ಚೋಟು ಸ್ವಾಮಿಯ ಫ್ಯಾನ್ಸಿ ನಂಬರ್ ಕ್ರೇಜ್
ಈ ಸುದ್ದಿ ಓದಿದ ತಕ್ಷಣ ಸ್ವಾಮೀಜಿಯವರಲ್ಲೂ ಕಾರು ಕ್ರೇಜ್ ಇರುತ್ತದೆಯೇ ಎಂಬುದನ್ನು ಖಾತ್ರಿಪಡಿಸಬೇಕಾಗುತ್ತದೆ. ಒಂದು ವೇಳೆ ಇದು ಸಂಖ್ಯಾ ಶಾಸ್ತ್ರ ಪಾಲನೆ ಕೂಡಾ ಆಗಿರಬಹುದು.
ಚಂಡೀಗಡದ ಶ್ರೀ ಗುರು ಗೋರಖ್‌ನಾಥ್ ಸಿದ್ಧ್ ಹನುಮಾನ್ ಮಂದಿರದ ಸ್ವಾಮೀಜಿ ಆಗಿರುವ ಮಹಂತ್ ಚೋಟುನಾಥ್ ಎಂಬವರು ಕಾರಿನ ಫ್ಯಾನ್ಸಿ ನಂಬರ್‌ಗಾಗಿ ಬರೋಬ್ಪರಿ 10.5 ಲಕ್ಷ ರು. ಪಾವತಿಸಿದ್ದರಂತೆ..
ಇಲ್ಲಿ ಸ್ವಾಮೀಜಿಯವರಲ್ಲೂ ವಿಲಾಸಿ ಕಾರುಗಳ ಆಸೆ ಹುಟ್ಟಿತೇ ಎಂಬ ಅನುಮಾನವುಂಟಾಗುವುದು ಸಹಜ. ಹಾಗೆಯೇ ಲಗ್ಷುರಿ ಆಡಿ ಕ್ಯೂ7 ಕಾರಿನ ಫ್ಯಾನ್ಸಿ ನಂಬರ್ ರಿಜಿಸ್ಟ್ರೇಷನ್‌ಗಾಗಿ 10.5 ಲಕ್ಷ ರುಪಾಯಿ ಪಾವತಿಸಿದ್ದಾರೆ.
ಚಂಡೀಗಡದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲರಲ್ಲೂ ಆಶ್ಚರ್ಯವೇ ಆಶ್ಚರ್ಯ. ಯಾಕೆಂದರೆ CH01-AR-0001 ನಂಬರ್‌ಗಾಗಿ ಸ್ವಾಮೀಜಿ ಇಷ್ಟೊಂದು ದೊಡ್ಡ ಪಾವತಿಸಿದ್ದಾರೆ. ಇನ್ನು ಕುತೂಹಲಕಾರಿ ಸಂಗತಿ ಏನೆಂದರೆ ಹರಾಜಿನ ಬಳಿಕ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಕೇಸರಿ ಬಣ್ಣದ ಉಡುಪಿನಲ್ಲಿ ಆಗಮಿಸಿದ್ದ ಚೋಟು ನಾಥ್ ಸ್ವಾಮೀಜಿ ಕೊನೆಗೂ ಹರಾಜು ಗೆದ್ದೇ ಬಿಟ್ಟರು. ಇದೇ ಸಂದರ್ಭದಲ್ಲಿ ನಡೆದ ಇತರ ಹರಾಜಿನಲ್ಲಿ 0100 ನಂಬರ್ 4.20 ಲಕ್ಷ ರು., 0009 ನಂಬರ್ 4 ಲಕ್ಷ ಹಾಗೂ 0002 ನಂಬರ್ 3.5 ಲಕ್ಷ ರು.ಗಳಿಗೆ ಹರಾಜಾಗಿದ್ದವು.
ಫ್ಯಾನ್ಸಿ ನಂಬರ್ ಬೇಡಿಕೆ ಹೆಚ್ಚುತ್ತಲೇ ಇವೆ. ಇಷ್ಟಕ್ಕೂ ಸ್ವಾಮೀಜಿಯವರ ಫ್ಯಾನ್ಸಿ ನಂಬರ್ ಪ್ರೇಮ ಮಾತ್ರ ಅರ್ಥವಾಗುತ್ತಿಲ್ಲ. ಇನ್ನಿತರರ ಫ್ಯಾನ್ಸಿ ನಂಬರ್ ಕ್ರೇಜ್ ಬಗ್ಗೆ ತಿಳಿದುಕೊಳ್ಳಲು ಫೋಟೊ ಫೀಚರ್ ಕ್ಲಿಕ್ಕಿಸಿರಿ...

ಇದು ಸ್ವಾಮೀಜಿಯವರ ಕಾರು ಪ್ರೇಮವೇ ಅಥವಾ ಸಂಖ್ಯಾ ಭವಿಷ್ಯದ ಫಲವೇ ಎಂಬುದು ತಿಳಿದು ಬಂದಿಲ್ಲ. ಒಟ್ಟಿನಲ್ಲಿ ಆಡಿ ಕ್ಯೂ7 ಫ್ಯಾನ್ಸಿ ನಂಬರ್ ಪ್ಲೇಟ್‌ಗಾಗಿ ಇಷ್ಟೊಂದು ದುಡ್ಡು ಖರ್ಚು ಮಾಡಿರುವುದಂತೂ ನಿಜ.

ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ಇಂತಹ ಪ್ರಸಂಗ ಕಾಣಸಿಗುತ್ತಿರುವುದು. ಈ ಹಿಂದೆಯೂ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿತ್ತು. ಫ್ಯಾನ್ಸಿ ನಂಬರ್ ಕ್ರೇಜ್ ಚಂಡೀಗಡದಲ್ಲಿ ಅತಿ ಹೆಚ್ಚು ಕಾಣಸಿಗುತ್ತಿರುವುದು ವಿಪರ್ಯಾಸವೇ ಸರಿ.

ಈ ಹಿಂದೆ ಚಂಡೀಗಡದ ಉದ್ಯಮಿ ಅವರಜೀತ್ ಸಿಂಗ್ CH-01-AP-0001 ಫ್ಯಾನ್ಸಿ ನಂಬರ್‌ಗಾಗಿ 26 ಲಕ್ಷ ರುಪಾಯಿ ಪಾವತಿಸಿದ್ದರು. ಒಂದು ಕೋಟಿ ಮೌಲ್ಯದ ದುಬಾರಿ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನ ನಂಬರ್ ಪ್ಲೇಟ್‌ಗಾಗಿ ಇವರು ಇಷ್ಟೊಂದು ಮೊತ್ತ ಪಾವತಿಸಿದ್ದರು.

ಚಂಡೀಗಡದ ಮತ್ತೊಬ್ಬ ಉದ್ಯಮಿ ಜಗಜೀತ್ ಸಿಂಗ್ ಕೂಡಾ CH-01-AN-0001 ಫ್ಯಾನಿ ನಂಬರ್ ಪಡೆಯಲು 17 ಲಕ್ಷ ರು. ಖರ್ಚು ಮಾಡಿದ್ದರು. ಅವರು 98 ಲಕ್ಷ ಮೌಲ್ಯದ ಲ್ಯಾಂಡ್ ಕ್ರೂಸರ್ ಎಸ್‌ಯುವಿ ಕಾರಿಗಾಗಿ ಇಷ್ಟೊಂದು ದೊಡ್ಡ ಮೊತ್ತ ಪಾವತಿಸಲು ತಯಾರಾಗಿದ್ದರು.

ಇನ್ನು ಮುಂದಕ್ಕೆ ಹೋದರೆ ಸರಿ ಸುಮಾರು 50 ಸಾವಿರ ಅಸುಪಾಸಿನ ವೆಸ್ಪಾ ಸ್ಕೂಟರ್ ಫ್ಯಾನ್ಸಿ ನಂಬರ್ ಪ್ಲೇಟ್‌ಗಾಗಿ ಪಂಜಾಬ್‌ನ ರಿಕ್ಕಿ ಬ್ರಾರ್ ಎಂಬವರು ಬರೋಬ್ಬರಿ 12 ಲಕ್ಷ ರು. ಪಾವತಿಸಿದ್ದರು. ಅಂತಿಮವಾಗಿ ಅವರು ಪಡೆದ ಫ್ಯಾನ್ಸಿ ನಂಬರ್ PB-30J-0003 ಆಗಿತ್ತು.


Click it and Unblock the Notifications








