ ಹೆಚ್ಚು ಹೆಸರು ಮಾಡಿರುವ ಬೆಂಝ್, ಹೊಸತಾದ ಜಿಎಲ್‌ಎ ಕ್ಲಾಸ್ ಕ್ರೀಡಾ ಬಳಕೆಯ ಕಾರನ್ನು (ಎಸ್‌ಯುವಿ) ಬಿಡುಗಡೆ ಮಾಡಿದೆ. ಇದರ ಪ್ರಾರಂಭಿಕ ಬೆಲೆ 32.75 ಲಕ್ಷ ರು.ಗಳಾಗಿದೆ.
ಬೆಂಝ್‌ನ ಹೊಸ ಜಿಎಲ್‌ಎ ಕ್ಲಾಸ್ ಪ್ರಮುಖವಾಗಿಯೂ ಬಿಎಂಡಬ್ಲ್ಯು ಎಕ್ಸ್1 ಮತ್ತು ಆಡಿ ಕ್ಯೂ3 ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ. ಇದರ ಟಾಪ್ ಎಂಡ್ ವೆರಿಯಂಟ್ 36.9 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಮರ್ಸಿಡಿಸ್ ಬೆಂಝ್‌ನ ಎಂಎಫ್‌ಎ (ಮೊಡ್ಯುಲರ್/ಮರ್ಸಿಡಿಸ್ ಫ್ರಂಟ್ ಆರ್ಕಿಟೇಕ್ಚರ್) ತಲಹದಿಯಲ್ಲಿ ನಿರ್ಮಾಣವಾಗಿರುವ ಮೂರನೇ ಮಾದರಿ ಇದಾಗಿದೆ. ಇದಕ್ಕೂ ಮೊದಲು ಎ ಕ್ಲಾಸ್ ಮತ್ತು ಬಿ ಕ್ಲಾಸ್ ಇದೇ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿತ್ತು.

ಹೆಸರಿಗೆ ತಕ್ಕಂತೆ ಕ್ರಾಸೋವರ್ ಆಗಿರುವ ಬೆಂಝ್ ಜಿಎಲ್‌ಇ, ತನ್ನ ಇತರ ಮಾದರಿಗಿಂತಲೂ ವಿಭಿನ್ನತೆಯನ್ನು ಹೊಂದಿದೆ. ಇದು 4417 ಎಂಎಂ ಉದ್ದ, 1804 ಎಂಎಂ ಅಗಲ, 1494 ಎಂಎಂ ಎತ್ತರ ಮತ್ತು 2699 ಎಂಎಂ ವೀಲ್ ಬೇಸ್ ಪಡೆದುಕೊಂಡಿದೆ. ಅಷ್ಟೇ ಯಾಕೆ ಸೆಗ್ಮೆಂಟ್ ಲೀಡಿಂಗ್ 183 ಎಂಎಂ ಗ್ರೌಂಡ್ ಕ್ಲಿಯರನ್ಸ್ ಸಹ ಪಡೆದುಕೊಂಡಿದೆ. ಈ ಮಿನಿ ಎಸ್‌ಯುವಿ ಕಾರಿನ ಮುಂದುಗಡೆ ಬೈ ಕ್ಸೆನಾನ್ ಹೆಡ್ ಲ್ಯಾಂಪ್ ಮತ್ತು ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಸೌಲಭ್ಯ ಇರುತ್ತದೆ.

ಆಕ್ಟಿವ್ ಪಾರ್ಕಿಂಗ್ ಅಸಿಸ್ಟಂ, ಫ್ರಂಟ್ ಆಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ನೇವಿಗೇಷನ್ ಸಿಸ್ಟಂ, ರಿವರ್ಸಿಂಗ್ ಕ್ಯಾಮೆರಾ, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಆಡಿಯೋ ಸ್ಟ್ರೀಮಿಂಗ್ ಮತ್ತು ರೇಡಿಯೇಟರ್ ಗ್ರಿಲ್‌ಗಳಂತಹ ಪರಿಣಾಮಕಾರಿ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಇನ್ನು ಸುರಕ್ಷತೆಗೂ ಹೆಚ್ಚಿನ ಆದತ್ಯೆ ಕೊಡಲಾಗಿದ್ದು, 7 ಏರ್ ಬ್ಯಾಗ್, ಆ್ಯಂಟಿ ಪ್ಲಿಪ್ ರೆಗ್ಯೂಲೇಷನ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಜೊತೆಗೆ ಬ್ರೇಕ್ ಅಸಿಸ್ಟ್ (ಬಿಎ), ಇಎಸ್‌ಪಿ, ಕರ್ವ್ ಡೈನಾಮಿಕ್ ಅಸಿಸ್ಟ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್‌ಗಳಂತಹ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ಅಂದ ಹಾಗೆ 1.8 ಲೀಟರ್ ಟರ್ಬೊಚಾರ್ಜ್ಡ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಹೊಸ ಜಿಎಲ್‌ಎ ಕ್ಲಾಸ್ 181 ಅಶ್ವಶಕ್ತಿ (300 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅದೇ ರೀತಿ 2.2 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ 135 ಬಿಎಚ್‌ಪಿ (300 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇವೆರಡು ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ.

ಎಂಜಿನ್, ವೆರಿಯಂಟ್ ಆಧರಿತ ಬೆಲೆ (ಎಕ್ಸ್ ಶೋ ರೂಂ ದೆಹಲಿ)
ಎಂಜಿನ್ ಆಯ್ಕೆ
1.8 ಲೀಟರ್ ಪೆಟ್ರೋಲ್ (7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್) - 13.8 km/l
2.2 ಡೀಸೆಲ್ (7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ) 17.9Km/l
ವೆರಿಯಂಟ್, ಬೆಲೆ
ಜಿಎಲ್‌ಎ 200 ಸಿಡಿಐ (ಸ್ಟೈಲ್) - 32.75 ಲಕ್ಷ ರು.
ಜಿಎಲ್‌ಎ 200 ಪೆಟ್ರೋಲ್ ಸ್ಪೋರ್ಟ್ - 36 ಲಕ್ಷ ರು.
ಜಿಎಲ್‌ಎ 200 ಸಿಡಿಐ ಸ್ಪೋರ್ಟ್ -36.9 ಲಕ್ಷ ರು.

ಮುಖ್ಯಾಂಶಗಳು
7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್,
7 ಏರ್ ಬ್ಯಾಗ್,
ಎಬಿಎಸ್ ಜೊತೆ ಬ್ರೇಕ್ ಅಸಿಸ್ಟ್,
ಇಎಸ್‌ಪಿ,
18 ಇಂಚಿನ ಐದು ಟ್ವಿನ್ ಸ್ಪೋಕ್ ಅಲಾಯ್ ವೀಲ್ಸ್,
ಹಿಲ್ ಸ್ಟಾರ್ಟ್ ಅಸಿಸ್ಟ್,
ಕ್ರೂಸ್ ಕಂಟ್ರೋಲ್,
183 ಎಂಎಂ ಗ್ರೌಂಡ್ ಕ್ಲಿಯರನ್ಸ್,
ಮೈಲೇಜ್,
ರಿವರ್ಸಿಂಗ್ ಕ್ಯಾಮೆರಾ,
ಅಟೆಕ್ಷನ್ ಅಸಿಸ್ಟ್,
ಹರ್ಮಾನ್ ಕರ್ಡಾನ್ ಲಾಜಿಕ್ 7 ಸೌರಂಡ್ ಸೌಂಡ್ ಸಿಸ್ಟಂ,
ಪ್ಯಾನೋರಾಮಿಕ್ ಸನ್ ರೂಫ್,


Click it and Unblock the Notifications








