ಹೊಸ ರೆನೊ ಪಲ್ಸ್ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು?

By Nagaraja

ಕೆಲವು ದಿನಗಳ ಹಿಂದೆಯಷ್ಟೇ ಕಳೆಗುಂದಿದ ಮಾರಾಟದ ಹಿನ್ನೆಲೆಯಲ್ಲಿ ರೆನೊ ಪಲ್ಸ್ ಮಾರಾಟವನ್ನು ಸ್ಥಗಿತಗೊಳಿಸಿರುವುದಾಗಿ ಮಾಹಿತಿಯನ್ನು ಕೊಟ್ಟಿದ್ದೆವು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಎಲ್ಲ ಹೊಸತನದಿಂದ ಕೂಡಿರುವ ಪಲ್ಸ್ ಹ್ಯಾಚ್‌ಬ್ಯಾಕ್ ಮಾದರಿಯನ್ನು ಬಿಡುಗಡೆಗೊಳಿಸಿದೆ.

ಅಷ್ಟೇ ಯಾಕೆ ಪಲ್ಸ್ ಬಿಡುಗಡೆಯ ಸಂದರ್ಭದಲ್ಲಿ ಇನ್ನು ಕೆಲವು ತಿಂಗಳಲ್ಲಿ ಮಗದೊಂದು ಆಕರ್ಷಕ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಬಹುತೇಕ ಇದು ಹೊಸ ಸ್ಕಾಲಾ ಸೆಡಾನ್ ಕಾರು ಆಗಿರುವ ಸಾಧ್ಯತೆಗಳು ಕಂಡುಬರುತ್ತಿದೆ.

ಬೆಲೆ ಮಾಹಿತಿ

ಬೆಲೆ ಮಾಹಿತಿ

ಹೊಸ ರೆನೊ ಪಲ್ಸ್ ದೆಹಲಿ ಎಕ್ಸ್ ಶೋ ರೂಂ ಬೆಲೆ 5.3 ಲಕ್ಷ ರು.ಗಳಾಗಿದೆ. ಇದು ಹಿಂದಿನ ಮಾದರಿಗಿಂತಲೂ ಹೆಚ್ಚು ವೈಶಿಷ್ಟ್ಯಗಳಿಂದ ತುಂಬಿಕೊಂಡಿರಲಿದೆ.

ತಾಂತ್ರಿಕ ವೈಶಿಷ್ಟ್ಯಗಳು, ಮೈಲೇಜ್

ತಾಂತ್ರಿಕ ವೈಶಿಷ್ಟ್ಯಗಳು, ಮೈಲೇಜ್

1.2 ಲೀಟರ್ ಪೆಟ್ರೋಲ್ ಎಕ್ಸ್‌ಎಚ್5 ಎಂಜಿನ್ - 74 ಅಶ್ವಶಕ್ತಿ, 104 ತಿರುಗುಬಲ, ಮೈಲೇಜ್ - 18.1 kpl.

1.5 ಲೀಟರ್ ಡೀಸೆಲ್ ಕೆ9ಕೆ ಡಿಸಿಐ ಎಂಜಿನ್ - 63 ಅಶ್ವಶಕ್ತಿ, 160 ತಿರುಗುಬಲ, 23.1 kpl.

ಇವೆರಡು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

ವಿಶಿಷ್ಟತೆ

ವಿಶಿಷ್ಟತೆ

  • ಆಟೋ ಹೆಡ್ ಲೈಟ್,
  • ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು,
  • ಸ್ಟೀರಿಂಗ್‌ನಲ್ಲೇ ಆಡಿಯೋ ನಿಯಂತ್ರಣ,
  • ಡ್ಯುಯಲ್ ಟೋನ್ ಡ್ಯಾನ್ ಬೋರ್ಡ್,
  • ಪಿಯಾನೊ ಬ್ಲ್ಯಾಕ್ ಮುಂಭಾಗದ ನೋಟ,
  • ಎಂಜಿನ್ ಸ್ಟ್ಯಾಟ್/ಸ್ಟಾಪ್ ಬಟನ್,
  • ಸ್ಮಾರ್ಟ್ ಕೀ,
  • ಸ್ವಯಂಚಾಲಿತವಾಗಿ ಮಡಚಬಹುದಾದ ಓಆರ್‌ವಿಎಂ,
  • 2 ಡಿನ್ ಮ್ಯೂಸಿಕ್ ಸಿಸ್ಟಂ ಜೊತೆ ಯುಎಸ್‌ಬಿ, ಬ್ಲೂಟೂತ್
  • ಸುರಕ್ಷತೆ

    ಸುರಕ್ಷತೆ

    ಎಬಿಎಸ್,

    ಇಬಿಡಿ,

    ಡ್ಯುಯಲ್ ಏರ್ ಬ್ಯಾಗ್,

    ಢಿಕ್ಕಿ ಸೆನ್ಸಾರ್

    ಹೊಸ ರೆನೊ ಪಲ್ಸ್ ಭಾರತದಲ್ಲಿ ಬಿಡುಗಡೆ

    ಈ ನಡುವೆ ಹೊಸ ರೆನೊ ಪಲ್ಸ್ ವಾರಂಟಿಯನ್ನು 50,000 ಕೀ.ಮೀ. ಅಥವಾ ಎರಡು ವರ್ಷಗಳಿಗೆ ಸೀಮಿತಗೊಳಿಸಲಾಗಿದೆ. ಹಿಂದಿನ ಮಾದರಿಗೆ ನಾಲ್ಕು ವರ್ಷಗಳ ಅಥವಾ 80,000 ಕೀ.ಮೀ.ಗಳ ವಾರಂಟಿ ನೀಡಲಾಗುತ್ತಿತ್ತು.

More from DriveSpark

Article Published On: Friday, February 27, 2015, 10:45 [IST]
English summary
Renault India Launches New Pulse: Price, Specs, Features & More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+