ಸ್ಕೋಡಾ ಸೂಪರ್ಬ್ ನಿಮಗೆ ಇಷ್ಟವಾಯಿತೇ?

By Nagaraja

2013 ಶಾಂಘೈ ಮೋಟಾರ್ ಶೋದಲ್ಲಿ ಅನಾವರಣಗೊಳ್ಳುವುದಕ್ಕೆ ಮುನ್ನಡಿಯಾಗಿ ನೂತನ ಸ್ಕೋಡಾ ಸೂಪರ್ಬ್ ಅಧಿಕೃತ ಇಮೇಜ್ ಬಿಡುಗಡೆ ಮಾಡಲಾಗಿದೆ. ಈ ಫೇಸ್‌ಲಿಫ್ಟ್ ವರ್ಷನ್‌ನಲ್ಲಿ ಇಂಟಿರಿಯರ್ ಸೇರಿದಂತೆ ಎಕ್ಸ್‌ಟೀರಿಯರ್ ಭಾಗಗಳನ್ನು ಅಪ್‌ಗ್ರೇಡ್ ಮಾಡಲಾಗಿದೆ.

ನೂತನ ಸ್ಕೋಡಾ ಸೂಪರ್ಬ್ ಆರಾಮದಾಯಕ ಪಯಣವನ್ನು ಖಾತ್ರಿಪಡಿಸುತ್ತಿದೆ. ಹೆಚ್ಚಿನ ಸ್ಥಳಾವಕಾಶ, ನಿರ್ವಹಣೆ, ಆರಾಮದಾಯಕ ಹಾಗೂ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಅನುಸರಿಸಲಾಗಿದ್ದು 2013 ವರ್ಷಾಂತ್ಯದಲ್ಲಿ ಭಾರತ ರಸ್ತೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ.

New Skoda Superb Facelift Revealed

ಪರಿಷ್ಕೃತ ಫೋರ್ ಸ್ಪೋಕ್ಡ್ ಸ್ಟೀರಿಂಗ್ ವೀಲ್, ನೂತನ ಗೇರ್ ಲೆವೆರ್ ಸ್ಟಿಕ್, ಎಲೆಕ್ಟ್ರಾನಿಕಲಿ ಹೊಂದಿಸಬಹುದಾದ ಡ್ರೈವರ್ ಸೀಟ್, ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಜತೆಗೆ ಹೊಸ ಕಲರ್ ವೆರಿಯಂಟ್ ನೀಡಲಾಗಿದೆ.

New Skoda Superb Facelift Revealed

ಇನ್ನು ಕಾರಿನ ಹೊರಂಗಣ ವಿನ್ಯಾಸದಲ್ಲೂ ಹೆಚ್ಚಿನ ಬದಲಾವಣೆ ತರಲಾಗಿದೆ. ಪರಿಷ್ಕೃತ ಹೆಡ್‌ಲೈಟ್ ಹಾಗೂ ಫಾಗ್ ಲ್ಯಾಂಪ್ ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ. ರಿಯರ್ ಲ್ಯಾಂಪ್ ಕೂಡಾ ಪರಿಷ್ಕೃತಗೊಳಿಸಲಾಗಿದ್ದು, ಬೈಕ್ಸೆನಾನ್ ಹೆಡ್‌ಲೈಟ್ ಹಾಗೂ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ ಆಳವಡಿಸಲಾಗಿದೆ. ಹೊಸ ಬಂಪರ್, ಗ್ರಿಲ್ ಡಿಸೈನ್, ಫ್ರಂಟ್ ಫೆಂಡರ್ ಹಾಗೂ ಬೊನೆಟ್ ಇತರ ಪ್ರಮುಖ ವೈಶಿಷ್ಟ್ಯಗಳಾಗಿವೆ.

New Skoda Superb Facelift Revealed

ಸಮಾನವಾದ ಎಂಜಿನ್ ಆಯ್ಕೆ 1.8 ಲೀಟರ್ ಟಿಎಸ್‌ಐ ಪೆಟ್ರೋಲ್, 3.6 ಲೀಟರ್ ಪೆಟ್ರೋಲ್ ಹಾಗೂ 2.0 ಲೀಟರ್ ಟಿಡಿಐ ಹೊಂದಿರಲಿದೆ. ಹಾಗೆಯೇ ಟಿಎಸ್‌ಐ ಮೋಟಾರ್ ಆರು ಸ್ಪೀಡ್ ಮ್ಯಾನುವಲ್ ಅಥವಾ ಏಳು ಸ್ಪೀಡ್ ಡಿಎಸ್‌ಜಿ ಆಟೋ ಬಾಕ್ಸ್ ಜತೆಗೂ 2 ಮತ್ತು 3.6 ಲೀಟರ್ ವಿ6, ಆರು ಸ್ಪೀಡ್ ಡಿಎಸ್‌ಜಿ ಆಯ್ಕೆಗಳಲ್ಲಿ ಲಭ್ಯವಿದೆ.

New Skoda Superb Facelift Revealed

ನೂತನ ಸ್ಕೋಡಾ ಫೇಸ್‌ಲಿಫ್ಟ್ ವರ್ಷನ್ 16 ಹಾಗೂ 18 ಅಲಾಯ್ ವೀಲ್ ಜತೆಗೆ ಎರಡು ನೂತನ ಮೆಟ್ಯಾಲಿಕ್ ಕಲರ್ ಆಯ್ಕೆಗಳಲ್ಲಿ (Meteor Grey and Moon White) ಆಗಮನವಾಗಲಿದೆ.

New Skoda Superb Facelift Revealed

ಹಾಗಿದ್ದರೂ ಸ್ಕೋಡಾ ಕಾರು ಭಾರತವನ್ನು ಯಾವಾಗ ಪ್ರವೇಶಿಸಲಿದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲವಾದರೂ ಬಲ್ಲ ಮೂಲಗಳ ಪ್ರಕಾರ ವರ್ಷಾಂತ್ಯದಲ್ಲಿ ದೇಶಕ್ಕೆ ಎಂಟ್ರಿ ಕೊಡಲಿದೆ ಎಂಬ ಬಗೆಗಿನ ಮಾಹಿತಿ ಲಭಿಸಿದೆ.

ಸ್ಕೋಡಾ ಸೂಪರ್ಬ್

ಸ್ಕೋಡಾ ಸೂಪರ್ಬ್

More from DriveSpark

Article Published On: Thursday, April 4, 2013, 19:02 [IST]
English summary
Skoda Auto has released official images of its new Superb sedan ahead of its 2013 Shanghai Motor Show unveiling on 20th of this month. The Skoda Superb facelift features several updates made to the interior and to the exterior, while engine options remain the same.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+