ಮಾರುತಿ ನ್ಯೂ ಇಯರ್ ಧಮಾಕಾ; ವ್ಯಾಗನಾರ್ ಲಾಂಚ್

ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ಜನಪ್ರಿಯ ವ್ಯಾಗನಾರ್ ಆವೃತ್ತಿಯ ಅಪ್‌ಗ್ರೇಡ್ ವರ್ಷನ್ ಬಿಡುಗಡೆಗೊಳಿಸಿದೆ.

ಮಾರುತಿ ಸುಜುಕಿ ವ್ಯಾಗನಾರ್ ಫೇಸ್‌ಲಿಫ್ಟ್ ವರ್ಷನ್ 3.58 ಲಕ್ಷದಿಂದ ಆರಂಭವಾಗಿ 4.13 ಲಕ್ಷದ ವರೆಗಿನ ರೇಂಜ್‌ನಲ್ಲಿ ಲಭ್ಯವಿರಲಿದೆ. ಆದರೆ ವ್ಯಾಗನಾರ್ ಸಿಎನ್‌ಜಿ ಆವೃತ್ತಿ 4.42 ಲಕ್ಷ ರುಪಾಯಿಗಳ ವರೆಗೂ ದುಬಾರಿಯೆನಿಸಲಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ವ್ಯಾಗನಾರ್ ಎಲ್‌ಎಕ್ಸ್- 3.58 ಲಕ್ಷ ರು.
  • ವ್ಯಾಗನಾರ್ ಎಲ್‌ಎಕ್ಸ್‌ಐ- 3.88 ಲಕ್ಷ ರು.
  • ವ್ಯಾಗನಾರ್ ಎಲ್‌ಎಕ್ಸ್‌ಐ (ಸಿಎನ್‌ಜಿ): 4.42 ಲಕ್ಷ ರು.
  • ವ್ಯಾಗನಾರ್ ವಿಎಕ್ಸ್‌ಐ- 4.13 ಲಕ್ಷ ರು.

ಸುಧಾರಿತ ಇಂಧನ ದಕ್ಷತೆ ಪರಿಷ್ಕೃತ ಆವೃತ್ತಿಯ ಪ್ರಮುಖ ಫೀಚರ್ ಆಗಿದೆ. ಇದರ ಜತೆ ಸುಧಾರಿತ ಇಂಟಿರಿಯರ್ ಫಿನಿಶ್ ಸೇರಿದಂತೆ ಎಕ್ಸ್‌ಟೀರಿಯರ್ ವಿನ್ಯಾಸದಲ್ಲೂ ಬದಲಾವಣೆ ತರಲಾಗಿದೆ.

ಉತ್ತಮ ನಿರ್ವಹಣೆ, ಹ್ಯಾಂಡ್ಲಿಂಗ್ ಹಾಗೂ ಇಂಧನ ದಕ್ಷತೆಗಾಗಿ ಹೆಸರು ವಾಸಿಯಾಗಿರುವ ಮಾರುತಿ ಸುಜುಕಿ ವ್ಯಾಗನಾರ್ ಕಳೆದ ವರ್ಷ ಟಾಪ್ 5 ಕಾರುಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದವು. ಈ ಪೈಕಿ 2012ನೇ ಸಾಲಿನಲ್ಲಿ ನಂ.4 ಸ್ಥಾನ ಪಡೆದುಕೊಂಡಿತ್ತು.

ಪ್ರಮುಖ ಫೀಚರ್

  • ಸುಧಾರಿತ ಇಂಧನ ದಕ್ಷತೆ (8%)
  • ಮೈಲೇಜ್ 20.51 kmpl
  • ಸುಧಾರಿತ ಎಕ್ಸ್‌ಟೀರಿಯರ್
  • ಒಬಿಡಿ-II complaint
  • 2 ಹೊಸ ಕಲರ್ ವೆರಿಯಂಟ್
  • ನ್ಯೂ ಡ್ಯುಯಲ್ ಟೋನ್ ಇಂಟಿರಿಯರ್

ಇನ್ನು ವ್ಯಾಗನಾರ್ ಇತಿಹಾಸ ಗಮನಿಸಿದರೆ 1993ನೇ ಇಸವಿಯಲ್ಲಿ ವ್ಯಾಗನಾರ್ ಅನ್ನು ಮೊದಲ ಬಾರಿಗೆ ಜಪಾನ್ ಮೂಲದ ಸುಜುಕಿ ಕಂಪನಿ ಪರಿಚಯಿಸಿತ್ತು. ಆ ಬಳಿಕ 1999ರಲ್ಲಿ ಸುಜುಕಿ ಪಾಲುದಾರಿಕೆ ಹೊಂದಿರುವ ಮಾರುತಿ ದೇಶದಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಿತ್ತು.

ವ್ಯಾಗನಾರ್ ಲಾಂಚ್ ಆದ ಬಳಿಕ ಒಟ್ಟು ಮೂರು ಬಾರಿ ಅಪ್‌ಗ್ರೇಡ್ ವರ್ಷನ್ ಬಿಡುಗಡೆಯಾಗಿವೆ. ಅವುಗಳೆಂದರೆ 2003, 2006 ಹಾಗೂ 2010ರಲ್ಲಿ. ಇದೀಗ ಬಂದಿರುವುದು ನಾಲ್ಕನೇ ಅಪ್‌ಗ್ರೇಡ್ ವರ್ಷನ್.

ನ್ಯೂ ವ್ಯಾಗನಾರ್ 2013

ನ್ಯೂ ವ್ಯಾಗನಾರ್ 2013

ಮಾರುತಿ ಸುಜುಕಿ ಪರಿಷ್ಕೃತ ಆವೃತ್ತಿಯು ಗ್ರಾಹಕರ ಮನಗೆಲ್ಲುವ ಭರವಸೆಯನ್ನು ಮಾರುತಿ ಸುಜುಕಿ ಹೊಂದಿದೆ. ಹೊಸ ವ್ಯಾಗನಾರ್‌ನಲ್ಲಿ ಶೇಕಡಾ 8ರಷ್ಟು ಇಂಧನ ದಕ್ಷತೆ ಹೆಚ್ಚು ಹೊಂದಿರಲಿದೆ. ಹೊಸ ಕೆ-10 ಎಂಜಿನ್ ಪ್ರತಿ ಲೀಟರ್‌ಗೆ 20.51 ಕೀ. ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ನ್ಯೂ ವ್ಯಾಗನಾರ್ 2013

ನ್ಯೂ ವ್ಯಾಗನಾರ್ 2013

ತಾಜಾ ಎಕ್ಸ್‌ಟೀರಿಯರ್ ಭಾಗಗಳು ನೂತನ ವ್ಯಾಗನಾರ್ ಕಾರನ್ನು ವಿಶೇಷವಾಗಿಸಿದೆ. ನೂತನ ಸ್ಪೋರ್ಟಿ ಫಾಗ್ ಲ್ಯಾಂಪ್ ಕಾರಿಗೆ ವೈವಿಧ್ಯ ಲುಕ್ ನೀಡುತ್ತದೆ.

ನ್ಯೂ ವ್ಯಾಗನಾರ್ 2013

ನ್ಯೂ ವ್ಯಾಗನಾರ್ 2013

ಡ್ಯುಯಲ್ ಟೋನ್ ಇಂಟಿರಿಯರ್ ಕಲರ್ ಸ್ಕೀಮ್ (beige & black) ವ್ಯಾಗನಾರ್ ಅಂದತೆಗೆ ಕಾರಣವಾಗಿದೆ. ವಿಎಕ್ಸ್‌ಐ ಆವೃತ್ತಿ beige ಸೀಟ್ ಹೊಂದಿದ್ದರೆ ಎಲ್‌ಎಕ್ಸ್ ಹಾಗೂ ಎಲ್‌ಎಕ್ಸ್‌ಐ ಆವೃತ್ತಿಗಳು beige ಹಾಗೂ black ಕಲರ್ ವೆರಿಯಂಟ್ ಹೊಂದಿರಲಿದೆ.

ನ್ಯೂ ವ್ಯಾಗನಾರ್ 2013

ನ್ಯೂ ವ್ಯಾಗನಾರ್ 2013

ನೂತನ ವ್ಯಾಗನಾರ್‌ನಲ್ಲಿ ಸ್ಟೋರೇಜ್ ಸ್ಪೇಸ್ ಕೂಡಾ ಹೆಚ್ಚು ಕೊಡಲಾಗಿದೆ. ಹಾಗೆಯೇ ರಾತ್ರಿ ಪಯಣವನ್ನು ಪರಿಗಣಿಸಿ ಡೇ-ನೈಟ್ ರಿಯರ್ ವ್ಯೂ ಮಿರರ್ ಸೌಲಭ್ಯವಿದೆ.

ನ್ಯೂ ವ್ಯಾಗನಾರ್ 2013

ನ್ಯೂ ವ್ಯಾಗನಾರ್ 2013

ಪ್ರಮುಖವಾಗಿಯೂ ಹೊಂಡಾ ಬ್ರಿಯೊ, ಹ್ಯುಂಡೈ ಐ10 ಹಾಗೂ ಷೆವರ್ಲೆ ಬೀಟ್‌ಗೆ ಪ್ರತಿಸ್ಪರ್ಧಿಯಾಗಲಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ವೆರಿಯಂಟ್‌ಗಳಲ್ಲಿ ಮಾರುತಿ ವ್ಯಾಗಲಾರ್ ಲಭ್ಯವಿರಲಿದೆ. ಆದರೆ ಎಲ್‌ಪಿಜಿ ವೆರಿಯಂಟ್ ಬಗ್ಗೆ ಮಾಹಿತಿ ಬಂದಿಲ್ಲ.

ನ್ಯೂ ವ್ಯಾಗನಾರ್ 2013

ನ್ಯೂ ವ್ಯಾಗನಾರ್ 2013

ನೂತನ ವ್ಯಾಗನಾರ್ ಅದೇ ಎಂಜಿನ್ ಹೊಂದಿದ್ದರೂ ಕಾಸ್ಮೆಟಿಕ್ ಬದಲಾವಣೆ ಪಡೆದುಕೊಳ್ಳಲಿದೆ. ಇದರ ಕೆ10ಬಿ ಪೆಟ್ರೋಲ್ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದ್ದು, ಇದು 68 ಪಿಎಸ್ ಹಾಗೂ 90 ಎನ್‌ಎಂ ಉತ್ಪಾದಿಸಲಿದೆ.

ನ್ಯೂ ವ್ಯಾಗನಾರ್ 2013

ನ್ಯೂ ವ್ಯಾಗನಾರ್ 2013

ನೂತನ ಮಾರುತಿ ಸುಜುಕಿ ವ್ಯಾಗನಾರ್ 2013 ವರ್ಷನ್ ಒಟ್ಟು ನಾಲ್ಕು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಮೂರು ಪೆಟ್ರೋಲ್ ಹಾಗೂ ಒಂದು ಸಿಎನ್‌ಜಿ ಆವೃತ್ತಿ.

More from DriveSpark

Article Published On: Tuesday, January 15, 2013, 14:52 [IST]
English summary
Maruti Suzuki has launched the all new Wagon R priced at INR 3.58 lakhs. The new Wagon R delivers a higher mileage which has improved by an impressive 8%. Maruti Suzuki has also made some changes to the exterior design and has also improved the interior finish
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+