2014 ನಿಸ್ಸಾನ್ ಸನ್ನಿ ದೇಶದಲ್ಲಿ ಆದ್ದೂರಿ ಬಿಡುಗಡೆ

By Nagaraja

ಕೆಲವು ದಿನಗಳ ಹಿಂದೆಯಷ್ಟೇ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ 2014 ನಿಸ್ಸಾನ್ ಸನ್ನಿ ವಿಶೇಷ ಮೀಡಿಯಾ ಡ್ರೈವ್ ಏರ್ಪಡಿಸಲಾಗಿತ್ತು. ಇದರ ಬೆನ್ನಲ್ಲೇ ಈ ಬಹುನಿರೀಕ್ಷಿತ ಮಾದರಿಯನ್ನು ಜಪಾನ್ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್ ಭಾರತ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಅಂಡಮಾನ್‌ ಸಮುದ್ರ ಅಲೆಯ ನಡುವೆ ಮುಗ್ಧ ಕಾರಿನ ಮುಗ್ಧತೆ

ನೂತನ ನಿಸ್ಸಾನ್ ಸನ್ನಿ ಫೇಸ್‌ಲಿಫ್ಟ್ ಪೆಟ್ರೋಲ್ ಮಾದರಿಯ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ದರ 6.99 ಲಕ್ಷ ರು.ಗಳಾಗಿರಲಿದೆ. ಅದೇ ಹೊತ್ತಿಗೆ ಡೀಸೆಲ್ ವೆರಿಯಂಟ್ ಪ್ರಾರಂಭಿಕ ದರ 7.99 ಲಕ್ಷ ರು.ಗಳಾಗಿದೆ. ಇನ್ನುಳಿದಂತೆ ಟಾಪ್ ಎಂಡ್ ಎಕ್ಸ್‌ವಿ ಡೀಸೆಲ್ ವೆರಿಯಂಟ್ ಎಕ್ಸ್ ಶೋ ರೂಂ ದರ 9.33 ಲಕ್ಷ ರು.ಗಳಾಗಿರಲಿದೆ.

2014 ನಿಸ್ಸಾನ್ ಸನ್ನಿ ದೇಶದಲ್ಲಿ ಆದ್ದೂರಿ ಬಿಡುಗಡೆ

2014 ನಿಸ್ಸಾನ್ ಸನ್ನಿಯಲ್ಲಿ ಎರಡು ಐಚ್ಛಿಕ ಪ್ರೀಮಿಯಂ ಪ್ಯಾಕೇಜ್‌ಗಳು ಲಭ್ಯವಿರುತ್ತದೆ. ಇವುಗಳು ಟಾಪ್ ಎಕ್ಸ್‌ವಿ ಡಿ ವೆರಿಯಂಟ್‌ನಲ್ಲಿ ಪ್ರೀಮಿಯಂ ಲೆಥರ್ ಹಾಗೂ ಪ್ರೀಮಿಯಂ ಸೇಫ್ಟಿ ಲಭ್ಯವಿರಲಿದೆ.

2014 ನಿಸ್ಸಾನ್ ಸನ್ನಿ ದೇಶದಲ್ಲಿ ಆದ್ದೂರಿ ಬಿಡುಗಡೆ

ಹೊಸ ಸನ್ನಿ ಆವೃತ್ತಿಯು, ಟಿಯಾನಾ ಸ್ಪೂರ್ತಿ ಪಡೆದ ಹೆಡ್‌ಲೈಟ್, ಹೊಸ ಗ್ರಿಲ್, ಫಾಗ್ ಲ್ಯಾಂಪ್ ಹಾಗೂ ಕ್ರೋಮ್ ಅಸೆಂಟ್ ಪಡೆದುಕೊಂಡಿದೆ.

2014 ನಿಸ್ಸಾನ್ ಸನ್ನಿ ದೇಶದಲ್ಲಿ ಆದ್ದೂರಿ ಬಿಡುಗಡೆ

ಹಿಂದುಗಡೆ ಇದು 490 ಲೀಟರ್ ಬೂಟ್ ಸ್ಪೇಸ್ ಪಡೆದುಕೊಂಡಿದೆ. ಹಾಗೆಯೇ ಹೊಸ ಟೈಲ್ ಲೈಟ್ ಮತ್ತು ಅಲಾಯ್ ವೀಲ್ಸ್ ಇರಲಿದೆ.

2014 ನಿಸ್ಸಾನ್ ಸನ್ನಿ ದೇಶದಲ್ಲಿ ಆದ್ದೂರಿ ಬಿಡುಗಡೆ

ಕಾರಿನೊಳಗೆ ಇನ್ನು ಹೆಚ್ಚಿನ ಬದಲಾವಣೆಗಳು ಕಂಡುಬರಲಿದೆ. ಹೊಸ ಲೆಥರ್ ಹೋದಿಕೆ ಸೀಟು, ಪಿಯಾನೊ ಬ್ಲ್ಯಾಕ್ ಸೆಂಟ್ರಲ್ ಕನ್ಸಾಲ್ ಸೌಲಭ್ಯವಿರಲಿದೆ.

2014 ನಿಸ್ಸಾನ್ ಸನ್ನಿ ದೇಶದಲ್ಲಿ ಆದ್ದೂರಿ ಬಿಡುಗಡೆ

ಹೈಯರ್ ಎಕ್ಸ್‌ವಿ ಪ್ರೀಮಿಯಂ 1 ಮತ್ತು ಪ್ರೀಮಿಯಂ 2 ವೆರಿಯಂಟ್‌ಗಳು ಲೆಥರ್ ಸೀಟ್, ಲೆಥರ್ ಹೋದಿಕೆಯ ಗೇರ್ ನಾಬ್, ಹೊಸತಾದ ಟು ಡಿನ್ ಆಡಿಯೋ ಸಿಸ್ಟಂ, ಬ್ಲೂಟೂತ್ ಮತ್ತು ರಿವರ್ಸ್ ಕ್ಯಾಮೆರಾ ಪರದೆ ಪಡೆಯಲಿದೆ.

2014 ನಿಸ್ಸಾನ್ ಸನ್ನಿ ದೇಶದಲ್ಲಿ ಆದ್ದೂರಿ ಬಿಡುಗಡೆ

ಇನ್ನು ಕ್ಯಾಬಿನ್‌ನೊಳಗೆ ಇನ್ನು ಹೆಚ್ಚಿನ ಐಷಾರಾಮಿ ಸೌಲಭ್ಯ ಅನುಭವ ಮಾಡಲು ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಸಿಸ್ಟಂಗೆ ಕ್ರೋಮ್ ಸ್ಪರ್ಶ ನೀಡಲಾಗಿದೆ.

2014 ನಿಸ್ಸಾನ್ ಸನ್ನಿ ದೇಶದಲ್ಲಿ ಆದ್ದೂರಿ ಬಿಡುಗಡೆ

ಇವೆಲ್ಲ ವಿಚಾರ ಒಂದೆಡೆಯಾದರೆ ತಾಂತ್ರಿಕವಾಗಿ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದು 1.5 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 98 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಸಿವಿಟಿ ಆಟೋಮ್ಯಾಟಿಕ್ ಸಹ ಹೊಂದಿರಲಿದೆ.

2014 ನಿಸ್ಸಾನ್ ಸನ್ನಿ ದೇಶದಲ್ಲಿ ಆದ್ದೂರಿ ಬಿಡುಗಡೆ

ಅಲ್ಲದೆ ಇದರ 1.5 ಲೀಟರ್ ಡೀಸೆಲ್ ಎಂಜಿನ್ 84 ಅಶ್ವಶಕ್ತಿ ಉತ್ಪಾದಿಸಲಿದೆ. ಆದರೆ ಡೀಸೆಲ್ ಆವೃತ್ತಿಯಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರುವುದಿಲ್ಲ.

ವೆರಿಯಂಟ್, ದರ ಮಾಹಿತಿ ಇಂತಿದೆ (ಎಕ್ಸ್ ಶೋ ರೂಂ ದೆಹಲಿ ಮತ್ತು ಮುಂಬೈ)

ವೆರಿಯಂಟ್, ದರ ಮಾಹಿತಿ ಇಂತಿದೆ (ಎಕ್ಸ್ ಶೋ ರೂಂ ದೆಹಲಿ ಮತ್ತು ಮುಂಬೈ)

  • ಎಕ್ಸ್‌ಇ ಪೆಟ್ರೋಲ್: ದೆಹಲಿ - 6.99 ಲಕ್ಷ ರು. ಮುಂಬೈ - 7.29 ಲಕ್ಷ ರು.
  • ಎಕ್ಸ್‌ಎಲ್ ಪೆಟ್ರೋಲ್: ದೆಹಲಿ - 7.61 ಲಕ್ಷ ರು. ಮುಂಬೈ - 7.94 ಲಕ್ಷ ರು.
  • ಎಕ್ಸ್‌ಎಲ್ ಸಿವಿಟಿ ಪೆಟ್ರೋಲ್: ದೆಹಲಿ - 8.91 ಲಕ್ಷ ರು. ಮುಂಬೈ - 9.29 ಲಕ್ಷ ರು.
  • ಎಕ್ಸ್‌ಇ ಡೀಸೆಲ್: ದೆಹಲಿ - 7.99 ಲಕ್ಷ ರು. ಮುಂಬೈ - 8.33 ಲಕ್ಷ ರು.
  • ಎಕ್ಸ್‌ಎಲ್ ಡೀಸೆಲ್: ದೆಹಲಿ - 8.60 ಲಕ್ಷ ರು. ಮುಂಬೈ - 8.96 ಲಕ್ಷ ರು.
  • ಎಕ್ಸ್‌ವಿ ಡೀಸೆಲ್: ದೆಹಲಿ - 9.33 ಲಕ್ಷ ರು. ಮುಂಬೈ - 9.72 ಲಕ್ಷ ರು.
  • ಎಕ್ಸ್‌ವಿ ಡೀಸೆಲ್ ಪ್ರೀಮಿಯಂ (ಲೆಥರ್): ದೆಹಲಿ - 9.80 ಲಕ್ಷ ರು. ಮುಂಬೈ - 10.22 ಲಕ್ಷ ರು.
  • ಎಕ್ಸ್‌ವಿ ಡೀಸೆ ಪ್ರೀಮಿಯಂ (ಸೇಫ್ಟಿ): ದೆಹಲಿ - 9.60 ಲಕ್ಷ ರು. ಮುಂಬೈ - 10.02 ಲಕ್ಷ ರು.

Article Published On: Thursday, July 3, 2014, 17:24 [IST]
English summary
Nissan Sunny facelift launched at Rs 6.99 lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+