22 ಲಕ್ಷ ಬೆಳೆಬಾಳುವ ಬೆಂಝ್ ಡೀಸೆಲ್ ಗಾಡಿ ಹೆಂಗಿದೆ ನೋಡಿ

By Nagaraja

ಕಳೆದ ದಿನವಷ್ಟೇ ಮುಂಬೈನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್, ನೂತನ ಬಿ ಕ್ಲಾಸ್ ಡೀಸೆಲ್ ಹ್ಯಾಚ್‌ಬ್ಯಾಕ್ ಕಾರನ್ನು ಲಾಂಚ್ ಮಾಡಿತ್ತು.

22 ಲಕ್ಷಗಿಂತಲೂ ಹೆಚ್ಚು ದುಬಾರಿಯಾಗಿರುವ ಬೆಂಝ್ ಬಿ ಕ್ಲಾಸ್ ಡೀಸೆಲ್ ಕಾರಿನ ಹೆಚ್ಚಿನ ಚಿತ್ರಗಳನ್ನು ನಾವಿಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ಬೆಂಝ್ ನೂತನ ಕಾರು ಲಾಂಚ್ ವೇಳೆ ಬಾಲಿವುಡ್ ನಟ ಅಭಯ್ ಡಿಯೋಲ್, ನಟಿ ಆದಿತಿ ರಾವ್ ಹೈದರಿ ಹಾಗೂ ಬೆಂಝ್ ಇಂಡಿಯಾ ಸಿಇಒ ಎಬೆರ್‌ಹಾರ್ಡ್ ಕೆರ್ನ್ ಹಾಜರಿದ್ದರು.

ಇದೇ ಸಂರ್ಭದಲ್ಲಿ ಲಗ್ಷುರಿ ಟೂರಿಂಗ್ ಟ್ರಯಲ್ ಅಭಿಯಾನ ಬಿಡುಗಡೆಗೊಳಿಸಲಾಗಿದ್ದು, ವಿಜೇತರಿಗೆ ಅಭಯ್ ಡಿಯೋಲ್ ಹಾಗೂ ಆದಿತಿ ರಾವ್ ಹೈದರಿ ಜತೆ ಪಯಣಿಸುವ ಸುವರ್ಣಾವಕಾಶ ಲಭ್ಯವಾಗಲಿದೆ.

ನತಿ ಆದಿತಿ ಜತೆ ಪಯಣಿಸಲು ಏನು ಮಾಡಬೇಕು?

ಸ್ಪರ್ಧಾಳುಗಳು ನೂತನ ಬೆಂಝ್ ಬಿ180 ಸಿಡಿಐ ಕಾರಿನಲ್ಲಿ ಟೆಸ್ಟ್ ಡ್ರೈವ್ ಮಾಡಿ ಅದರ ಫೋಟೊಸ್‌ಗಳನ್ನು readytop.in ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗಿದೆ. ಆ ಬಳಿಕ ವಿಜೇತ ಸ್ಪರ್ಧಾಳುಗಳಿಗೆ ನಟ ಅಭಯ್ ಡಿಯೋಲ್ ಹಾಗೂ ನಟಿ ಆದಿತಿ ರಾವ್ ಹೈದರಿ ಜತೆ ಪಯಣಿಸುವ ಅವಕಾಶ ಲಭ್ಯವಾಗಲಿದೆ.

22 ಲಕ್ಷ ಬೆಳೆಬಾಳುವ ಬೆಂಝ್ ಡೀಸೆಲ್ ಗಾಡಿ ಲಾಂಚ್

ನೂತನ ಬೆಂಝ್ ಬಿ180 ಸಿಡಿಐ ಕಾರು 2.2 ಲೀಟರ್ ಫೋರ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 109 ಅಶ್ವಶಕ್ತಿ ಉತ್ಪಾದಿಸಲಿದೆ.

22 ಲಕ್ಷ ಬೆಳೆಬಾಳುವ ಬೆಂಝ್ ಡೀಸೆಲ್ ಗಾಡಿ ಹೆಂಗಿದೆ ನೋಡಿ

ಇದು 7 ಸ್ಪೀಡ್, 7ಜಿ ಡಿಸಿಟಿ, ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಜತೆಗೆ ಮುಂಭಾಗದ ವೀಲ್‌ನಲ್ಲಿ ಪ್ಯಾಡಲ್ ಶಿಫ್ಟ್ ಟ್ರಾನ್ಸ್‌ಮಿಟ್ಸ್ ಪವರ್ ಹೊಂದಿದೆ. ಇದು ಗಂಟೆಗೆ 190 ಕೀ.ಮೀ. ವೇಗತೆಯಲ್ಲಿ ಚಲಿಸಲಿದೆ.

22 ಲಕ್ಷ ಬೆಳೆಬಾಳುವ ಬೆಂಝ್ ಡೀಸೆಲ್ ಗಾಡಿ ಲಾಂಚ್

ಜೂಪಿಟರ್ ರೆಡ್, ಸರ್ಕಲ್ ವೈಟ್, ಪೊಲಾರ್ ಸಿಲ್ವರ್ ಜತೆಗೆ ಮೊನೊಲಿತ್ ಗ್ರೇ ಕಲರ್ ವೆರಿಯಂಟ್‌ಗಳಲ್ಲಿ ನೂತನ ಬೆಂಝ್ ಡೀಸೆಲ್ ಕಾರು ಲಭ್ಯವಿರಲಿದೆ.

22 ಲಕ್ಷ ಬೆಳೆಬಾಳುವ ಬೆಂಝ್ ಡೀಸೆಲ್ ಗಾಡಿ ಲಾಂಚ್

ಹಾಗಿದ್ದರೂ ಪಾನೋರಾಮಿಕ್ ಸನ್ ರೂಫ್ ಹಾಗೂ 17 ಇಂಚು ಅಲಾಯ್ ವೀಲ್‌ಗಳಂತಹ ಪ್ರೀಮಿಯಂ ಫೀಚರ್‌ಗಳನ್ನು ನೂತನ ಬೆಂಝ್ ಕಳೆದುಕೊಳ್ಳಲಿದೆ.

ಸುರಕ್ಷತೆ

ಇದೇ ಮೊದಲ ಬಾರಿಯೆಂಬಂತೆ ಈ ಸೆಗ್ಮೆಂಟ್ ಕಾರಿನಲ್ಲಿ ಒಟ್ಟು 7 ಏರ್ ಬ್ಯಾಗ್‌ಗಳ ಗರಿಷ್ಠ ಸುರಕ್ಷತೆ ಆಳವಡಿಕೆಯಾಗಲಿದೆ.

ಡ್ರೈವರ್ ಅಸಿಸ್ಟ್ ಸಿಸ್ಟಂ

ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಜತೆ ಎಎಸ್‌ಆರ್, ಹಿಲ್ ಸ್ಟಾರ್ಟ್ ಅಸಿಸಿಟ್, ಬ್ರೇಕ್ ಅಸಿಸ್ಟ್ ಸಿಸ್ಟಂ ಇರಲಿದೆ.

ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್ ಡೀಸೆಲ್ ಕಾರು

ಇನ್ನು ಒಳಭಾಗದಲ್ಲೂ 20 ಸಿಡಿ ಮಾಹಿತಿ ಸಿಸ್ಟಂ ಕೊಡಲಾಗಿದೆ.

ದರ ಮಾಹಿತಿ ( ಎಕ್ಸ್ ಶೋ ರೂಂ ಮುಂಬೈ)

ಮರ್ಸಿಡಿಸ್ ಬೆಂಝ್ ಬಿ180 ಸಿಡಿಐ ದರ 22.6 ಲಕ್ಷ ರು.

22 ಲಕ್ಷ ಬೆಳೆಬಾಳುವ ಬೆಂಝ್ ಡೀಸೆಲ್ ಗಾಡಿ ಲಾಂಚ್

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Article Published On: Friday, July 12, 2013, 15:41 [IST]
English summary
As part of its promotional campaign Mercedes also announced Luxury Touring Trail campaign through which winners will get a chance to travel with Abhay Deol and Aditi rao Hydari.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+