ನೀವೆಲ್ಲ ರೆಡಿನಾ? ರೆನೊದಿಂದ ಇನ್ನೊಂದು ಎಸ್‌ಯುವಿ ಸಿದ್ಧ
ರೆನೊದಿಂದ ಭಾರತಕ್ಕೆ ಪರಿಚಯವಾಗಿದ್ದ ಡಸ್ಟರ್ ಎಸ್‌ಯುವಿ ಭಾರಿ ಯಶಸ್ಸು ಸಾಧಿಸಲು ಸಾಧ್ಯವಾಗಿತ್ತು. ಮಾರುಕಟ್ಟೆಯನ್ನು ಕೊಳ್ಳೆ ಹೊಡಿದಿರುವ ಡಸ್ಟರ್ ಕಾರು ಉತ್ಸಾಹಿಗಳಲ್ಲಿ ಕ್ರೇಜ್ ಹುಟ್ಟಿಸಿಕೊಂಡಿತ್ತು.
ಡಸ್ಟರ್ ಬೆನ್ನಲ್ಲೇ ಮತ್ತೊಂದು ಸ್ಪೋರ್ಟ್ಸ್ ಯುಟಿಲಿಟಿ ವಾಹನವನ್ನು ರೆನೊ ಸಿದ್ಧಪಡಿಸುತ್ತಿದೆ. ಕ್ಲಿಯೊ ಹ್ಯಾಚ್‌ಬ್ಯಾಕ್ ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ 'ಕಾಪ್ಚರ್' ನಿಕಟ ಭವಿಷ್ಯದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.
ಈಗಾಗಲೇ 2013 ಜಿನೆವಾ ಮೋಟಾರ್ ಶೋದಲ್ಲಿ ಪ್ರದರ್ಶನ ಕಂಡಿರುವ ಕಾಪ್ಚರ್ ಕಾಂಪಾಕ್ಟ್ ಎಸ್‌ಯುವಿ ಹೆಚ್ಚು ಗಮನ ಸೆಳೆಯುತ್ತಿದೆ. ಅಷ್ಟೇ ಯಾಕೆ ಫೋರ್ಡ್ ಇಕೊಸ್ಪೋರ್ಟ್ ವಿನ್ಯಾಸಕ್ಕೆ ಸಾಮ್ಯತೆ ಹೊಂದಿರುವುದು ಹೆಚ್ಚು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಫೋರ್ಡ್ ಇಕೊಸ್ಪೋರ್ಟ್ ಜೂನ್ ತಿಂಗಳಲ್ಲಿ ಲಾಂಚ್ ಆಗಲಿದೆ. ಇದರಂತೆ ಫೋರ್ಡ್‌ಗೆ ತಕ್ಕ ಪ್ರತಿಸ್ಪರ್ದಿ ಸಿದ್ಧ ಮಾಡಲಾಗುತ್ತಿದೆಯೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ನೂತನ ರೆನೊ ಕಾಪ್ಚರ್ ಬಳಕೆದಾರ ಸ್ನೇಹಿ ಕಾಂಪಾಕ್ಟ್ ಎಸ್‌ಯುವಿ ಕಾರಾಗಿರಲಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.

ಇನ್ನು ಇಂಟಿರಿಯರ್ ಭಾಗಗಳು ಆಕರ್ಷಕವಾಗಿದ್ದು, ಹೆಚ್ಚಿನ ಸ್ಥಳಾವಕಾಶ ಹೊಂದಿರಲಿದೆ. ಹಾಗೆಯೇ ವಿಸ್ತಾರವಾದ ಲಗ್ಗೇಜ್ ಸ್ಪೇಸ್ ನೀಡಲಾಗಿದೆ.

ರೆನೊ ಕಾಪ್ಛರ್ ಹೆಚ್ಚು ವರ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದ್ದು, ಅನೇಕ ಆಧುನಿಕ ಫೀಚರ್ಸ್ ಲಗತ್ತಿಸಲಾಗಿದೆ.

ಹ್ಯಾಂಡ್ ಫ್ರಿ ಅಸಿಸ್ಟ್, ಹಿಲ್ ಸ್ಟಾರ್ಟ್ ಅಸಿಸ್ಟ್ ಹಾಗೂ ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳಂತಹ ವೈಶಿಷ್ಟ್ಯಗಳು ಈ ಕಾಂಪಾಕ್ಟ್ ಎಸ್‌ಯುವಿನಲ್ಲಿ ಲಭ್ಯವಿದೆ. ಸಾಮಾನ್ಯವಾಗಿ ಇಂತಹ ಫೀಚರ್‌ಗಳು ದುಬಾರಿ ಕಾರುಗಳಲ್ಲಿ ಮಾತ್ರ ಕಾಣಸಿಗುತ್ತವೆ.

ಆರ್-ಲಿಂಕ್ ಟಚ್‌ಸ್ಕ್ರೀನ್ ಮಲ್ಟಿಮೀಡಿಯಾ ಟಾಬ್ಲೆಟ್ ಹಾಗೂ ಆರು ಸ್ಪೀಕರ್ ಮ್ಯೂಸಿಕ್ ಸಿಸ್ಟಂ, ಬ್ಲೂಟೂತ್ ಸೇವೆ ಕೂಡಾ ಲಭ್ಯವಿರಲಿದೆ.

ಅಂತೆಯೇ ಕಡಿಮೆ ಹೊಗೆ ಹೊರಸೂಸುವಿಕೆಯಿಂದ ಹೆಚ್ಚು ಪರಿಸರ ಸ್ನೇಹಿ ಎಂದೆನಿಸಲಿದೆ. ಪ್ರಸ್ತುತ ಕಾರು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಫೋರ್ಡ್ ಇಕೊಸ್ಪೋರ್ಟ್ ಹಾಗೂ ನಿಸ್ಸಾನ್ ಜ್ಯೂಕ್ ಆವೃತ್ತಿಗಳಿಗೆ ನೇರ ಪೈಪೋಟಿ ನೀಡಲಿದೆ.

ಖಂಡಿತವಾಗಿಯೂ ರೆನೊ ಕಾಪ್ಚರ್ ಭಾರತದಲ್ಲಿ ಉತ್ತಮ ಮಾರುಕಟ್ಟೆ ಕಾಯ್ದುಕೊಳ್ಳುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

ರೆನೊ ಕಾಪ್ಚರ್

ರೆನೊ ಕಾಪ್ಚರ್

ರೆನೊ ಕಾಪ್ಚರ್

ರೆನೊ ಕಾಪ್ಚರ್

ರೆನೊ ಕಾಪ್ಚರ್

ರೆನೊ ಕಾಪ್ಚರ್

ರೆನೊ ಕಾಪ್ಚರ್



Click it and Unblock the Notifications








