ಹೊಸ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೊ ಭರ್ಜರಿ ಬಿಡುಗಡೆ

By Nagaraja

ವಾಹನ ಪ್ರೇಮಿಗಳು ಕಾತರದಿಂದ ಕಾದು ಕುಳಿತಿರುವ ಹೊಸ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೊ ಎಸ್‌ಯುವಿ ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಒಂದು ಕಾಲದಲ್ಲಿ ದೇಶದ ರಸ್ತೆಯಲ್ಲಿ ಅತಿ ಹೆಚ್ಚು ಸದ್ದು ಮಾಡಿರುವ ಸ್ಕಾರ್ಪಿಯೊ ಹಲವಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಮಗದೊಮ್ಮೆ ವಾಹನ ಪ್ರೇಮಿಗಳಲ್ಲಿ ಸಂಚಲನ ಮೂಡಿಸುವ ನಿರೀಕ್ಷೆ ಹೊಂದಿದೆ.

ಇದಕ್ಕೂ ಮೊದಲು ಸ್ನಾಪ್‌ಡೀಲ್‌ನಲ್ಲಿ ಸ್ಕಾರ್ಪಿಯೊ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿದ್ದ ಮಹೀಂದ್ರ, ದೇಶದ ವಾಹನ ಇತಿಹಾಸದಲ್ಲಿ ಹೊಸ ಕ್ರಾಂತಿಯೆಬ್ಬಿಸಿತ್ತು. ಅಂದ ಹಾಗೆ ಹೊಸ ತಲೆಮಾರಿನ ಸ್ಕಾರ್ಪಿಯೊ ಪ್ರಾರಂಭಿಕ ದರ 7.98 ರು.ಗಳಾಗಿರಲಿದೆ (ಮುಂಬೈ ಎಕ್ಸ್ ಶೋ ರೂಂ).

ದರ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

ದರ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

s2 - 7.98 ಲಕ್ಷ ರು.

s4 - 8.6 ಲಕ್ಷ ರು.

s6 - 9.7 ಲಕ್ಷ ರು.

s8 - 10.84 ಲಕ್ಷ ರು.

s10 - 11.46 ಲಕ್ಷ ರು.

ಹೊಸ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೊ ಭರ್ಜರಿ ಬಿಡುಗಡೆ

ಹಿಂದಿನ ಮಾದರಿಗೆ ಹೋಲಿಸಿದಾಗ ಸಂಪೂರ್ಣವಾಗಿಯೂ ವಿಭಿನ್ನ ನೋಟ ಗಿಟ್ಟಿಸಿಕೊಂಡಿರುವ ಸ್ಕಾರ್ಪಿಯೊ ವಾಹನ ಪ್ರೇಮಿಗಳಲ್ಲಿ ಕುತೂಹಲ ಕೆರಳಿಸುವಲ್ಲಿ ಯಶ ಕಂಡಿದೆ. ಇದು ಕೇವಲ ವಿನ್ಯಾಸದ ವಿಚಾರದಲ್ಲಿ ಮಾತ್ರವಲ್ಲದೆ ಕಾರಿನ ಒಳಗೂ ಹಾಗೂ ತಾಂತ್ರಿಕ ಮಾನದಂಡಗಳಲ್ಲಿ ಮಹತ್ವದ ಬದಲಾವಣೆ ಪಡೆದುಕೊಂಡಿದೆ.

ಹೊಸ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೊ ಭರ್ಜರಿ ಬಿಡುಗಡೆ

ಎಲ್ಲ ಹೊಸತನದಿಂದ ಕೂಡಿರುವ ಚಾಸೀ ಮತ್ತು ಐದು ಸ್ಪೀಡ್ ಮ್ಯಾನುವಲ್ ಶಿಫ್ಟ್ ಗೇರ್ ಅತ್ಯುತ್ತಮ ಚಾಲನಾ ಅನುಭವ ಪ್ರದಾನ ಮಾಡಲಿದೆ. ಹಾಗೆಯೇ ಉತ್ತಮ ಹ್ಯಾಡ್ಲಿಂಗ್‌ಗಾಗಿ ಸಸ್ಪೆಷನ್‌ನಲ್ಲೂ ಬದಲಾವಣೆ ತರಲಾಗಿದೆ.

ಹೊಸ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೊ ಭರ್ಜರಿ ಬಿಡುಗಡೆ

ಹೊಸ ಸ್ಕಾರ್ಪಿಯೊದಲ್ಲಿ ಪರಿಷ್ಕೃತ ಬಂಪರ್, ಹೊಸತಾದ ಗ್ರಿಲ್, ನೂತನ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಜೊತೆ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಸೌಲಭ್ಯವಿರಲಿದೆ.

ಹೊಸ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೊ ಭರ್ಜರಿ ಬಿಡುಗಡೆ

ಹಿಂದುಗಡೆ ಬಂಪರ್‌ನಲ್ಲೂ ಬದಲಾವಣೆ ಕಂಡುಬಂದಿದ್ದು, ಎಲ್‌ಇಡಿ ಟೈಲ್ ಲೈಟ್, ರೂಫ್ ಮೌಂಟೆಡ್ ಸ್ಪಾಯ್ಲರ್, ಫಾಗ್ ಲ್ಯಾಂಪ್ ಮತ್ತು 17 ಇಂಚಿನ ಅಲಾಯ್ ವೀಲ್ ಪಡೆದುಕೊಂಡಿದೆ.

ಹೊಸ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೊ ಭರ್ಜರಿ ಬಿಡುಗಡೆ

ಇನ್ನು ಕಾರಿನೊಳಗಿನ ಬಗ್ಗೆ ಮಾತನಾಡುವುದಾದ್ದಲ್ಲಿ ಎಲ್ಲ ಬಾಗಿಲುಗಳಿಗೂ ಪವರ್ ವಿಂಡೋ ಬಟನ್, ಸಮತಲ ಎಸಿ ವೆಂಟ್ಸ್, ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕ್ಲೈಮೇಟ್ ಕಂಟ್ರೋಲ್ ಮತ್ತು ಹೊಸತ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆಯಿರಲಿದೆ.

ಹೊಸ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೊ ಭರ್ಜರಿ ಬಿಡುಗಡೆ

ಅದೇ ರೀತಿ ಹೊಸ ಸ್ಟೀರಿಂಗ್ ವೀಲ್ ಅನ್ನು ಜನಪ್ರಿಯ ಎಕ್ಸ್‌ಯುವಿ500 ಮಾದರಿಯಿಂದ ಆಮದು ಮಾಡಲಾಗಿದೆ. ಇದರಲ್ಲೇ ನಿಯಂತ್ರಣ ಸೌಲಭ್ಯವಿರಲಿದೆ.

ಹೊಸ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೊ ಭರ್ಜರಿ ಬಿಡುಗಡೆ

2014 ಸ್ಕಾರ್ಪಿಯೊ ಫೇಸ್‌ಲಿಫ್ಟ್ ಏರ್ ಬ್ಯಾಗ್ ಮತ್ತು ಎಬಿಎಸ್ ಸಹ ಪಡೆದುಕೊಳ್ಳಲಿದೆ.

ಹೊಸ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೊ ಭರ್ಜರಿ ಬಿಡುಗಡೆ

ಇನ್ನು ಆಸನ ವ್ಯವಸ್ಥೆಯ ಬಗ್ಗೆ ತಿಳಿಸುವುದಾದ್ದಲ್ಲಿ ವೆರಿಯಂಟ್‌ಗೆ ಅನುಗುಣವಾಗಿ ಏಳರಿಂದ ಒಂಬತ್ತು ಪ್ರಯಾಣಿಕರಿಗೆ ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾದ ಸೌಲಭ್ಯವಿದೆ.

ಹೊಸ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೊ ಭರ್ಜರಿ ಬಿಡುಗಡೆ
  1. ಹೊಸ ಸ್ಕಾರ್ಪಿಯೊ ಹಿಂದಿನ ಮಾದರಿಗೆ ಸಮಾನವಾದ 2.2 ಲೀಟರ್ ಎಂಹಾಕ್ (mHAWK) ಮತ್ತು 2.5 ಲೀಟರ್ ಎಂ2ಡಿಐಸಿಆರ್ (m2DiCr) ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಅನುಕ್ರಮವಾಗಿ 75 (200 ಎನ್‌ಎಂ ಟಾರ್ಕ್) ಹಾಗೂ 120 ಅಶ್ವಶಕ್ತಿ (280 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಹೊಸ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೊ ಭರ್ಜರಿ ಬಿಡುಗಡೆ

ಹೊಸ ಸ್ಕಾರ್ಪಿಯೊ 5.4 ಟರ್ನಿಂಗ್ ರೇಡಿಯಸ್ ಪಡೆದುಕೊಳ್ಳಲಿದ್ದು, ಪ್ರತಿ ಲೀಟರ್‌ಗೆ 15 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಹೊಸ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೊ ಭರ್ಜರಿ ಬಿಡುಗಡೆ

ಒಟ್ಟಿನಲ್ಲಿ ದೀಪಾವಲಿ ಹಬ್ಬದ ಸಂಭ್ರಮವನ್ನು ಎದುರು ನೋಡುತ್ತಿರುವ ಗ್ರಾಹಕರಿಗೆ ದೊಡ್ಡ ಕೊಡುಗೆಯನ್ನೇ ನೀಡಿದೆ. ಅಲ್ಲದೆ ಸ್ಥಳೀಯ ಲಾಂಚ್ ಅಂಗವಾಗಿ ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ಅಧಿಕೃತ ಬಿಡುಗಡೆ ನಡೆಯಲಿದೆ.

ಬಣ್ಣಗಳು

ಬಣ್ಣಗಳು

ಡೈಮಂಡ್ ವೈಟ್

ಮಿಸ್ಟ್ ಸಿಲ್ವರ್

ಫಿಯರಿ ಬ್ಲ್ಯಾಕ್

ಮಾಲ್ಟನ್ ರೆಡ್

ರಾಯಲ್ ಬ್ಲೂ

ಶೈಲಿ

ಶೈಲಿ

ಆಕ್ರಮಣಕಾರಿ ಫ್ರಂಟ್ ಸ್ಟೈಲಿಂಗ್,

ಡ್ಯುಯಲ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಜೊತೆಗೆ ಸ್ಟೈಲಿಷ್ ಎಲ್‌ಇಡಿ ಐಬ್ರೋ,

ಸ್ಟನ್ನಿಂಗ್ ಅಲಾಯ್ ವೀಲ್ಸ್,

ಹೈಟೆಕ್ ಎಲ್‌ಇಡಿ ಟೈಲ್ ಲ್ಯಾಂಪ್,

ಟು ಟೋನ್ ರಿಯರ್ ಅಪ್ಲಿಕ್ಯೂ,

ಸಿಲ್ವರ್ ಫಿನಿಶ್ಡ್ ಫೆಂಡರ್

ಬಿಜೆಲ್ ಆಂಡ್ ಸೈಡ್ ಕ್ಲಾಡಿಂಗ್

ಸ್ವಿಲರ್ ಸ್ಕಾರ್ಪಿಯೊ ಪ್ರದರ್ಶನ

ಇಂಟಿರಿಯರ್

ಇಂಟಿರಿಯರ್

ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್

ಐಷಾರಾಮಿ ಹೊಸತಾದ ಬೂದು ಬಣ್ಣದ ಇಂಟಿರಿಯರ್

ಫ್ಲೂಚರಿಸ್ಟಿಕ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,

ಸ್ಪೋರ್ಟಿ ಸ್ಟೀರಿಂಗ್ ವೀಲ್ ಜೊತೆ ಆಡಿಯೋ ಮತ್ತು ಕ್ರೂಸ್ ಕಂಟ್ರೋಲ್

ತಂತ್ರಜ್ಞಾನ

ತಂತ್ರಜ್ಞಾನ

6 ಇಂಚಿನ ಟಚ್‌ಸ್ಕ್ರೀನ್ ಮಾಹಿತಿ ಮನರಂಜನಾ ಸಿಸ್ಟಂ ಜೊತೆ ಬ್ಲೂಟೂಟ್, ಸಿಡಿ, ಡಿವಿಡಿ, ಯುಎಸ್‌ಬಿ, ಆಕ್ಸ್,

ಚಾಲಕ ಮಾಹಿತಿ ಸಿಸ್ಟಂ,

ಹೊಸ ತಲೆಮಾರಿನ ಗೇರ್ ಬಾಕ್ಸ್,

ಕುಷನ್ ಸಸ್ಪೆಷನ್ ತಂತ್ರಜ್ಞಾನ ಮತ್ತು ಆ್ಯಂಟಿ ರಾಲ್ ತಂತ್ರಜ್ಞಾನ

ಮುಂದುವರಿದ ಸ್ಟಾಟಿಕ್ ಬೆಂಡಿಂಗ್ ತಂತ್ರಜ್ಞಾನ,

ಆರಾಮ ಮತ್ತು ಅನುಕೂಲತೆ

ಆರಾಮ ಮತ್ತು ಅನುಕೂಲತೆ

ಸಂಪೂರ್ಣ ಆಟೋಮ್ಯಾಟಿಕ್ ತಾಪಮಾನ ನಿಯಂತ್ರಣ,

ಕಡಿಮೆ ಟರ್ನಿಂಗ್ ರೇಡಿಯಸ್,

ಚಾಲಕ ಬದಿಯ ಡೋರ್‌ನಲ್ಲಿ ಪವರ್ ವಿಂಡೋ ಸ್ವಿಚ್,

ಹಿಂದುಗಡೆಯೂ ಎತ್ತರ ಹೊಂದಾಣಿಸಬಹುದು.

ಆಯಾಮ

ಆಯಾಮ

ವೀಲ್ ಬೇಸ್ - 2680 ಎಂಎಂ

ಒಟ್ಟು ಅಗಲ - 1820 ಎಂಎಂ

ಒಟ್ಟು ಉದ್ದ - 4456 ಎಂಎಂ

ಒಟ್ಟು ಎತ್ತರ - 1930 ಎಂಎಂ


More from DriveSpark

Article Published On: Thursday, September 25, 2014, 14:55 [IST]
English summary
Mahindra and Mahindra company has launched the much-awaited new Scorpio SUV in India starting at Rs 7.98 lakh (ex-showroom, Mumbai).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+