10 ಲಕ್ಷದೊಳಗೆ ನಿಮಗೆ ನಿಸ್ಸಾನ್ ಟೆರನೊ ಲಭ್ಯ
ಸದ್ಯ ಭಾರತೀಯ ಕಾರು ಮಾರುಕಟ್ಟೆಯಲ್ಲಿ ನೂತನ ಕಾರುಗಳ ಪರ್ವಕಾಲ ಆರಂಭವಾಗಿದೆ. ಇದೀಗಷ್ಟೇ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ಹೊಸ ಸ್ಟಿಂಗ್ರೇ ಲಾಂಚ್ ಮಾಡಿತ್ತು. ಇದರ ಬೆನ್ನಲ್ಲೇ ದೇಶದ ನಂ. 2 ಕಂಪನಿಯಾಗಿರುವ ಹ್ಯುಂಡೈ, ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರನ್ನು ಸದ್ಯದಲ್ಲೇ ಲಾಂಚ್ ಮಾಡುವುದಾಗಿ ಘೋಷಿಸಿದೆ.
ಇದೀಗ ಮುಂದಿನ ಒಂದು ತಿಂಗಳ ಅವಧಿಯೊಳಗೆ ಬಹುನಿರೀಕ್ಷಿತ ನಿಸ್ಸಾನ್ ಟೆರನೊ ಕಾಂಪಾಕ್ಟ್ ಎಸ್‌ಯುವಿ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ. ಈ ವರೆಗೆ ಸಾಕಷ್ಟು ಕ್ರೇಜ್ ಸೃಷ್ಟಿ ಮಾಡಿದ್ದ ನಿಸ್ಸಾನ್ ಟೆರನೊ ವೆರಿಯಂಟ್ ಹಾಗೂ ಇಂಟಿರಿಯರ್ ಫೀಚರ್‌ಗಳ ಬಗ್ಗೆ ಮಾಹಿತಿ ಹೊರಬಂದಿದೆ.
ಹಾಗಿದ್ದರೂ ದರದ ಬಗೆಗಿನ ವಿವರವನ್ನು ಕಂಪನಿ ಇನ್ನೂ ರಹಸ್ಯವಾಗಿರಿಸಿದೆ. ಮೂಲಗಳ ಪ್ರಕಾರ ನೂತನ ನಿಸ್ಸಾನ್ ಟೆರನೊ 10 ಲಕ್ಷ ರು.ಗಳ ಅಸುಪಾಸಿನಲ್ಲಿ ದೇಶದ ಮಾರುಕಟ್ಟೆ ಪ್ರವೇಶ ಪಡೆಯಲಿದೆ. ಅಷ್ಟಕ್ಕೂ ನಿಸ್ಸಾನ್ ಟೆರನೊ ಎಷ್ಟು ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ ಹಾಗೂ ಇತರ ಕುತೂಹಲಕಾರಿ ಮಾಹಿತಿಗಳನ್ನು ತಿಳಿದುಕೊಳ್ಳುಲು ಸ್ಲೈಡರ್‌ನತ್ತ ಮುಂದುವರಿಯಿರಿ...

ಎಂಜಿನ್ ಮಾಹಿತಿ
ಈ ಹಿಂದೆ ಸೂಚಿಸಿರುವಂತೆಯೇ ರೆನೊ ಡಸ್ಟರ್‌ನಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಮಾನದಂಡವನ್ನು ನಿಸ್ಸಾನ್ ಟೆರನೊ ಪಡೆದುಕೊಳ್ಳಲಿದೆ. ಇದರಲ್ಲಿ 1.6 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡಿಸಿಐ ಡೀಸೆಲ್ ಎಂಜಿನ್ ಆಳವಡಿಸಲಾಗುವುದು. ಇವೆರಡು ಅನುಕ್ರಮವಾಗಿ 104 ಹಾಗೂ 85 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ 6 ಸ್ಪೀಡ್ ಮಾನ್ಯುವಲ್ ಹಾಗೂ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ.

ವೆರಿಯಂಟ್
ಪೆಟ್ರೋಲ್ ಆವೃತ್ತಿಯು ಎಕ್ಸ್‌ಎಲ್ ವರ್ಷನ್ ಪಡೆದುಕೊಳ್ಳಲಿದೆ. ಹಾಗೆಯೇ ಡೀಸೆಲ್ ವರ್ಷನ್ ಎಕ್ಸ್‌ಇ, ಎಕ್ಸ್‌ಎಲ್-ಡಿ, ಎಕ್ಸ್-ಡಿ ಪ್ಲಸ್ ವೆರಿಯಂಟ್ ಹೊಂದಿರಲಿದೆ.

ಇಂಟಿರಿಯರ್
ಡಸ್ಟರ್‌ಗೆ ಹೋಲಿಸಿದರೆ ನಿಸ್ಸಾನ್ ಟೆರನೊ ಇಂಟಿರಿಯರ್ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಆಗಮನವಾಗಲಿದೆ. ದೇಶದ ದೇಶದ ಗ್ರಾಹಕರಿಗೆ ಲಗ್ಷುರಿ ಅನುಭವ ನೀಡಲಿದೆ.

ಕಲರ್ ವೆರಿಯಂಟ್
ಹೊಸತಾದ ಬಣ್ಣಗಳಲ್ಲಿ ಟೆರನೊ ಲಭ್ಯವಿರಲಿದೆ ಅವುಗಳೆಂದರೆ,
Bronze Grey,
Blade Silver,
Sterling Grey,
Graphite Black,
Pearl White,
Fire Red

ಲಾಂಚ್ ದಿನಾಂಕ
ಈಗಾಗಲೇ ಭರ್ಜರಿ ಅನಾವರಣ ಕಂಡಿರುವ ನಿಸ್ಸಾನ್ ಟೆರನೊ ಹಬ್ಬದ ಆವೃತ್ತಿಯ ಮುಂಚಿತವಾಗಿ ಅಕ್ಟೋಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ. ಈ ವೇಳೆಯಲ್ಲಿ ದರವನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಅಂದ ಹಾಗೆ ನಿಸ್ಸಾನ್ ಟೆರನೊ ಮುಗಂಡ ಬುಕ್ಕಿಂಗ್ ಸೇವೆ ಸೆಪ್ಟೆಂಬರ್‌ನಿಂದ ಆರಂಭವಾಗಲಿದೆ.


Click it and Unblock the Notifications








