ಬೆಂಗ್ಳೂರು ರಸ್ತೆಗಿಳಿದ ನಿಸ್ಸಾನ್ ಅಗ್ಗದ ಕಾರು ಮೈಕ್ರಾ ಆಕ್ಟಿವ್

ಕಳೆದ ದಿನ ನಿಸ್ಸಾನ್ ಮೈಕ್ರಾ ಲಾಂಚ್ ಆಗಿರುವುದರ ಬಗ್ಗೆ ನಾವು ಸುದ್ದಿಯೊಂದನ್ನು ಪ್ರಕಟಿಸಿದ್ದೆವು. (ಇಲ್ಲಿದೆ ಓದಿ ನೋಡಿ) ಇದೇ ಸಂದರ್ಭದಲ್ಲಿ ಜಪಾನ್ ಮೂಲದ ಕಾರು ಕಂಪನಿಯಾದ ನಿಸ್ಸಾನ್, ಭಾರತಕ್ಕೆ ಮತ್ತೊಂದು ಅಗ್ಗದ ಕಾರೊಂದನ್ನು ಪರಿಚಯಿಸಿದೆ. ಅದುವೇ ನಿಸ್ಸಾನ್ ಮೈಕ್ರಾ ಆಕ್ಟಿವ್

ಹೆಚ್ಚಿನ ಸ್ಥಳಾವಕಾಶದೊಂದಿಗೆ ಪರಿಪೂರ್ಣ ಹ್ಯಾಚ್‌ಬ್ಯಾಕ್ ಎನಿಸಿಕೊಂಡಿರುವ ನಿಸ್ಸಾನ್ ಮೈಕ್ರಾ ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗಿದೆ. ಇದರ ಸ್ಪೋರ್ಟಿ ಎಕ್ಸ್‌ಟೀರಿಯರ್ ಭಾಗಗಳು ಪ್ರಮುಖ ಆಕರ್ಷಣೆಯಾಗಿರಲಿದೆ. ಐದು ಜನರಿಗೆ ಕುಳಿತುಕೊಳ್ಳುವ ಆರಾಮದಾಯಕ ಸಿಟ್ಟಿಂಗ್ ವ್ಯವಸ್ಥೆ ಇದರಲ್ಲಿ ಆಳವಡಿಸಲಾಗಿದ್ದು, ಸಣ್ಣ ಕುಟುಂಬಗಳ ಫೇವರಿಟ್ ಕಾರೆನಿಸಲಿದೆ.

ನಿಸ್ಸಾನ್ ಅಗ್ಗದ ಕಾರು ಮೈಕ್ರಾ ಆಕ್ಟಿವ್

ಉತ್ತಮ ಗುಣಮಟ್ಟ, ಇಂಧನ ಕ್ಷಮತೆ ಹಾಗೂ ವಿಶಾಲವಾದ ಇಂಟಿರಿಯರ್ ಭಾಗಗಳಿಗೆ ಒತ್ತು ಕೊಡಲಾಗಿದೆ. ನಿರ್ವಹಣಾ ವೆಚ್ಚ ಕಡಿಮೆಯಾಗಿರುವುದು ಸಹ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ನೆರವಾಗಲಿದೆ.

ನಿಸ್ಸಾನ್ ಅಗ್ಗದ ಕಾರು ಮೈಕ್ರಾ ಆಕ್ಟಿವ್

ನೂತನ ಮೈಕ್ರಾ ಆಕ್ಟಿವ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಹಾಗೆಯೇ ಪ್ರತಿ ಲೀಟರ್‌ಗೆ 19.49 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಒಟ್ಟಾರೆಯಾಗಿ 30ಕೆ.ಜಿಗಳಷ್ಟು ಭಾರ ಕಡಿಮೆ ಮಾಡಿರುವುದು ಹೆಚ್ಚು ಮೈಲೇಜ್ ನೀಡಲು ನೆರವಾಗಿದೆ.

ನಿಸ್ಸಾನ್ ಅಗ್ಗದ ಕಾರು ಮೈಕ್ರಾ ಆಕ್ಟಿವ್

ಒಟ್ಟು ನಾಲ್ಕು ವೆರಿಯಂಟ್‌ಗಳಲ್ಲಿ ಮೈಕ್ರಾ ಆಕ್ಟಿವ್ ಲಭ್ಯವಾಗಲಿದೆ. ಇದು ಎಕ್ಸ್‌ಇ, ಎಕ್ಸ್‌ಎಲ್, ಎಕ್ಸ್‌ವಿ ಹಾಗೂ ಎಕ್ಸ್‌ವಿ ಸೇಫ್ಟಿ ಪ್ಯಾಕ್‌ಗಳಲ್ಲಿ ಆಗಮನವಾಗಿದೆ. ಈ ಪೈಕಿ ಟಾಪ್ ಎಂಡ್ ಎಕ್ಸ್‌ವಿ ವೆರಿಯಂಟ್ ಡ್ಯುಯಲ್ ಏರ್ ಬ್ಯಾಗ್, ಎಬಿಎಸ್, ಇಬಿಡಿ, ಬಿಎ, ಇಮೊಬಿಲೈಜರ್, ಸ್ಪೀಡನ್ ಸೆನ್ಸಿಂಗ್ ಡೋರ್ ಲಾಕ್, ಸೆಂಟ್ರಲ್ ಲಾಂಕಿಂಗ್ ಸಿಸ್ಟಂ ಹೊಂದಿರಲಿದೆ.

ಆರು ಕಲರ್ ವೆರಿಯಂಟ್

ಆರು ಕಲರ್ ವೆರಿಯಂಟ್

Turquoise Blue (new),

Blade Silver,

Storm White,

Onyx Black,

Aqua Green

Brick Red.

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಮೈಕ್ರಾ ಆಕ್ಟಿವ್ ಎಕ್ಸ್‌ಇ- 3.56 ಲಕ್ಷ ರು.

ಮೈಕ್ರಾ ಆಕ್ಟಿವ್ ಎಕ್ಸ್‌ಎಲ್- 4.08 ಲಕ್ಷ ರು.

ಮೈಕ್ರಾ ಆಕ್ಟಿವ್ ಎಕ್ಸ್‌ವಿ- 4.47 ಲಕ್ಷ ರು.

ಮೈಕ್ರಾ ಆಕ್ಟಿವ್ ಎಕ್ಸ್‌ವಿ ಸೇಫ್ಟಿ- 4.79 ಲಕ್ಷ ರು.

ನಿಸ್ಸಾನ್ ಅಗ್ಗದ ಕಾರು ಮೈಕ್ರಾ ಆಕ್ಟಿವ್

ನಿಸ್ಸಾನ್ ಮೈಕ್ರಾಗೆ ಎರಡು ವರ್ಷಗಳ ಅಥವಾ 50,000 ಕೀ.ಮೀ. ವಾರಂಟಿ ಲಭ್ಯವಿರುತ್ತದೆ. ಗ್ರಾಹಕರಿಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು 'ನಿಸ್ಸಾನ್ ಕೇರ್' ಗ್ರಾಹಕ ಸಂಪರ್ಕ ಕೇಂದ್ರ ತೆರೆಯಲಾಗಿದೆ.

ನಿಸ್ಸಾನ್ ಅಗ್ಗದ ಕಾರು ಮೈಕ್ರಾ ಆಕ್ಟಿವ್

ಪ್ರಸಕ್ತ ಸಾಲಿನಲ್ಲಿ ಒಂದು ಲಕ್ಷದಷ್ಟು ನಿಸ್ಸಾನ್ ಕಾರುಗಳನ್ನು ಮಾರಾಟ ಮಾಡುವುದು ನಿಸ್ಸಾನ್ ಗುರಿಯಾಗಿದೆ. ಈ ನಿಟ್ಟಿನಲ್ಲಿ ತ್ವರಿತ ಗತಿಯಲ್ಲಿ ದೇಶದ್ಯಾಂತ ಡೀಲರುಗಳ ಸಂಖ್ಯೆ ವೃದ್ಧಿಸಲು ನಿಸ್ಸಾನ್ ಕಾರ್ಯ ಮಗ್ನವಾಗಿದೆ.

More from DriveSpark

Article Published On: Wednesday, July 10, 2013, 11:09 [IST]
English summary
Nissan micra active enters Bangalore, which is a spacious hatchback offering quality and functionality at a competitive price. The Micra Active benefits from its highly competitive price, maintenance costs and better fuel efficiency of 19.49kmpl, all this without compromise on driving experience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+