ಬೆಳಕಿನ ಹಬ್ಬ ದೀಪಾವಳಿಗೆ ಡಸ್ಟರ್ ವಾರ್ಷಿಕ ಆವೃತ್ತಿಯ ಕೊಡುಗೆ
ಭಾರತಕ್ಕೆ ಲಗ್ಗೆಯಿಟ್ಟ ಒಂದರ ವಸಂತವನ್ನು ಆದ್ಧೂರಿಯಾಗಿ ಆಚರಿಸಿಕೊಳ್ಳುತ್ತಿರುವ ಫ್ರಾನ್ಸ್ ಮೂಲದ ರೆನೊ, ತನ್ನ ಅತ್ಯಂತ ಜನಪ್ರಿಯ ಡಸ್ಟರ್ ಕಾಂಪಾಕ್ಟ್ ಎಸ್‍ಯುವಿ ಕಾರಿನ ವಾರ್ಷಿಕ ಆವೃತ್ತಿ ಲಾಂಚ್ ಮಾಡಿದೆ.
ಕಳೆದೊಂದು ವರ್ಷದಲ್ಲಿ ಭಾರತ ರಸ್ತೆಯಲ್ಲಿ ರೆನೊ ಡಸ್ಟರ್ ಅತಿ ಹೆಚ್ಚು ಸದ್ದು ಮಾಡಿತ್ತಲ್ಲದೆ ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಮಾರುಕಟ್ಟೆಯಲ್ಲಿ ರೆನೊ ದಾಖಲಿಸಿರುವ ಸ್ಥಿರತೆಯ ಮಾರಾಟವೇ ಇದನ್ನು ಸಾಬೀತುಪಡಿಸುತ್ತಿದೆ.
ದೀಪಾವಳಿ ಹಬ್ಬ ಆಚರಣೆಗೂ ಕೆಲವೇ ದಿನಗಳಿರುವಂತೆಯೇ ನೂತನ ಆವೃತ್ತಿಯು ರನೊ ಮಾರಾಟ ವೇಗತೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ನಿರೀಕ್ಷಿಸಲಾಗಿದೆ. ಇದು ಬೆಳಕಿನ ಹಬ್ಬ ಆಚರಿಸುತ್ತಿರುವ ದೇಶದ ಜನತೆಗೆ ರೆನೊ ಕೊಡುಗೆಯಾಗಿರಲಿದೆ. ಅಷ್ಟಕ್ಕೂ ನೂತನ ರೆನೊದಲ್ಲಿ ಏನೆಲ್ಲ ವೈಶಿಷ್ಟ್ಗಳಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ನೀವು ನಿರೀಕ್ಷೆ ಮಾಡಿದಂತೆ ರೆನೊ ಡಸ್ಟರ್ ವಾರ್ಷಿಕ ಆವೃತ್ತಿಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಆದರೆ ನೂತನ ಕೊಸ್ಮಸ್ ಬ್ಲ್ಯೂ ದೇಹ ವರ್ಣ ಹಾಗೂ ಕೆಲವೊಂದು ಬಾಡಿ ಗ್ರಾಫಿಕ್ಸ್‌ಗಳು ಹೆಚ್ಚು ಆಕರ್ಷಕವಾಗಿ ಗೋಚರಿಸುವಂತೆ ಮಾಡಿದೆ.

ನಿಮ್ಮ ಮಾಹಿತಿಗಾಗಿ, ಬ್ರಿಟನ್‌ನಲ್ಲಿ ಮಾರಾಟವಾಗುತ್ತಿರುವ ರೆನೊ ಡಸ್ಟರ್ ತದ್ರೂಪ ಡ್ಯಾಸಿಯಾ ಡಸ್ಟರ್‌ನಲ್ಲೂ ಕೊಸ್ಮಸ್ ಬ್ಲ್ಯೂ ಕಲರ್ ವೆರಿಯಂಟ್ ಆಯ್ಕೆ ನೀಡಲಾಗುತ್ತದೆ. ಇದೀಗ ಇದೇ ವೈಶಿಷ್ಟ್ಯವನ್ನು ಭಾರತ ಆವೃತ್ತಿಗೂ ಆಮದು ಮಾಡಲಾಗಿದೆ.

ರೆನೊ ಡಸ್ಟರ್ ಆರ್xಝಡ್ 110 ಪಿಎಸ್ ಟಾಪ್ ಎಂಡ್ ಡೀಸೆಲ್ ವೆರಿಯಂಟ್‌ಗಳಲ್ಲಿ ಮಾತ್ರ ಈ ಕಲರ್ ವೆರಿಯಂಟ್ ಲಭ್ಯವಿರಲಿದೆ.

ಸ್ಟಾಂಡರ್ಡ್ ರೆನೊ ಡಸ್ಟರ್ ಆರ್xಝಡ್ ವೆರಿಯಂಟ್ ಬೆಂಗಳೂರು ಎಕ್ಸ್ ಶೋ ರೂಂ ದರ 11.76 ಲಕ್ಷ ರು.ಗಳಾಗಿವೆ. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ನೂತನ ಡಸ್ಟರ್ ವಿಶೇಷ ಆವೃತ್ತಿಗೆ 50000 ರು. ಹೆಚ್ಚುವರಿ ವೆಚ್ಚ ತಗುಲಲಿದೆ.

ಮುಂದುವರಿದ ಬೆಳವಣಿಗೆಯಲ್ಲಿ ಫೋರ್ಡ್ ಇಕೊಸ್ಪೋರ್ಟ್ ಹಾಗೂ ನಿಸ್ಸಾನ್ ಟೆರನೊ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವುದು ಡಸ್ಟರ್ ಹಿನ್ನಡೆಗೆ ಕಾರಣವಾಗಿತ್ತು. ಆದರೆ ಇದೀಗ ವಿಶೇಷ ಆವೃತ್ತಿಯೊಂದಿಗೆ ಮತ್ತೆ ಪುಟಿದೇಳುವ ಭರವಸೆ ಹೊಂದಿದೆ.


Click it and Unblock the Notifications








