ನಿಸ್ಸಾನ್‌ನಿಂದ ಮೈಕ್ರಾ ಫೇಸ್‌ಲಿಫ್ಟ್, ಆಕ್ಟಿವ್ ಲಾಂಚ್

By Nagaraja

ಜಪಾನ್ ಮೂಲದ ಕಾರು ತಯಾರಕ ಸಂಸ್ಥೆ ನಿಸ್ಸಾನ್, ಭಾರತಕ್ಕೆ ಮೈಕ್ರಾ ಹ್ಯಾಚ್‌ಬ್ಯಾಕ್ ಕಾರಿನ ಫೇಸ್‌ಲಿಫ್ಟ್ ವರ್ಷನ್ ಪರಿಚಯಿಸಿದೆ. ನೂತನ ಆವೃತ್ತಿಯು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಜತೆ ಹೊಸತಾದ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕೂಡಾ ಪಡೆದುಕೊಂಡಿದೆ.

ಇದೇ ಸಂದರ್ಭದಲ್ಲಿ 'ಮೈಕ್ರಾ ಆಕ್ಟಿವ್' ಎಂಬ ಕಡಿಮೆ ದರದ ಕಾರನ್ನು ಸಹ ನಿಸ್ಸಾನ್ ಬಿಡುಗಡೆಗೊಳಿಸಿದೆ. ನೂತನ ಮೈಕ್ರಾ ಆಕ್ಟಿವ್ ದೆಹಲಿ ಎಕ್ಸ್ ಶೋ ರೂಂ ದರ 3.5 ಲಕ್ಷ ರು.ಗಳಾಗಿವೆ. ಇದು ಹೋಂಡಾ ಬ್ರಿಯೊ ಹಾಗೂ ಮಾರುತಿ ಸುಜುಕಿ ಆಲ್ಟೊ ಆವೃತ್ತಿಗಳಿಗೆ ಪೈಪೋಟಿ ಒಡ್ಡಲಿದೆ.

ನೂತನ 2013 ನಿಸ್ಸಾನ್ ಮೈಕ್ರಾದಲ್ಲಿ ಹೆಚ್ಚಿನ ಆಕ್ರಮಣಕಾರಿ ವಿನ್ಯಾಸಕ್ಕೆ ಕಂಪನಿ ಮಹತ್ವ ನೀಡಿದೆ. ಇದರ ಫಲವಾಗಿ ಮುಂಭಾಗದಲ್ಲಿ ಫ್ರಂಟ್ ಬಂಪರ್ ಹೈಲೆಟ್ ಆಗಲಿದ್ದು, ಹೆಡ್ ಲೈಟ್ ಸ್ವಲ್ಪ ಬದಿಗೆ ಸರಿಸಲ್ಪಟ್ಟಿದೆ. ಹೊಸ ಹೆಡ್‌ಲೈಟ್ ಶೈಲಿಯಿಂದಾಗಿ ಬೊನೆಟ್ ಹಾಗೂ ಫ್ರಂಟ್ ಫೆಂಡರ್‌ನಲ್ಲೂ ಬದಲಾವಣೆ ಕಂಡುಬಂದಿದೆ.

ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್

ಇನ್ನು ಹಿಂದುಗಡೆ ಎಲ್‌ಇಡಿ ಟೈಲ್ ಲ್ಯಾಂಪ್, ಹೊಸ ಬಂಪರ್ ಹಾಗೂ ನೂತನ ಅಲಾಯ್ ವೀಲ್ ಪಡೆದುಕೊಂಡಿದೆ. ಅದೇ ರೀತಿ ಒಳಗಡೆ ಸೀಟ್‌ಗಳಿಗೆ ಹೆಚ್ಚಿನ ಸಹಾಯ ಮಾಡಲಾಗಿದೆ. ಕೀಲೆಸ್ ಎಂಟ್ರಿ ಆಂಡ್ ಗೊ, ಕ್ಲೈಮೇಟ್ ಕಂಟ್ರೋಲ್, ಬ್ಲೂಟೂತ್ ಕನೆಕ್ಟಿವಿಟಿ, ಯುಎಸ್‌ಬಿ ಹಾಗೂ ರಿವರ್ಸ್ ಕ್ಯಾಮೆರಾ ಸೌಲಭ್ಯ ಕೂಡಾ ಲಭ್ಯವಿರುತ್ತದೆ.

1.2 ಲೀಟರ್ ಪೆಟ್ರೋಲ್ ಮೋಟಾರ್‌ನಲ್ಲಿ ಮಾತ್ರ ಸಿವಿಟಿ ಬಾಕ್ಸ್ ಲಭ್ಯವಿರುತ್ತದೆ. ಅಂದರೆ ಪ್ರತಿ ಲೀಟರ್‌ಗೆ 19.34 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಸಿವಿಟಿ ಹೊರತಾಗಿ ಫೈವ್ ಸ್ಪೀಡ್ ಮ್ಯಾನುವಲ್‌ನಲ್ಲಿ ಇಂಧನ ದಕ್ಷತೆಯು ಪ್ರತಿ ಲೀಟರ್‌ಗೆ 18.44 ಕೀ.ಮೀ. ಆಗಿದೆ. ಅದೇ ಹೊತ್ತಿಗೆ 1.5 ಲೀಟರ್ ಡೀಸೆಲ್ ಎಂಜಿನ್ ಪ್ರತಿ ಲೀಟರ್‌ಗೆ ಗರಿಷ್ಠ 23.08 ಕೀ.ಮೀ. ಮೈಲೇಜ್ ನೀಡಲಿದೆ.

ನಿಸ್ಸಾನ್ ಮೈಕ್ರಾ ಡೀಸೆರ್ ದರ ಮಾಹಿತಿ

ನಿಸ್ಸಾನ್ ಮೈಕ್ರಾ ಡೀಸೆರ್ ದರ ಮಾಹಿತಿ

ಮೈಕ್ರಾ ಎಕ್ಸ್‌ಎಲ್- 6 ಲಕ್ಷ ರು.

ಮೈಕ್ರಾ ಎಕ್ಸ್‌ಎಲ್ (ಒ)- 6.43 ಲಕ್ಷ ರು.

ಮೈಕ್ರಾ ಎಕ್ಸ್‌ವಿ- 6.90 ಲಕ್ಷ ರು.

ಮೈಕ್ರಾ ಎಕ್ಸ್‌ವಿ ಪ್ರೀಮಿಯಂ- 7.14 ಲಕ್ಷ ರು.

ನಿಸ್ಸಾನ್ ಮೈಕ್ರಾ ಪೆಟ್ರೋಲ್ ದರ ಮಾಹಿತಿ

ನಿಸ್ಸಾನ್ ಮೈಕ್ರಾ ಪೆಟ್ರೋಲ್ ದರ ಮಾಹಿತಿ

ಮೈಕ್ರಾ ಎಕ್ಸ್‌ಎಲ್- 4.80 ಲಕ್ಷ ರು.

ಮೈಕ್ರಾ ಎಕ್ಸ್‌ಎಲ್ (ಒ)- 5.43 ಲಕ್ಷ ರು.

ಮೈಕ್ರಾ ಎಕ್ಸ್‌ವಿ ಸಿವಿಟಿ- 6.39 ಲಕ್ಷ ರು.

ನಿಸ್ಸಾನ್ ಮೈಕ್ರಾ ಆಕ್ಟಿವ್

ಮತ್ತೊಂದೆಡೆ ಕಡಿಮೆ ದರದ ಮೈಕ್ರಾ ಆಕ್ಟಿವ್ ಕಾರನ್ನು ಸಹ ನಿಸ್ಸಾನ್ ಲಾಂಚ್ ಮಾಡಿದೆ. ಇದರ 1.2 ಲೀಟರ್ ಪೆಟ್ರೋಲ್ ಮೋಟಾರ್ ಎಂಜಿನ್ ಪ್ರತಿ ಲೀಟರ್‌ಗೆ 19.49 ಕೀ.ಮೀ ಮೈಲೇಜ್ ನೀಡಲಿದೆ.

Nissan Launched Micra Active & Micra facelift

ಇದು ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಅವುಗಳೆಂದರೆ ಎಕ್ಸ್‌ಇ, ಎಕ್ಸ್‌ಎಲ್ ಹಾಗೂ ಎಕ್ಸ್‌ಎಲ್ (ಸೇಫ್ಟಿ).

ನಿಸ್ಸಾನ್ ಮೈಕ್ರಾ ಆಕ್ಟಿವ್ ದರ ಮಾಹಿತಿ

ನಿಸ್ಸಾನ್ ಮೈಕ್ರಾ ಆಕ್ಟಿವ್ ದರ ಮಾಹಿತಿ

ಎಕ್ಸ್‌ಇ: 3.5 ಲಕ್ಷ ರು.

ಎಕ್ಸ್‌ಎಲ್: 4.01 ಲಕ್ಷ ರು.

ಎಕ್ಸ್‌ವಿ: 4.3 ಲಕ್ಷ ರು.

ಎಕ್ಸ್‌ವಿ (ಸೇಫ್ಟಿ): 4.71 ಲಕ್ಷ ರು.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಡ್ಯುಯಲ್ ಏರ್ ಬ್ಯಾಗ್

ಸೆಂಟ್ರಲ್ ಲಾಕಿಂಗ್ ಹಾಗೂ ಇಬಿಡಿ

Nissan Launched Micra Active & Micra facelift

ಹಾಗೆಯೇ ಆರು ಕಲರ್ ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ.

Turquoise Blue,

Blade Silver,

Storm White,

Onyx Black,

Aqua Green

Brick Red

Nissan Launched Micra Active & Micra facelift

ಮಾರುತಿಯ ಅತ್ಯಂತ ಜನಪ್ರಿಯ ಆಲ್ಟೊಗೆ ಹೋಲಿಸಿದಾಗ ನಿಸ್ಸಾನ್ ದರ ಸ್ವಲ್ಪ ದುಬಾರಿಯಾಗಿ ಕಾಣಿಸಿದ್ದರೂ ಮುಂದಿನ ದಿನಗಳಲ್ಲಿ ಈ ನಂಬರ್ ವನ್ ಕಾರು ತಯಾರಕ ಕಂಪನಿಗೆ ಕಠಿಣ ಸ್ಪರ್ಧೆ ಒಡ್ಡಲಿದೆ.

More from DriveSpark

Article Published On: Wednesday, July 3, 2013, 14:46 [IST]
English summary
Nissan has launched a facelifted version of its Micra hatchback today. In addition to the facelift, the Japanese carmaker has also launched the low-cost variant of the Micra called as Micra Active. The Micra Active is priced at Rs 3.5 lakh (ex-showroom, Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+