ಬರುತ್ತಿದೆ ನಿಸ್ಸಾನ್ ಎಕ್ಸ್-ಟ್ರೇಲ್ ಪ್ರೀಮಿಯಂ ಎಸ್‌ಯುವಿ

By Nagaraja

ಕೆಲವು ದಿನಗಳ ಹಿಂದೆಯಷ್ಟೇ ಜನಪ್ರಿಯ 65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ನಿಸ್ಸಾನ್ ಎಕ್ಸ್-ಟ್ರೇಲ್ ಪ್ರೀಮಿಯಂ ಎಸ್‌ಯುವಿ ಕಾರನ್ನು ಅನಾವರಣಗೊಳಿಸಲಾಗಿತ್ತು. ಪ್ರಸ್ತುತ ಕಾರು ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಇದು ನಿಸ್ಸಾನ್‌ನ ನೂತನ ಕಾಮನ್ ಮೊಡ್ಯುಲ್ ಫ್ಯಾಮಿಲಿ (ಸಿಎಂಎಫ್) ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಮೊದಲ ಕಾರಾಗಿರಲಿದೆ. ಅಲ್ಲದೆ ಭವಿಷ್ಯದ 11 ಕಾರುಗಳನ್ನು ಇದೇ ತಳಹದಿಯಲ್ಲಿ ರೂಪಿಸಲಾಗುವುದು ಎಂದು ನಿಸ್ಸಾನ್-ರೆನೊ ಜಂಟಿಯಾಗಿ ಘೋಷಿಸಿದೆ.

ನೂತನ ನಿಸ್ಸಾನ್ ಕಾರು ಪ್ರೀಮಿಯಂ ಕ್ರೀಡಾ ಬಳಕೆಯ ಕಾರು ಸೆಗ್ಮೆಂಟ್‌ನಲ್ಲಿ ಗುರುತಿಸಿಕೊಳ್ಳಲಿದೆ. ಜಾಗತಿಕವಾಗಿ ಐದು ಘಟಕಗಳಲ್ಲಿ ಉತ್ಪಾದನೆಯಾಗಲಿರುವ ನಿಸ್ಸಾನ್ ಎಕ್ಸ್-ಟ್ರೇಲ್ 100ಕ್ಕಿಂತಲೂ ಹೆಚ್ಚು ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ.

ಬರುತ್ತಿದೆ ನಿಸ್ಸಾನ್ ಎಕ್ಸ್-ಟ್ರೇಲ್ ಪ್ರೀಮಿಯಂ ಎಸ್‌ಯುವಿ

ಅಮೆರಿಕದಲ್ಲಿ ರೊಗ್ಯೂ ಕಾರಿಗೆ ಬದಲಿಯಾಗಲಿರುವ ಈ ಏಳು ಸೀಟಿನ ಕಾರು ಯುರೋಪ್‌ನಲ್ಲಿ ಕ್ವಾಷಿ ಪ್ಲಸ್2 ಕಾರಿಗೆ ಬದಲಿಯಾಗಿರಲಿದೆ.

ಬರುತ್ತಿದೆ ನಿಸ್ಸಾನ್ ಎಕ್ಸ್-ಟ್ರೇಲ್ ಪ್ರೀಮಿಯಂ ಎಸ್‌ಯುವಿ

ಫ್ರಂಟ್ ಹಾಗೂ ಆಲ್ ವೀಲ್ ಡ್ರೈವ್ ಆಯ್ಕೆಗಳಲ್ಲಿ ಎಕ್ಸ್ ಟ್ರೇಲ್ ಲಭ್ಯವಿರಲಿದೆ. ಹಾಗೆಯೇ 2 ಡಬ್ಲ್ಯು ಡಿ ಆಪ್ಷನ್ ಲಭ್ಯವಿರಲಿದೆ.

ಬರುತ್ತಿದೆ ನಿಸ್ಸಾನ್ ಎಕ್ಸ್-ಟ್ರೇಲ್ ಪ್ರೀಮಿಯಂ ಎಸ್‌ಯುವಿ

ಇದರಲ್ಲಿ 2.0 ಲೀಟರ್ ಡೀಸೆಲ್ ಹಾಗೂ 1.6 ಲೀಟರ್ ಡೀಸೆಲ್ ಯುನಿಟ್ ಲಗತ್ತಿಸುವ ಸಾಧ್ಯತೆಯಿದೆ. ಹಾಗೆಯೇ ನಿಸ್ಸಾನ್ ಎಕ್ಸ್ ಟ್ರಾನಿಕ್ ಸಿವಿಟಿ ಆಟೋ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಬರುತ್ತಿದೆ ನಿಸ್ಸಾನ್ ಎಕ್ಸ್-ಟ್ರೇಲ್ ಪ್ರೀಮಿಯಂ ಎಸ್‌ಯುವಿ

ಏಳು ಸೀಟುಗಳ ಥಿಯೇಟರ್ ಶೈಲಿಯ ಸಿಟ್ಟಿಂಗ್ ವ್ಯವಸ್ಥೆ ಹೊಂದಿರುವ ನಿಸ್ಸಾನ್ ಎಕ್ಸ್ ಟ್ರೇಲ್ ಹೆಚ್ಚು ಆರಾಮದಾಯಕ ಪಯಣವನ್ನು ಖಾತ್ರಿಪಡಿಸಲಿದೆ.

ಬರುತ್ತಿದೆ ನಿಸ್ಸಾನ್ ಎಕ್ಸ್-ಟ್ರೇಲ್ ಪ್ರೀಮಿಯಂ ಎಸ್‌ಯುವಿ

ಪ್ರಸ್ತುತ ದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿದ್ದರೂ ನಿಸ್ಸಾನ್ ಎಕ್ಸ್ ಟ್ರೇಲ್ ಪ್ರೀಮಿಯಂ ಎಸ್‌ಯುವಿ 20 ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆ ತಲುಪುವ ನಿರೀಕ್ಷೆಯಿದೆ.

ಬರುತ್ತಿದೆ ನಿಸ್ಸಾನ್ ಎಕ್ಸ್-ಟ್ರೇಲ್ ಪ್ರೀಮಿಯಂ ಎಸ್‌ಯುವಿ

ಇದರ ಫ್ರಂಟ್ ಗ್ರಿಲ್ ಜೊತೆಗೆ ಎಲ್‌ಇಡಿ ಹೆಡ್‌ಲೈಟ್‌ಗಳು ಪ್ರಮುಖ ಆಕರ್ಷಣೆಯಾಗಿದೆ. ಇದರಲ್ಲಿ ನೇವಿಗೇಷನ್, ಮಾಹಿತಿ ಹಾಗೂ ಮನರಂಜನಾ ಸಿಸ್ಟಂಗಳನ್ನು ಲಗತ್ತಿಸಲಾಗಿದೆ. ಹಾಗೆಯೇ ಸ್ಮಾರ್ಟ್ ಫೋನ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಕೂಡಾ ಕೊಡಲಾಗಿದೆ.

Article Published On: Friday, September 27, 2013, 8:01 [IST]
English summary
All new Nissan X-Trail will be manufactured in 9 locations across the globe and the Renault-Nissan facility at Oragadam in Chennai, India is likely to be one of them. The all new X-Trail will be sold in 190 countries and will be badged as the Rogue in the USA.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+