ಬ್ರಿಟನ್‌ನಲ್ಲಿ ನಿಸ್ಸಾನ್ ಮೈಕ್ರಾ ಸೀಮಿತ ಆವೃತ್ತಿ ಲಾಂಚ್

By Nagaraja

ಸಮಕಾಲೀನ ಪರಿಸ್ಥಿತಿಯಲ್ಲಿ ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್ ಬೆಳವಣಿಗೆಯನ್ನು ಭಾರತೀಯರು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಬೆಳೆದು ಬರುತ್ತಿರುವ ಭಾರತದ ಪ್ರಯಾಣಿಕ ಮಾರುಕಟ್ಟೆಯನ್ನು ನಿಸ್ಸಾನ್ ಕೂಡಾ ಬೇಟೆಯಾಡುತ್ತಿರುವುದು. ನಿಸ್ಸಾನ್ ತನ್ನ ಯೋಜನೆಯ ಅಂಗವಾಗಿ ಪ್ರತಿಯೊಂದು ಆವೃತ್ತಿಗಳನ್ನು ಭಾರತಕ್ಕೆ ಪರಿಚಯಿಸುವ ಪ್ರಯತ್ನ ಮಾಡುತ್ತದೆ.

ಇದೇ ಕಾರಣಕ್ಕಾಗಿ ಬ್ರಿಟನ್‌ನಲ್ಲಿ ನಿಸ್ಸಾನ್ ಮೈಕ್ರಾ ಸೀಮಿತ ಆವೃತ್ತಿ ಲಾಂಚ್ ಆಗಿರುವ ಸುದ್ದಿಯನ್ನು ನಾವಿಲ್ಲಿ ಉಲ್ಲೇಖಿಸಲು ಬಯಸುತ್ತಿದ್ದೇವೆ. ಪ್ರಸ್ತುತ ಕಾರು ಸದ್ಯದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಹಾಗಿದ್ದರೂ ಭಾರತೀಯ ಮಾರುಕಟ್ಟೆಗೆ ಅನುಗುಣವಾಗಿ ಕೆಲವೊಂದು ಬದಲಾವಣೆ ಕಂಡುಬರುವ ಸಾಧ್ಯತೆಯಿದೆ.

ಬ್ರಿಟನ್‌ನಲ್ಲಿ ನಿಸ್ಸಾನ್ ಮೈಕ್ರಾ ಸೀಮಿತ ಆವೃತ್ತಿ ಲಾಂಚ್

2014 ನಿಸ್ಸಾನ್ ಮೈಕ್ರಾ ಮುಂದುಗಡೆ ಕ್ರೀಡಾತ್ಮಕ ಲುಕ್ ಪ್ರದಾನ ಮಾಡುವ ಪ್ರಯತ್ನ ಮಾಡಲಾಗಿದೆ. ಹಾಗೆಯೇ ಡ್ಯುಯಲ್ ಕಲರ್ ಆಯ್ಕೆ ಇನ್ನು ಹೆಚ್ಚು ಅಂದತೆಗೆ ಕಾರಣವಾಗಿದೆ.

ಬ್ರಿಟನ್‌ನಲ್ಲಿ ನಿಸ್ಸಾನ್ ಮೈಕ್ರಾ ಸೀಮಿತ ಆವೃತ್ತಿ ಲಾಂಚ್

ಕೇವಲ ಕಾರಿನ ಹೊರಗಡೆ ಮಾತ್ರವಲ್ಲ. ಕಾರಿನೊಳಗೂ ವಿವಿಧ ರೀತಿಯ ಬಣ್ಣಗಳ ಆಯ್ಕೆ ನೀಡಲಾಗಿದೆ. ಬ್ರಿಟನ್‌ ವರ್ಷನ್ ಮೈಕ್ರಾ ದರ ಅಂದಾಜು 12.66 ಲಕ್ಷ ರು.ಗಳಷ್ಟು ದುಬಾರಿಯಾಗಿರಲಿದೆ.

ಬ್ರಿಟನ್‌ನಲ್ಲಿ ನಿಸ್ಸಾನ್ ಮೈಕ್ರಾ ಸೀಮಿತ ಆವೃತ್ತಿ ಲಾಂಚ್

ಇನ್ನುಳಿದಂತೆ ಇತರ ಲಿಮಿಟೆಡ್ ಎಡಿಷನ್‌ಗಳಲ್ಲಿ ಕಾಣುತ್ತಿರುವಂತೆಯೇ ಸೀಮಿತ ಆವೃತ್ತಿ ಬ್ಯಾಡ್ಜ್ 2014 ನಿಸ್ಸಾನ್ ಮೈಕ್ರಾವನ್ನು ಸಂಪೂರ್ಣವಾಗಿಸಲಿದೆ.

ಬ್ರಿಟನ್‌ನಲ್ಲಿ ನಿಸ್ಸಾನ್ ಮೈಕ್ರಾ ಸೀಮಿತ ಆವೃತ್ತಿ ಲಾಂಚ್

ಅಂದ ಹಾಗೆ ಮಿಡ್ ರೇಂಜ್ ಆಸೆಂಟಾ ವೆರಿಯಂಟ್‌ನಲ್ಲಿ ಮಾತ್ರ ಇದು ಲಭ್ಯವಿರಲಿದೆ. ಹಾಗೆಯೇ 15 ಇಂಚು ಅಲಾಯ್ ವೀಲ್, ಕ್ರೂಸ್ ಕಂಟ್ರೋಲ್ ಮತ್ತು ರೂಫ್ ಸ್ಪಾಯ್ಲರ್ ಇತರ ವೈಶಿಷ್ಟ್ಯಗಳಾಗಿರಲಿದೆ.(ಚಿತ್ರದಲ್ಲಿ: ನಿಸ್ಸಾನ್ ಮೈಕ್ರಾ ಹಳೆಯ ಮಾದರಿ)

ಬ್ರಿಟನ್‌ನಲ್ಲಿ ನಿಸ್ಸಾನ್ ಮೈಕ್ರಾ ಸೀಮಿತ ಆವೃತ್ತಿ ಲಾಂಚ್

ವರದಿಯ ಪ್ರಕಾರ ಬ್ರಿಟನ್‌ನ ಸೀಮಿತ ಆವೃತ್ತಿಯ ಮೈಕ್ರಾವನ್ನು ಚೆನ್ನೈನಲ್ಲಿ ಸ್ಥಿತಗೊಂಡಿರುವ ನಿಸ್ಸಾನ್-ರೆನೊ ಓರಗಾಡಂ ಘಟಕದಿಂದ ರಫ್ತು ಮಾಡಲಾಗುತ್ತಿದೆ. (ಚಿತ್ರದಲ್ಲಿ: ನಿಸ್ಸಾನ್ ಮೈಕ್ರಾ ಹಳೆಯ ಮಾದರಿ

More from DriveSpark

Article Published On: Monday, February 3, 2014, 10:27 [IST]
English summary
The 2014 Nissan Micra is decent looking car which even has a hint of sportiness thanks to the new Nissan front grille design. But the hatchback still lacks that ‘punch' which would make you say WOW! Or does it?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+