ಜಿನೆವಾದಲ್ಲಿ ಗಮನಸೆಳೆದ ರೆನೊ ಕ್ಲಿಯೊ ಕಾರು
ಜಗತ್ತಿನ ಬಹುತೇಕ ವಾಹನ ತಯಾರಕ ಸಂಸ್ಥೆಗಳು ಜಿನೆವಾ ಮೋಟಾರು ಶೋದಲ್ಲಿ ತಮ್ಮ ನೂತನ ಕಾನ್ಸೆಪ್ಟ್‌ಗಳನ್ನು ಪ್ರದರ್ಶಿಸುತ್ತಿದೆ. ಇದರಂತೆ ರೆನೊ ಕೂಡಾ ನೂತನ ಕ್ಲಿಯೊ ಆರ್‌ಎಸ್ ಮೊನಕೊ ಜಿಪಿ ಎಡಿಷನ್ ಹ್ಯಾಚ್‌ಬ್ಯಾಕ್ ಕಾರು ಅನಾವರಣಗೊಳಿಸಿದೆ.
ಪ್ರಸ್ತುತ ಕಾರು ಫೋರ್ಡ್ ಫೋಕಸ್ ಎಸ್‌ಟಿ, ಫೋಕ್ಸ್‌ವ್ಯಾಗನ್ ಜಿಟಿಐ ಮತ್ತು ಫಿಯೆಸ್ಟಾ ಎಸ್‌ಟಿ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ. ನೂತನ ರೆನೊ ಕ್ಲಿಯೊ ಆರ್‌ಎಸ್ ಮೊನಕೊ ಎಡಿಷನ್, 1.6 ಲೀಟರ್ ಫೋರ್ ಸಿಲಿಂಡರ್ ಟರ್ಬೊ ಬೂಸ್ಟಡ್ ಎಂಜಿನ್ ಪಡೆದುಕೊಳ್ಳಲಿದ್ದು, 200 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಕೇವಲ 6.7 ಸೆಕೆಂಡುಗಳಲ್ಲೇ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಗಂಟೆಗೆ ಗರಿಷ್ಠ 200 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಫ್ರಂಟ್ ವೀಲ್ ಡ್ರೈವ್‌ನಲ್ಲಿ ಮಾತ್ರ ಲಭ್ಯವಿರುವ ರೆನೊ ಕ್ಲಿಯೊ ಸಿಕ್ಸ್ ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ರೆನೊ ಕ್ಲಿಯೊ ಆರ್‌ಎಸ್ ಮೊನಕೊ ಜಿಪಿ ಎಡಿಷನ್ 2014 ಜಿನೆವಾ ಮೋಟಾರು ಶೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದೆ. ಇದು ರೆನೊ ಕ್ಲಿಯೊದ ವಿಶೇಷ ಆವೃತ್ತಿಯಾಗಿರಲಿದೆ.

ಮೊದಲ ನೋಟದಲ್ಲೇ ಕ್ರೀಡಾತ್ಮಕ ವಿನ್ಯಾಸ ಉಳಿಸಿಕೊಳ್ಳುವಲ್ಲಿ ರೊ ಕ್ಲಿಯೊ ಯಶಸ್ವಿಯಾಗಿದೆ. ಇದು ಸುಲಭ ಹಾಗೂ ನೇರವಾದ ವಿನ್ಯಾಸ ಪಡೆದುಕೊಂಡಿದೆ. ರೆನೊ ಲಾಂಛನದ ಕೆಳಗಡೆ ವಿಶೇಷ ಆರ್‌ಎಸ್ ಬ್ಯಾಡ್ಜ್ ಕೂಡಾ ನೋಡಬಹುದಾಗಿದೆ.

ಎರಡೂ ಬದಿಗಳಲ್ಲೂ ಕ್ರೀಡಾತ್ಮಕ ವಿನ್ಯಾಸಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. 10 ಸ್ಪೋಕ್ ಅಲಾಯ್ ವೀಲ್ ಜತೆಗೆ ಕಪ್ಪು ವರ್ಣದ ಫಿನಿಶಿಂಗ್ ನೀಡಲಾಗಿದೆ.

ಹಿಂದುಗಡೆ ಡ್ಯುಯಲ್ ಎಕ್ಸಾಸ್ಟ್ ಔಟ್ಲೆಟ್ ಪಡೆದುಕೊಂಡಿದೆ. ಒಟ್ಟಿನಲ್ಲಿ ಹಿಂದುಗಡೆಯೂ ಆಕ್ರಮಣಕಾರಿ ವಿನ್ಯಾಸವನ್ನು ಗಮನಿಸಬಹುದಾಗಿದೆ.

ಅಂತಿಮವಾಗಿ ಕಾರಿನೊಳಗೆ ಐಷಾರಾಮಿ ವೈಶಿಷ್ಟ್ಯಗಳಿಗೆ ಮನೆ ಮಾಡಲಾಗಿದೆ. ಇದು ಆಧುನಿಕ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.


Click it and Unblock the Notifications








