ನಿಸ್ಸಾನ್ ಟೆರನೊ ವಾರ್ಷಿಕ ಆವೃತ್ತಿ ಬಿಡುಗಡೆ

By Nagaraja

ಜಪಾನ್ ಮೂಲದ ದೈತ್ಯ ವಾಹನ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್ ಇಂಡಿಯಾ, ಯಾವುದೇ ಸದ್ದಿಲ್ಲದೆ ಜನಪ್ರಿಯ ಟೆರನೊ ವಾರ್ಷಿಕ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಬಗೆಗಿನ ಮಾಹಿತಿಯನ್ನು ಸಂಸ್ಥೆಯ ಅಧಿಕೃತ ವೆಬ್ ತಾಣದಲ್ಲಿ ಕೊಡಲಾಗಿದೆ.

ಟೆರೆನೊ ವಾರ್ಷಿಕ ಎಡಿಷನ್ ಮೂಲಕ ಹೆಚ್ಚಿನ ಮಾರಾಟವನ್ನು ನಿಸ್ಸಾನ್ ಸಂಸ್ಥೆ ಗುರಿಯಿರಿಸಿಕೊಂಡಿದೆ. ಈ ಬಾರಿಯ ದೀಪಾವಳಿ ಹಬ್ಬದ ಆವೃತ್ತಿಯ ವೇಳೆಯಲ್ಲಿ ಪ್ರೀಮಿಯಂ ಕಾರು ಬಯಸುವ ಗ್ರಾಹಕರಿಗೆ ಟೆರನೊ ಉತ್ತಮ ಆಯ್ಕೆಯನ್ನು ಮುಂದಿಡಲಿದೆ.

ನಿಸ್ಸಾನ್ ಟೆರನೊ ವಾರ್ಷಿಕ ಆವೃತ್ತಿ

ನಿಸ್ಸಾನ್ ಟೆರನೊ ವಾರ್ಷಿಕ ಆವೃತ್ತಿಯು ಸೀಮಿತ 500 ಯುನಿಟ್‌ಗಳಷ್ಟು ಮಾತ್ರ ಲಭ್ಯವಿರಲಿದೆ. ವಿಶೇಷವೆಂದರೆ ನೀವು ಡೀಲರ್‌ಗಳ ಬಳಿ ತೆರಳಿದರೂ ನಿಸ್ಸಾನ್ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಆರ್ಡರ್ ಮಾಡುವ ಅವಕಾಶವಿರುತ್ತದೆ.

ನಿಸ್ಸಾನ್ ಟೆರನೊ ವಾರ್ಷಿಕ ಆವೃತ್ತಿ

ಒಟ್ಟು ಎರಡು ವೆರಿಯಂಟ್‌ಗಳಲ್ಲಿ ನಿಸ್ಸಾನ್ ಟೆರನೊ ವಾರ್ಷಿಕ ಆವೃತ್ತಿಯು ಲಭ್ಯವಿರಲಿದೆ. ಇವೆರಡು ಡೀಸೆಲ್‌ ಎಂಜಿನ್ ಪಡೆದುಕೊಳ್ಳಲಿದ್ದು, ಎಕ್ಸ್‌ವಿಡಿ ಟಿಎಚ್‌ಪಿ (110 ಪಿಎಸ್) ಮತ್ತು ಎಕ್ಸ್‌ವಿಡಿ ಟಿಎಚ್‌ಪಿ ಪ್ರೀಮಿಯಂ (110 ಪಿಎಸ್) ಎಂದು ಹೆಸರಿಸಿಕೊಳ್ಳಲಿದೆ.

ನಿಸ್ಸಾನ್ ಟೆರನೊ ವಾರ್ಷಿಕ ಆವೃತ್ತಿ

ಅಂತೆಯೇ ಐದು ಹೊಸ ಬಣ್ಣಗಳ ಆಯ್ಕೆಗಳಲ್ಲಿ ಹೊಸ ಟೆರನೊ ಲಭ್ಯವಿರಲಿದೆ. ಅವುಗಳೆಂದರೆ ಬೆಳ್ಳಿ ಬೂದು, ಬ್ಲೇಡ್ ಸಿಲ್ವರ್, ಫೈರ್ ರೆಡ್, ಸ್ಟೈರ್ಲಿಂಗ್ ಗ್ರೇ, ಸ್ಟ್ರೋಮ್ ವೈಟ್ ಮತ್ತು ಪಿಯರ್ಲ್ ವೈಟ್.

ನಿಸ್ಸಾನ್ ಟೆರನೊ ವಾರ್ಷಿಕ ಆವೃತ್ತಿ

ಕಾರಿನ ಹೊರಗಡೆ ಕಪ್ಪು ಬಣ್ಣದ ಛಾವಣಿ ಜೊತೆಗೆ ಬೊನೆಟ್ ಸ್ಟ್ರಿಪ್, ವಿಂಗ್ ಮಿರರ್ ಕವರ್, ರಿಯರ್ ಸ್ಪಾಯ್ಲರ್ ಮತ್ತು ವಾರ್ಷಿಕ ಎಡಿಷನ್ ಬ್ಯಾಡ್ಜ್ ಇರಲಿದೆ.

ನಿಸ್ಸಾನ್ ಟೆರನೊ ವಾರ್ಷಿಕ ಆವೃತ್ತಿ

ನಿಸ್ಸಾನ್ ಟೆರನೊ ಎಕ್ಸ್‌ವಿ ಡಿ ಟಿಎಚ್‌ಪಿ ವಾರ್ಷಿಕ ಆವೃತ್ತಿಯು ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಚಾಲಕ ಬದಿಯ ಎತ್ತರ ಹೊಂದಾಣಿಸಬಹುದಾದ ಸೀಟು, ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್ ಮತ್ತು ಗೇರ್ ಶಿಫ್ಟ್ ನಾಬ್ ಪಡೆದುಕೊಳ್ಳಲಿದೆ. ಇನ್ನು ಪ್ರೀಮಿಯಂ ವೆರಿಯಂಟ್ ಲೆಥರ್ ಸೀಟು ಜೊತೆಗೆ ಮುಂದೆ ಹಾಗೂ ಹಿಂದುಗಡೆ 'ಜಿಬ್ರಾ ಹುಡ್' ಫಿನಿಶ್ ಆರ್ಮ್ ರೆಸ್ಟ್ ಪಡೆದುಕೊಳ್ಳಲಿದೆ.

ನಿಸ್ಸಾನ್ ಟೆರನೊ ವಾರ್ಷಿಕ ಆವೃತ್ತಿ

ಅಂದ ಹಾಗೆ ನಿಸ್ಸಾನ್ ಟೆರನೊ ಎಕ್ಸ್‌ವಿಡಿ ಟಿಎಚ್‌ಪಿ ಮತ್ತು ಎಕ್ಸ್‌ವಿಡಿ ಟಿಎಚ್‌ಪಿ ಪ್ರೀಮಿಯಂ ವೆರಿಯಂಟ್‌ಗಳು ಅನುಕ್ರಮವಾಗಿ 12.83 ಹಾಗೂ 13.13 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ನವದೆಹಲಿ) ದುಬಾರಿಯೆನಿಸಲಿದೆ.

More from DriveSpark

Article Published On: Thursday, October 9, 2014, 17:14 [IST]
English summary
Nissan India has silently launched the Terrano Anniversary Edition
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+