2016ರಲ್ಲಿ ರೆನೊ ಹೊಸ ಕಾರು ಕ್ವಿಡ್ ಲಾಂಚ್ ?

By Nagaraja

ಮೂರು ತಿಂಗಳ ಹಿಂದೆ ಸಾಗಿದ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ರೆನೊ ಕ್ವಿಡ್ ಕಾನ್ಸೆಪ್ಟ್ ಕಾರು ನಿರ್ಮಾಣ ಹಂತ ತಲುಪುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತಿದೆ. ಹಾಗಿದ್ದರೂ ನಿರ್ಮಾಣ ಸಿದ್ಧ ಕಾರಿನಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡುಬರುವ ಸಾಧ್ಯತೆಯಿದೆ.

ಬಲ್ಲ ಮೂಲಗಳ ಪ್ರಕಾರ ರೆನೊ ಕ್ವಿಡ್ 2016ನೇ ಸಾಲಿನಲ್ಲಿ ಲಾಂಚ್ ಆಗಲಿದೆ. ಇದಕ್ಕೂ ಮೊದಲು ರಾಷ್ಟ್ರ ರಾಜಧಾನಿಯಲ್ಲಿ ನಡೆದ ವಾಹನ ಪ್ರದರ್ಶನ ಮೇಳದಲ್ಲಿ ಎಲ್ಲರ ಕಣ್ಣು ಕುಕ್ಕುವಂತಹ ಕಾನ್ಸೆಪ್ಟ್ ಪ್ರದರ್ಶಿಸಿದ್ದ ರೆನೊ, ಇದನ್ನು ನಿರ್ಮಾಣ ಹಂತಕ್ಕೆ ತರಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.

2016ರಲ್ಲಿ ರೆನೊ ಹೊಸ ಕಾರು ಕ್ವಿಡ್ ಲಾಂಚ್ ?

ವಿಶೇಷವಾಗಿಯೂ ಭಾರತದಂತಹ ಬೆಳೆದು ಬರುತ್ತಿರುವ ರಾಷ್ಟ್ರಗಳನ್ನು ಗುರಿಯಾಗಿರಿಸಿಕೊಂಡು ಕ್ವಿಡ್ ಕಾನ್ಸೆಪ್ಟ್ ಕಾರನ್ನು ರೆನೊ ತಯಾರಿಸಿತ್ತು.

2016ರಲ್ಲಿ ರೆನೊ ಹೊಸ ಕಾರು ಕ್ವಿಡ್ ಲಾಂಚ್ ?

ಇದೀಗ ತನ್ನ ಬದ್ಧತೆಯನ್ನು ಪ್ರದರ್ಶಿಸಲು ಮುಂದಾಗಿರುವ ರೆನೊ, ಕಾನ್ಸೆಪ್ಟ್ ಎಸ್‌ಯುವಿ ಪ್ರಿಯ ದೇಶಕ್ಕೊಂದು ಕ್ವಿಡ್ ಮುಖಾಂತರ ಕ್ರಾಸೋವರ್ ಮಾದರಿಯನ್ನು ಪ್ರದರ್ಶಿಸುವ ಯೋಜನೆ ಹೊಂದಿದೆ.

2016ರಲ್ಲಿ ರೆನೊ ಹೊಸ ಕಾರು ಕ್ವಿಡ್ ಲಾಂಚ್ ?

ಹಾಗಿದ್ದರೂ ಈ ಬಗ್ಗೆ ರೆನೊ ಸಂಸ್ಥೆಯಿಂದ ಯಾವುದೇ ಅಧಿಕೃತ ವರದಿಗಳು ಬಂದಿಲ್ಲ. ಆದರೆ ಆಟೋ ಎಕ್ಸ್‌ಪ್ರೆಸ್ ಪ್ರಕಾರ 2016ರ ವೇಳೆಯಾಗುವಾಗ ಬಿಡುಗಡೆಯಾಗುವ ಸಂಭವವಿದೆ.

2016ರಲ್ಲಿ ರೆನೊ ಹೊಸ ಕಾರು ಕ್ವಿಡ್ ಲಾಂಚ್ ?

ಇಲ್ಲಿ ಕೊಟ್ಟಿರುವುದು ಆಟೋ ಎಕ್ಸ್‌ಪ್ರೆಸ್‌ನಿಂದ ತಯಾರಾಗಿರುವ ರೆನೊ ಕ್ವಿಡ್ ಚಿತ್ರ. ಇದು ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ವಿನ್ಯಾಸಗೊಳಿಸಿರುವುದು ವಿಶೇಷ. ಈಗ ರೆನೊದಿಂದ ಲಭ್ಯವಿರುವ ಕಾಪ್ಚರ್‌ಗಿಂತಲೂ ಸಣ್ಣದಾದ ಕ್ರಾಸೋವರ್ ಇದಾಗಿದೆ.

ಫೋಟೊ ಕೃಪೆ: ಆಟೋ ಎಕ್ಸ್‌ಪ್ರೆಸ್
2016ರಲ್ಲಿ ರೆನೊ ಹೊಸ ಕಾರು ಕ್ವಿಡ್ ಲಾಂಚ್ ?

ಅಂದ ಹಾಗೆ ರೆನೊ ಕ್ವಿಡ್ ನಿರ್ಮಾಣ ಆವೃತ್ತಿಯು ಟ್ವಿನ್‌ಗೊದ 900ಸಿಸಿ ಟಿಎಸ್‌ಇ (TCe) ಎಂಜಿನ್ ಪಡೆಯುವ ಬಗ್ಗೆಯೂ ಮಾಹಿತಿಯಿದೆ. ಇನ್ನು ಭಾರತದಲ್ಲಿ 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್ ಪಡೆಯುವ ಸಾದ್ಯತೆಯೂ ಇದೆ.

More from DriveSpark

Article Published On: Monday, May 19, 2014, 18:32 [IST]
English summary
The Renault Kwid was an eye catching concept, with an attention grabbing design that was conceived for the Delhi Auto Expo earlier this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+