ಮಾರುತಿ ಜಿಪ್ಸಿ ರಿ ಎಂಟ್ರಿಗಾಗಿ ಕಾದಿರಿ
ಕಳೆಗುಂದಿರುವ ಮಾರುತಿ ಜಪ್ಸಿ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂಬುದು ಕೆಲ ತಿಂಗಳುಗಳ ಹಿಂದೆ ವಾಹನೋದ್ಯಮದಿಂದ ಬಂದ ಮಾಹಿತಿಯಾಗಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಇಂಡಿಯನ್ ಆರ್ಮಿ ಜತೆ ತನ್ನದೇ ಆದ ಸಾನಿಧ್ಯ ರೂಪಿಸಿಕೊಂಡಿದ್ದ ಮಾರುತಿ ಸುಜುಕಿ ಜಿಪ್ಸಿ ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.
ಹೌದು, ಈ ಸುದ್ದಿ ಸಂಪೂರ್ಣ ನಂಬಲಾರ್ಹವಲ್ಲ. ಆದರೆ ಬಲ್ಲ ಮೂಲಗಳ ಪ್ರಕಾರ ಮುಂಬರುವ ಕೆಲವೇ ತಿಂಗಳೊಳಗೆ ಜಿಪ್ಸಿ ಫೇಸ್ ಲಿಫ್ಟ್ ವರ್ಷನ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.
ಇನ್ನು ವಿಶೇಷವಾದ ಸಂಗತಿಯೆಂದರೆ ನೂತನ ಜಿಪ್ಸಿ ಡೀಸೆಲ್ ಎಂಜಿನ್‌ನಲ್ಲೂ ಲಭ್ಯವಾಗಲಿದೆ. ಇದು ಆಫ್ ರೋಡ್ ರೈಡಿಂಗ್ ಇಷ್ಟಪಡುವ ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸುವಂತಾಗಿದೆ.

ತೆರಿಗೆಯನ್ನು ಕಡಿತ ಮಾಡುವಲ್ಲಿ ನಿಟ್ಟಿನಲ್ಲಿ ನೂತನ ಜಿಪ್ಸಿ ನಾಲ್ಕು ಮೀಟರ್ ಉದ್ದದ ಪರಿಮಿತಿಯೊಳಗೆ ತಯಾರಿಸಲಾಗುತ್ತಿದೆ ಎನ್ನಲಾಗುತ್ತಿದೆ. ಇದು ಮಾರುಕಟ್ಟೆಯಲ್ಲಿ ಸ್ಮರ್ದಾತ್ಮಕ ದರಗಳಲ್ಲಿ ಮಾರಾಟ ಮಾಡಲು ನೆರವಾಗಲಿದೆ.

ನೂತನ ಜಿಪ್ಸಿ 1.2 ಲೀಟರ್ ಜಿ12ಬಿ ಪೆಟ್ರೋಲ್ ಹಾಗೂ 1.3 ಲೀಟರ್ ಫಿಯೆಟ್ ಮಲ್ಟಿಜೆಟ್ ಟರ್ಬೊ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ನಿರೀಕ್ಷೆಯಲ್ಲಿದೆ.

ಹಾಗೊಂದು ವೇಳೆ ಜಿಪ್ಸಿ ಪುನರಾಗಮನವಾದ್ಧಲ್ಲಿ ಮಾರುಕಟ್ಟೆಯಲ್ಲಿ ಮಹೀಂದ್ರ ಥಾರ್‌ಗೆ ಕಠಿಣ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಲಿದೆ.

ಆಫ್ ರೋಡ್ ವಾಹನವಾಗಿರುವುದರಿಂದ ವಿನ್ಯಾಸ ಪ್ರಮುಖ ಪಾತ್ರ ವಹಿಸಲಿದೆ. ಹಾಗಾಗಿ ನೂತನ ಜಿಪ್ಸಿ ಏನೆಲ್ಲ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

ಒಟ್ಟಿನಲ್ಲಿ ಕಂಪನಿಯ ಅಧಿಕೃತ ಪ್ರಕಟಣೆ ಯಾವಾಗ ಹೊರಬೀಳಲಿದೆ ಎಂಬುದನ್ನು ವಾಹನ ಪ್ರಿಯರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.


Click it and Unblock the Notifications